ಮಂಗಳೂರು,ಜು.27: ಕೆಎಸ್ಸಾರ್ಟಿಸಿ ಸ್ಟಾಫ್ ಎಂಡ್ ವರ್ಕರ್ಸ್ ಫೆಡರೆಶನ್ (ಎಐಟಿಯುಸಿ) ಅಶ್ರಯದಲ್ಲಿ ಇಂದು ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಎಸ್ಸಾರ್ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೆಶನ್ (ಎಐಟಿಯುಸಿ) ಮಂಗಳೂರು ವಿಭಾಗದ ಪ್ರ.ಕಾರ್ಯದರ್ಶಿ ಪ್ರವೀಣ್ ಕುಮಾರ್, ನಮ್ಮ ಬೇಡಿಕೆ ಈಡೇರುವವರೆಗೆ ನಾವು ಮುಷ್ಕರ ಹಿಂದೆಗೆದುಕೊಳ್ಳುವುದಿಲ್ಲ. ಖಾಸಗಿ ಲಾಬಿಗೆ ಮಣಿಯುತ್ತಿರುವ ರಾಜಕೀಯ ಪಕ್ಷಗಳು ನೌಕರರಿಗೆ ಸವಲತ್ತು ಸಿಗದಂತೆ ಮಾಡುತ್ತಿದೆ. ಮುಖ್ಯಮಂತ್ರಿಗಳು ಸಾರಿಗೆ ಸಚಿವರೊಂದಿಗೆ ಮಾತನಾಡಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಕೆಎಸ್ಸಾರ್ಟಿಸಿ ನೌಕರರ ಬೇಡಿಕೆಯನ್ನು ಸರಕಾರ ಈಡೇರಿಸದಿದ್ದರೆ ಮುಷ್ಕರ ಅನಿರ್ಧಿಷ್ಠಾವಧಿ ಮುಂದುವರೆಯಲಿದ್ದು ನೌಕರರ ಬೇಡಿಕೆ ಈಡೇರಿಕೆಗಾಗಿ ನಾಯಕರು ಜೈಲಿಗೆ ಹೋಗಲು ಸಿದ್ದರಿದ್ದೇವೆ, ಕೆಎಸ್ಸಾರ್ಟಿಸಿ ಸಂಸ್ಥೆಯಲ್ಲಿ ಈವರೆಗೆ 300 ಮುಷ್ಕರಗಳು ನಡೆದಿದೆ. ಕೆಎಸ್ಸಾರ್ಟಿಸಿ ನೌಕರರು ಬದುಕಿನ ಹೋರಾಟದಲ್ಲಿ ನಿರತರಾಗಿದ್ದಾರೆ. ಇದೀಗ ಹೊಟ್ಟಾಪಾಡಿಗಾಗಿ ಪ್ರತಿಭಟನೆ ನಡೆಯುತ್ತಿದೆ. ಈ ಮುಷ್ಕರವೇ ಕೊನೆಯದಾಗಬೇಕು. ಕಾರ್ಮಿಕರು ಸರಕಾರ ಮತ್ತು ಅಧಿಕಾರಿಗಳ ಯಾವುದೆ ಒತ್ತಡಕ್ಕೂ ಮಣಿಯುವುದಿಲ್ಲ . ಎಸ್ಮಾ ಜಾರಿಗೊಳಿಸಿದರೂ ಮುಷ್ಕರ ಹಿಂದೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಕೆಎಸ್ಸಾರ್ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೆಶನ್ (ಎಐಟಿಯುಸಿ) ಪುತ್ತೂರು ವಿಭಾಗದ ಪ್ರ.ಕಾರ್ಯದರ್ಶಿ ಮುಹಮ್ಮದ್, ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಪ್ರ.ಕಾರ್ಯದರ್ಶಿ ವಾಲ್ಟರ್ ಪಿಂಟೋಕೆಎಸ್ಸಾರ್ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೆಶನ್ (ಎಐಟಿಯುಸಿ) ವಿಜಯ್ ಕುಮಾರ್ ಮತ್ತಿತ್ತರ ಪ್ರಮುಖರು ಪಾಲ್ಗೊಂಡಿದ್ದರು.
Comments are closed.