ಕರಾವಳಿ

ಕುಂದಾಪುರದಲ್ಲಿ ಬೆಳ್ಳಂಬೆಳಿಗ್ಗೆ ಬೀದಿಗಿಳಿದ ಪೊಲೀಸರು: ಕರ್ಕಷ ಹಾರ್ನ್ ತೆರವು

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ನಗರದಲ್ಲಿ ಹಾಗೂ ಕುಂದಾಪುರ ಉಪವಿಭಾಗ ವ್ಯಾಪ್ತಿಯ ಹಲವೆಡೆ ಪೊಲೀಸರು ಬೆಳ್ಳಂಬೆಳಿಗ್ಗೆ ಬೀದಿಗಿಳಿದಿದ್ದರು. ಜಿಲ್ಲಾದ್ಯಂತ ಹೆಚ್ಚುತ್ತಿರುವ ಅಪಘಾತಗಳ ತಡೆಗೆ ಉಡುಪಿ ಜಿಲ್ಲಾ ಪೊಲೀಸರು ಜುಲೈ17 ರಿಂದ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ‘ಆಪರೇಶನ್ ಸುರಕ್ಷಾ’ ಕಾರ್ಯಕ್ರಮದಡಿಯಲ್ಲಿ ಗುರುವಾರ ಬೆಳಿಗ್ಗೆ ಕುಂದಾಪುರದಲ್ಲಿ ಬಸ್ಸುಗಳ ಕರ್ಕಷ ಹಾರ್ನ್ (ವ್ಯಾಕ್ಯೂಮ್ ಹಾರ್ನ್) ತೆರವು ಕಾರ್ಯಾಚರಣೆ ನಡೆಯಿತು.

 Kundapur_Vacume_Horn (2) Kundapur_Vacume_Horn (3) Kundapur_Vacume_Horn (4) Kundapur_Vacume_Horn (5) Kundapur_Vacume_Horn (6) Kundapur_Vacume_Horn (7) Kundapur_Vacume_Horn (8) Kundapur_Vacume_Horn (9) Kundapur_Vacume_Horn (10) Kundapur_Vacume_Horn (11) Kundapur_Vacume_Horn (12) Kundapur_Vacume_Horn (13) Kundapur_Vacume_Horn (14) Kundapur_Vacume_Horn (15) Kundapur_Vacume_Horn (16)

Kundapur_Vacume_Horn (1)

Kundapur_Vacume_Horn (17) Kundapur_Vacume_Horn (18) Kundapur_Vacume_Horn (19) Kundapur_Vacume_Horn (20) Kundapur_Vacume_Horn (21) Kundapur_Vacume_Horn (22) Kundapur_Vacume_Horn (23) Kundapur_Vacume_Horn (24) Kundapur_Vacume_Horn (25) Kundapur_Vacume_Horn (26)

ನಗರದಲ್ಲಿ ಕುಂದಾಪುರ ಪಿ.ಎಸ್.ಐ. ನಾಸೀರ್ ಹುಸೇನ್ ಹಾಗೂ ಸಿಬ್ಬಂದಿ ಲೋಕೇಶ್ ನೇತ್ರತ್ವ ಬೆಳಿಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ನಡೆಯಿತು. ಬೆಳಿಗ್ಗೆ ಕರ್ಕಷ ಹಾರ್ನ್ ಹಾಕಿ ಜನರಿಗೆ ಹಾಗೂ ಇತರೇ ವಾಹನಗಳಿಗೆ ಉಪಟಳ ನೀಡುತ್ತಿದ್ದ ಬಸ್ಸುಗಳ ಹಾರ್ನ್ ಕಿತ್ತು ಬಸ್ಸಿನವರಿಗೆ ಎಚ್ಚರಿಕೆ ನೀಡಿದರು. ಸುಮಾರು 50 ಕ್ಕೂ ಅಧಿಕ ಬಸ್ಸುಗಳ ಮೇಲೆ ಕೇಸು ಹಾಕಿ ದಂಡವನ್ನಿ ವಿಧಿಸಲಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆಯಿತು.

ಇನ್ನು ಗಂಗೊಳ್ಳಿ ಎಸ್.ಐ. ಸುಬ್ಬಣ್ಣ ನೇತ್ರತ್ವದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳಿಕಟ್ಟೆ ಸಮೀಪ ಈ ಕಾರ್ಯಾಚರಣೆ ನಡೆಯಿತು.

ಜನರ ಉತ್ತಮ ರೆಸ್ಫಾನ್ಸ್…
ಕರ್ಕಷ ಶಬ್ದದ ಹಾರ್ನ್ ಮೂಲಕ ಜನರಿಗೆ ಹಾಗೂ ಇತರೇ ವಾಹನ ಸವಾರರಿಗೆ ಕಿರಿಕ್ ಮಾಡುವ ಬಸ್ಸುಗಳು ಹಾಗೂ ಇತರೇ ವಾಹನಗಳಿಂದಾಗುವ ಸಮಸ್ಯೆ ಬಗ್ಗೆ ಜನರು ಹಲವು ಬಾರೀ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿಂದೆ ಮಂಗಳೂರು ಹಾಗೂ ಉಡುಪಿಯಲ್ಲಿ ಹಲವು ಬಾರೀ ಈ ಕಾರ್ಯಾಚರಣೆ ನಡೆದಿತ್ತು. ಕುಂದಪುರದಲ್ಲಿ ಹಾಗೂ ಇತರೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಗೆ ಜನರು ಪ್ರಶಂಸೆ ವ್ಯಕ್ತಪಡಿಸಿದರು.

Comments are closed.