ಕರಾವಳಿ

ಇಂಜಿನಿಯರಿಂಗ್ ಪಧವೀದರ ಭರತ್ ರಾಜ್ ಅರಸರಿಗೆ ಕ್ಷತ್ರೀಯ ಮಠದ ಪೀಠಾಧಿಪತಿ ದೀಕ್ಷೆ

Pinterest LinkedIn Tumblr

ಉಡುಪಿ: ಚಿಕ್ಕಮಗಳೂರು ಮೂಲದ ಇಂಜಿನಿಯರಿಂಗ್ ಪಧವೀದರ ಆಗಿರುವ, ಧಾರ್ಮಿಕ ಕ್ರೀಯಾಶೀಲತೆಯನ್ನು ಹೊಂದಿರುವ ಭರತ್ ರಾಜ್ ಅರಸ್ ಅವರಿಗೆ ಇಂದು ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆಯನ್ನು ನೀಡಿದ್ದಾರೆ. ಸಮಸ್ತ ಕ್ಷತ್ರೀಯ ವಂಶಕ್ಕೆ ಸೇರಿದಂತೆ ಮಠವೊಂದು ಸ್ಥಾಪನೆಯಾಗಲಿದ್ದು ಆ ಮಠಕ್ಕೆ ಸ್ವಾಮೀಜಿಯನ್ನು ನಿಯೋಜಿಸಲು ತೀರ್ಮಾನಿಸಿದ ಹಿನ್ನಲೆಯಲ್ಲಿ ಅತ್ಯಂತ ಕ್ರೀಯಾಶೀಲರಾಗಿರುವ ಹಾಗೂ ಧಾರ್ಮಿಕತೆಯಲ್ಲಿ ಉತ್ಸಾಹರಾಗಿರುವ ಭರತ್ ರಾಜ್ ಅರಸ್ ಅವರನ್ನು ಆಯ್ಕೆ ಮಾಡಿ ಇಂದು ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆಯ ಧಾರ್ಮಿಕ ವಿಧಿ ವಿಧಾನವನ್ನು ಪೂರೈಸಿದರು. ನೂತನ ಸ್ವಾಮೀಜಿಗೆ ವಿಶ್ವಾಧಿರಾಜ ತೀರ್ಥ ಎಂದು ನಾಮಕರಣ ಮಾಡಲಾಗಿದೆ.

Kshatriya_Pita_Bharataraj (1) Kshatriya_Pita_Bharataraj (2)

ಕ್ಷತ್ರಿಯ ಸಮಾಜದ ಕೆಲವು ಹಿರಿಯರ ಆಗ್ರಹದಂತೆ ಸಮಸ್ತ ಕ್ಷತ್ರೀಯ ವಂಶಕ್ಕೆ ಸಂಬಂಧಿಸಿದ ಮಠವೊಂದನ್ನು ಸ್ಥಾಪಿಸಿ ಅದಕ್ಕೊಂದು ಸ್ವಾಮೀಜಿಯವರನ್ನು ನಿಯೋಜಿಸಲು ತೀರ್ಮಾನಿಸಿದ ಹಿನ್ನಲೆಯಲ್ಲಿ ಇದಕ್ಕೆ ಸಂಬಂಧ ಪೇಜಾವರ ಶ್ರೀಗಳಿಂದ ಸ್ವಾಮೀಜಿಯ ನೇಮಕ ಹಾಗೂ ಸನ್ಯಾಸ ದೀಕ್ಷೆಯನ್ನು ನೀಡುವ ಧಾರ್ಮಿಕ ವಿಧಿ ವಿಧಾನವನ್ನು ಪೂರೈಸಲಾಗಿದೆ. ಚಕ್ರವರ್ತಿಗಳಲ್ಲಿ ನಿಯಾಮಕನಾಗಿರುವ ಭಗವಂತನ ರಾಜರಾಜೇಶ್ವರ ಎಂಬ ರೂಪದ ಹೆಸರಿನ ’ ಶ್ರೀ ರಾಜರಾಜೇಶ್ವರ ಸಂಸ್ಥಾನ ಎಂದು ಈ ಮಠಕ್ಕೆ ಅಧ್ಯಯನ ಶೀಲ, ಉತ್ಸಾಹಿ, ಧಾರ್ಮಿಕ ಅಭಿರುಚಿಯನ್ನು ಹೊಂದಿರುವ ಚಿಕ್ಕಮಗಳೂರು ಮೂಲದ ಭರತ್ ರಾಜೇ ಅರಸ್ ಅವರನ್ನು ನಿಯೋಜಿಸುವ ಹಿನ್ನಲೆಯಲ್ಲಿ ಅವರಿಗೆ ದೀಕ್ಷೆ ನೀಡುವ ಧಾರ್ಮಿಕ ವಿಧಿ ವಿಧಾನ ಉಡುಪಿಯ ಕೃಷ್ಣ ಮಠದಲ್ಲಿ ನಡೆಯಿತು. ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಧಾರ್ಮಿಕ ವಿಧಿ ವಿಧಾನವನ್ನು ಪೂರೈಸಿದರು. ಮಂಗಳೂರಿನ ಹೇಮರಾಜೇ ಅರಸ್ ಹಾಗೂ ಎಸ್.ಪಿ. ಜ್ಯೋತಿ ದಂಪತಿಗಳ ಪುತ್ರರಾದ ಭರತ್ ರಾಜೇ ಅರಸ್ ಈಗಾಗಲೇ ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು , ಧರ್ಮಪ್ರಸಾರದ ಅಭಿರುಚಿಯನ್ನು, ಸಾಮರ್ಥ್ಯವನ್ನೂ ಹಾಗೂ ಶಾಸ್ತ್ರ ಜ್ಞಾನವನ್ನು ಹೊಂದಿದ್ದಾರೆ. ಇವರ ಸನ್ಯಾಸ ದೀಕ್ಷೆಗೆ ಹೆತ್ತವರ ಸಮ್ಮತಿ ಇದ್ದು ಸನ್ಯಾಸ ದೀಕ್ಷೆ ಹಾಗೂ ಪೀಠ ಪ್ರತಿಷ್ಟೆಯ ವಿಧಿ ವಿಧಾನ ನಡೆಯಿತು.

