ಕರಾವಳಿ

ಉತ್ತಮ ಸೇವೆಗೈದ ಟ್ರಾಫಿಕ್ ವಾರ್ಡನ್ ಸ್ಕ್ವಾಡ್‌ನ ಮೂವರಿಗೆ ಇಲಾಖೆಯಿಂದ ಗೌರವ ಸಮ್ಮಾನ

Pinterest LinkedIn Tumblr

Traffic_warden_scoud_1

ಮಂಗಳೂರು, ಜು.28: ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಸಂಚಾರ ನಿರ್ವಹಣೆ ಸಂದರ್ಭ ಸ್ವಯಂ ಪ್ರೇರಿತರಾಗಿ ಉತ್ತಮ ಸೇವೆ ಮಾಡಿದ ಟ್ರಾಫಿಕ್ ವಾರ್ಡನ್ ಸ್ಕ್ವಾಡ್‌ನ ಮೂವರನ್ನು ಬುಧವಾರ ಮಂಗಳೂರು ಪೊಲೀಸ್ ಅಯುಕ್ತ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ 2015ರ ಅಕ್ಟೋಬರ್ 2ರಂದು ಟ್ರಾಫಿಕ್ ವಾರ್ಡನ್ ಸ್ಕ್ವಾಡ್‌ ಪ್ರಾರಂಭಿಸಲಾಗಿತ್ತು. ಈ ಟ್ರಾಫಿಕ್ ವಾರ್ಡನ್ ಸ್ಕ್ವಾಡ್‌ನ ಫ್ರಾನ್ಸಿಸ್ ಮೋನಿಸ್, ಕೆ.ಮುಹಮ್ಮದ್ ಹಾಗೂ ಅಪಘಾತ ಪ್ರಕರಣವೊಂದರಲ್ಲಿ ಉಂಟಾಗಿದ್ದ ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದ ತೋಟಗಾರಿಕಾ ಇಲಾಖೆಯ ಚಾಲಕ ಮೋಹನ್ ಅವರನ್ನು ಸನ್ಮಾನಿಸಲಾಯಿತು.

Traffic_warden_scoud_2 Traffic_warden_scoud_3 Traffic_warden_scoud_4 Traffic_warden_scoud_5 Traffic_warden_scoud_6 Traffic_warden_scoud_7 Traffic_warden_scoud_8 Traffic_warden_scoud_9

ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಎಂ., ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೆ.ಎಂ.ಶಾಂತರಾಜು, ಅಪರಾಧ ಮತ್ತು ಟ್ರಾಫಿಕ್ ವಿಭಾಗದ ಡಿಸಿಪಿ ಡಾ.ಸಂಜೀವ್ ಎಂ.ಪಾಟೀಲ್, ಟ್ರಾಫಿಕ್ ವಾರ್ಡ್‌ನ ಮುಖ್ಯಸ್ಥ ಜೋಯಿ ಗೋನ್ಸಾಲ್ವೆ, ಉದ್ಯಮಿ ಮೈಕಲ್ ಡಿಸೋಜ, ಕೇಂದ್ರ ಉಪವಿಭಾಗದ ಎಸಿಪಿ ಉದಯ ಎಂ.ನಾಯಕ್, ಟ್ರಾಫಿಕ್ ಉಪವಿಭಾಗದ ಎಸಿಪಿ ಕೆ.ತಿಲಕ್ಚಂದ್ರ ಸಹಿತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Comments are closed.