ಉಡುಪಿ: ನೈಜಿರಿಯಾದಿಂದ ವಿದ್ಯಾಭ್ಯಾಸದ ಸಲುವಾಗಿ ಉಡುಪಿಯ ಮಣಿಪಾಲಕ್ಕೆ ಬಂದು ವೀಸಾ ಅವಧಿ ಮುಗಿದರೂ ಕೂಡ ಕಾನೂನುಬಾಹಿರವಾಗಿ ಮಣಿಪಾಲದಲ್ಲೇ ನೆಲೆಸಿದ್ದ ನೈಜೀರಿಯಾ ಪ್ರಜೆಯನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೈಜೀರಿಯಾ ರಾಷ್ಟ್ರದ ಆಗಸ್ಟೀನ್ ಜ್ಯೂನಿಯರ್ ಉನಾಡಿಕೆ ಎನ್ನುವಾತ ಆಗಸ್ಟ್ 24-2011ರಂದು ಮುಂಬೈ ವಿಮಾನ ನಿಲ್ದಾಣದ ಮುಖಾಂತರ ಭಾರತಕ್ಕೆ ಬಂದು ಮಣಿಪಾಲ ಕಾಲೇಜೊಂದರಲ್ಲಿ ಬಿ ಪಾರ್ಮ ವ್ಯಾಸಂಗ ಮಾಡಿಕೊಂಡಿದ್ದು,ಈ ವ್ಯಕ್ತಿಯ ವೀಸಾ ಅವಧಿಯು ಕಳೆದ ಎರಡು ವರ್ಷ ಹಿಂದೆ ಅಂದರೇ ದಿನಾಂಕ 25/07/2014ರಂದು ಮುಕ್ತಾಯವಾಗಿದ್ದು, ರಹದಾರಿ ಪತ್ರ ಕಳೆದ ವರ್ಷ ಅಂದರೇ ದಿನಾಂಕ 22/10/2015 ರಂದು ಮುಕ್ತಾಯವಾಗಿರುತ್ತದೆ. ಸದ್ರಿ ವಿದೇಶಿಯರು ದೇಶ ಬಿಟ್ಟು ಹೋಗದೇ ಮತ್ತು ತನ್ನ ವಾಸ್ತವ್ಯವನ್ನು ಮುಂದುವರಿಸುವರೇ ಸಂಬಂಧಪಟ್ಟ ವಿದೇಶಿಯರ ನೊಂದಾಣಾಧಿಕಾರಿಯವರ ಕಚೇರಿಗೆ ಅರ್ಜಿ ಮತ್ತು ದಾಖಲಾತಿಗಳನ್ನು ಸಲ್ಲಿಸದೇ ಮಣಿಪಾಲದಲ್ಲಿ ವಾಸ್ತವ್ಯವನ್ನು ಮಾಡಿಕೊಂಡಿರುವ ಬಗ್ಗೆ ಪೊಲೀಸರೊಗೆ ಬಂದ ಖಚಿತ ಮಾಹಿತಿಯಂತೆ ಆತನನ್ನು ವಶಕ್ಕೆ ಪಡೆಯಲಾಗಿದೆ.
ಭಾರತದಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೊಂದಿ ಮತ್ತು ಕಾನೂನು ಬಾಹಿರವಾಗಿ ವೀಸಾ ಮತ್ತು ರಹದಾರಿ ಪತ್ರದ ನಿಯಮಾವಳಿಗಳನ್ನು ಉಲ್ಲಿಂಘಿಸಿರುವುದರಿಂದ, ಈ ವ್ಯಕ್ತಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸ್ ಅಧೀಕ್ಷಕ ಕೆ.ಅಣ್ಣಾಮಲೈ ಅವರ ನಿರ್ದೇಶನದಂತೆ ಮಣಿಪಾಲ ಎಸ್.ಐ. ಅವರಿಗೆ ನೀಡಿದ ಸೂಚನೆಯಂತೆ ಕಾರ್ಯಾಚರಣೆ ನಡೆಸಿ ಆರೋಪಿ ಆಗಸ್ಟೀನ್ ಜ್ಯೂನಿಯರ್ ಉನಾಡಿಕೆ ಎಂಬಾತನನ್ನು ದಸ್ತಗಿರಿ ಮಾಡಿ ಮಣಿಪಾಲ ಠಾಣೆಯಲ್ಲಿ ವಿದೇಶಿಯರ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಆಗಸ್ಟ್ 3 ರವರೆಗೆ ನ್ಯಾಯಾಂಗ ಬಂದನಕ್ಕೆ ಒಳಪಡಿಸಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ, ಐಪಿಎಸ್ ರವರ ನಿರ್ದೇಶನದಂತೆ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕ ಕೆ.ಕೆ. ರಾಮಕೃಷ್ಣ, ಎಎಸ್ಐ ರಾಮದಾಸ್ ಶೆಟ್ಟಿ, ಹೆಡ್ ಕಾನ್ಸ್ಟೇಬಲ್ ಅಮರ್ ಕುಮಾರ್ ಎನ್ನುವವರು ಮಾಹಿತಿ ಸಂಗ್ರಹಿಸಿದ್ದು, ಮಣಿಪಾಲ ಪೊಲೀಸ್ ಠಾಣಾ ಎಸ್.ಐ. ಎಸ್.ವಿ. ಗಿರೀಶ್, ಹೆಡ್ ಕಾನ್ಸ್ಟೇಬಲ್ ಶೈಲೇಶ್, ಸಿಬ್ಬಂದಿ ಸಂತೋಷ ಶೆಟ್ಟಿ ಮೊದಲಾದವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
Comments are closed.