
ಮಂಗಳೂರು : ಮಂಗಳೂರು ಉಪವಿಭಾಗದ ನೂತನ ಎಸಿಪಿಯಾಗಿ ಶಿವಮೊಗ್ಗದ ಶಿಕಾರಿಪುರದಲ್ಲಿ ಡಿವೈಎಸ್ಪಿಯಾಗಿದ್ದ ಶೃತಿ ಎನ್.ಎಸ್.ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಮಡಿಕೇರಿ ಮೂಲದವರಾದ ಶೃತಿ ಅವರು, ಈ ಹಿಂದೆ ಶಿವಮೊಗ್ಗದ ಶಿಕಾರಿಪುರದಲ್ಲಿ ದಕ್ಷ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದು ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಯುವ ಅಧಿಕಾರಿಯಾಗಿರುವ ಶೃತಿ ಅವರು ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಮುಗಿಸಿದ್ದು ಜಿಲ್ಲೆಯ ನಂಟು ಹೊಂದಿದ್ದಾರೆ.
ಇದೀಗ ದಕ್ಷಿಣ ಉಪವಿಭಾಗದ ಅಧೀನಕ್ಕೆ ಬರುವ ಪಾಂಡೇಶ್ವರ, ಮಂಗಳೂರು ಗ್ರಾಮಾಂತರ, ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗೆ ಎಸಿಪಿಯಾಗಿ ಅವರು ಕರ್ತವ್ಯ ನಿರ್ವಹಿಸಲ್ಲಿದ್ದಾರೆ.
Comments are closed.