ಕ್ಷತ್ರೀಯ ಪೀಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡಿರುವ ಭರತ್ ರಾಜೇ ಅರಸ್ ೩೪ ಹರೆಯದ ಇ ಎಂಡ್ ಸಿ ಇಂಜೀನಿಯರಿಂಗ್ ಪಧವೀಧರರಾಗಿದ್ದಾರೆ. ಮೂಲತ: ಚಿಕ್ಕಮಗಳೂರಿನವರಾದ ಭರತ್ ರಾಜೇ ಅರಸ್ ೧೯೮೨ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಮಂಗಳೂರು ಎಂಸಿ‌ಎಎಪ್ ನಲ್ಲಿ ಉದ್ಯೋಗಿಯಾಗಿದ್ದರೆ. ತಾಯಿ ಜ್ಯೋತಿ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ. ಭರತ್ ರಾಜೇ ಅರಸ್ ಪ್ರಾಧಮಿಕ, ಪ್ರೌಢ ಹಾಗೂ ಪಿಯು‌ಇಸಿ ಶಿಕ್ಷಣ ಮಂಗಳೂರಿನಲ್ಲಿ ಪೂರೈಸಿದರೆ ಬಳಿಕ ಮಣಿಪಾಲದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದರು. ಮಥುರಾ ಗೋವರ್ಧನದಲ್ಲಿ ಶ್ರೀಮದ್ ಭಾಗವತ ವಿದ್ಯಾಪೀಠದಲ್ಲಿ ಶಾಸ್ತ್ರಧ್ಯಯನ ನಡೆಸಿದ ಇವರು ಇಸ್ಕಾನ್ ನಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರಾಧ್ಯನ ನಡೆಸುತ್ತಿರುವ ಅವಿವಾಹಿತ ಭರತ್ ರಾಜೇ ಅರಸ್ ಅವರಿಗೆ ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆಯನ್ನು ನೀಡಿದ್ದು ಇದರ ಬಳಿಕ ಇವರ ಹೆಸರನ್ನು ವಿಶ್ವಾಧಿರಾಜ ತೀರ್ಥ ಎಂದು ನಾಮಕರಣ ಮಾಡಲಾಗಿದೆ.

ಗೋ ಸಂರಕ್ಷಣೆಯಲ್ಲಿ ಅತೀವ ಆಸಕ್ತಿ ಇರುವ ನೂತನ ಸ್ವಾಮೀಜಿಗಳಿಗಳು ಕ್ಷತ್ರಿಯ ಪೀಠವನ್ನು ಏರಲಿದ್ದು ಒಟ್ಟಿನಲ್ಲಿ ಕ್ಷತ್ರೀಯ ಕುಲಕ್ಕೆ ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆಯ ಮೂಲಕ ಸ್ವಾಮೀಜಿಯವರನ್ನು ನೇಮಕ ಮಾಡಿದ್ದಾರೆ.

Comments are closed.