ಉಡುಪಿ: ಕಾಜಾರಗುತ್ತು ಬಳಿ ಜು. ಸೋಮವಾರ ಬೈಕಿಗೆ ಬಸ್ಸು ಢಿಕ್ಕಿ ಹೊಡೆದಿದ್ದು, ಸವಾರ ಕರ್ತವ್ಯ ನಿರತ ಪೊಲೀಸ್ ಪೇದೆ ಶಾಮನೂರು ಬಾಷಾ ಮುಲ್ಲಾ (26) ಮೃತಪಟ್ಟಿದ್ದಾರೆ.

ಅವರು ಬೈಕಿನಲ್ಲಿ ತೆರಳುತ್ತಿದ್ದಾಗ ಖಾಸಗಿ ಬಸ್ಸು ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯು ವೇಳೆ ಮೃತಪಟ್ಟಿದ್ದಾರೆ. ಮೂಲತಃ ಬಾಗಲಕೋಟೆಯವರಾಗಿದ್ದ ಅವರು 2011ರಲ್ಲಿ ಪೊಲೀಸ್ ಸೇವೆಗೆ ಸೇರಿದ್ದು, ಕಳೆದ ನಾಲ್ಕು ವರ್ಷಗಳಿಂದ ಹಿರಿಯಡಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ, ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ್, ಇನ್ಸ್ಪೆಕ್ಟರ್ಸ್, ಹಿರಿಯಡಕ ಎಸ್ಐ ಸಹಿತ ಹೆಚ್ಚಿನ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮನೆಮಂದಿ ಬಾಗಲಕೋಟೆಯಿಂದ ಹೊರಟಿದ್ದಾರೆ.
Comments are closed.