
ಮಂಗಳೂರು ,ಜು.21: ಎರಡು ವರ್ಷದ ಮಗುವೊಂದನ್ನು ಸೀರೆಯಲ್ಲಿ ಮಲಗಿಸಿ ನಗರದ ಬಿಜೈ ಚರ್ಚ್ ಸಮೀಪದ ಕಟ್ಟಡವೊಂದರ ವರಾಂಡದಲ್ಲಿ ಯಾರೋ ಬಿಟ್ಟು ಹೋಗಿದ್ದು, ಅನಾಥ ಸ್ಥಿತಿಯಲ್ಲಿದ್ದ ಮಗು ಇಂದು ಮುಂಜಾನೆ ಪತ್ತೆಯಾಗಿದೆ.
ಬೆಳಿಗ್ಗೆ ಕಟ್ಟಡದಲ್ಲಿನ ಕಚೇರಿ ಬಾಗಿಲು ತೆರೆಯುವ ವೇಳೆ ಮಗುವನ್ನು ಸೀರೆಯಲ್ಲಿ ಮಲಗಿಸಿರುವುದು ಕಟ್ಟಡದಲ್ಲಿದ್ದವರ ಗಮನಕ್ಕೆ ಬಂದಿದೆ. ತಕ್ಷಣ ಅವರು ನಗರದಲ್ಲಿ ಕಾರ್ಯಾಚರಿಸುತ್ತಿರುವ ಎನ್ ಜಿ ಒ ಸಂಸ್ಥೆ ವೈಟ್ ಡೌಸ್ ಗೆ ಮಾಹಿತಿ ನೀಡಿದ್ದು, ವೈಟ್ ಡೌಸ್ ಸಂಸ್ಥೆಯವರು ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾತ್ರವಲ್ಲದೇ ವೈಟ್ ಡೌಸ್ ಎನ್ ಜಿ ಒ ಸಂಸ್ಥೆಯ ಕಾರ್ಯಕರ್ತರು ಮಗುವನ್ನು ನಗರದ ಸರಕಾರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಘಟನೆ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.