*ಯೋಗೀಶ್ ಕುಂಭಾಸಿ
ಕುಂದಾಪುರ: ಕೆ.ಎಸ್. ಆರ್.ಟಿ.ಸಿ. ಬಸ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಉಪ್ಪುಂದ ಅಂಬಾಗಿಲಿನ ಶೀತಲ್ ಹೋಟೆಲ್ ಎದುರುಗಡೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಉಪ್ಪುಂದ ನಿವಾಸಿ ರಾಘವೇಂದ್ರ ಶೆಟ್ಟಿ(21).

ಘಟನೆಯ ವಿವರ : ಭಟ್ಕಳದಿಂದ ಕುಂದಾಪುರದ ಕಡೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಉಪ್ಪುಂದದ ವಿದ್ಯಾರ್ಥಿ ಆದ ರಾಘವೇಂದ್ರ ಶೆಟ್ಟಿ ಕುಂದಾಪುರ ಕಾಲೇಜಿಗೆ ತೆರಳಬೇಕೆಂದು ಬಸ್ ನಿಲ್ದಾಣದಲ್ಲಿ ನಿಂತಿದ್ದು. ಈ ಸಂದರ್ಭ ಕೆ.ಎಸ್.ಆರ್.ಟಿ.ಸಿ ಬಸ್ ಬರುವುದನ್ನು ಕಂಡು ಕೂಡಲೇ ಬಸ್ ಹತ್ತಲು ಮುಂದಾದನು. ಆಗ ವಿದ್ಯಾರ್ಥಿ ಬಸ್ ಮೆಟ್ಟಿಲೇರುತ್ತಿದ್ದವನೇ ಕಾಲು ಜಾರಿ ಕೆಳಗೆ ಬಿದ್ದಾಗ ಕುಂದಾಪುರದಿಂದ ಭಟ್ಕಳ ಕಡೆ ಸಾಗುತ್ತಿದ್ದ ಖಾಸಗಿ ಬಸ್ ಆದ ವಿಜಯಾನಂದ ವಿದ್ಯಾರ್ಥಿ ಮೈಮೇಲೆ ಹರಿದು ಹೋಗಿದ್ದು, ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ. ಕೂಡಲೇ ವಿದ್ಯಾರ್ಥಿಯನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪ್ಪಿದ್ದಾನೆ.
ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.
ಹೆಚ್ಚಿನ ವಿವರ…..
ಉಪ್ಪುಂದ: ಬಸ್ಸು ಚಾಲಕನ ಅವಾಂತರಕ್ಕೆ ವಿದ್ಯಾರ್ಥಿ ಬಲಿ: ವಿದ್ಯಾರ್ಥಿಗಳ ಆಕ್ರೋಷ: ಎಸ್ಪಿ ಭೇಟಿ
Comments are closed.