ಕರಾವಳಿ

ಸರಣಿ ಅಪಘಾತ : ಬಾಲಕಿ ಮೃತ್ಯು – 10ಕ್ಕೂ ಹೆಚ್ಚು ಮಂದಿಗೆ ಗಾಯ

Pinterest LinkedIn Tumblr

kasargod_car_acdent_1

ಕಾಸರಗೋಡು : ಸರಣಿ ಅಪಘಾತವೊಂದರಲ್ಲಿ ಬಾಲಕಿಯೋರ್ವಳು ಮೃತಪಟ್ಟು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಕಾಸರಗೋಡ್ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡುವಿನಲ್ಲಿ ನಡೆದಿದೆ.

ಮೊಗ್ರಾಲ್ ಕಡವತ್ನ ಅಶ್ರಫ್ -ಸೆಮೀರಾ ದಂಪತಿಯ ಪುತ್ರಿ ಫಾತಿಮತ್ ನಿಹಾಲ್ (4) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಬಾಲಕಿ.

kasargod_car_acdent_2 kasargod_car_acdent_3

ಗಾಯಗೊಂಡವರು ಪೈವಳಿಕೆ ಕಾಯರ್ಕಟ್ಟೆಯ ಅಬ್ದುಲ್ ಖಾದರ್, ಅಶ್ರಫ್, ಸಮೀರಾ, ಬಾತೀಷಾ ಎಂದು ಗುರುತಿಸಲಾಗಿದೆ. ಒಟ್ಟು 10 ಮಂದಿ ಗಾಯ ಗೊಂಡಿದ್ದು, ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಉಪ್ಪಳದಿಂದ ಕಾಸರಗೋಡು ಮತ್ತು ಕಾಸರಗೋಡು ಕಡೆಯಿಂದ ಉಪ್ಪಳ ಕಡೆಗೆ ತೆರಳುತ್ತಿದ್ದ ಎರಡು ಕಾರುಗಳು ಮತ್ತು ಎರಡು ಆಟೊರಿಕ್ಷಾಗಳ ನಡುವೆ ಅಪಘಾತ ನಡೆದಿದೆ.

ಇನೋವಾ ಕಾರು ಬಂದ್ಯೋಡಿನಿಂದ ಉಪ್ಪಳಕ್ಕೆ ತೆರಳುತ್ತಿದ್ದ ಆಟೊಗೆ ಢಿಕ್ಕಿ ಹೊಡೆದಿದ್ದು , ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

ಗಂಭೀರ ಗಾಯಗೊಂಡ ಬಾಲಕಿ ನಿಹಾಲ್ಳನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

Comments are closed.