ಕರಾವಳಿ

ಮಂಗಳಾದೇವಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜ್ಯಾರಿ : ರಣರಾಗಿಣಿಗೆ ದೊರೆತ ಪ್ರಥಮ ವಿಜಯ

Pinterest LinkedIn Tumblr

Mangala_devi_Templ1

ಮಂಗಳೂರು : ಇತಿಹಾಸ ಪ್ರಸಿದ್ಧ ಮಂಗಳೂರಿನ ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ.ದೇವಸ್ಥಾನದ ಪಾವಿತ್ರ್ಯವನ್ನು ಉಳಿಸಲು ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವ ಬಗ್ಗೆ ಗ್ರಾಮ ದೇವತೆಯಾದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ರಣರಾಗಿಣಿ ಶಾಖೆಯ ವತಿಯಿಂದ ಮನವಿಯನ್ನು ನೀಡಲಾಗಿತ್ತು.

ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ರಮಾನಾಥ ಹೆಗ್ಡೆಯವರು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಂಡಳಿಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದರು. ಅದೇ ಪ್ರಕಾರ ಮಂಡಳಿಯ ಸಭೆಯಲ್ಲಿ ಎಲ್ಲಾ ಸದಸ್ಯರು ಈ ಮನವಿಗೆ ತಮ್ಮ ಸಹಮತವನ್ನು ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿತು. ಇದೀಗ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿದ ಬಗ್ಗೆ ಫಲಕವನ್ನು ಮಂಡಳಿಯ ವತಿಯಿಂದ ಬರೆಸಿ ಹಾಕಲಾಗಿದೆ.

Mangala_devi_Templ2

ದೇವಸ್ಥಾನದ ಪಾವಿತ್ರ್ಯವನ್ನು ಉಳಿಸಲು ರಣರಾಗಿಣಿ ಶಾಖೆಯ ವತಿಯಿಂದ ಆರಂಭಿಸಲಾದ ಈ ಅಭಿಯಾನಕ್ಕೆ ದೊರೆತ ಪ್ರಥಮ ಯಶಸ್ಸು ಇದಾಗಿದೆ. ಮುಂದೆ ಮಂಗಳೂರು ನಗರದ ಎಲ್ಲಾ ಪ್ರಸಿದ್ಧ ದೇವಸ್ಥಾನಗಳಲ್ಲೂ ಸಾತ್ತ್ವಿಕ ಉಡುಪುಗಳನ್ನು ಧರಿಸಿ ಬರುವ ಬಗ್ಗೆ ಮನವಿಯನ್ನು ನೀಡುವ ಬಗ್ಗೆ ನಿಯೋಜನೆಯನ್ನು ಮಾಡಲಾಗಿದೆ.

ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿಯು ಇದೇ ರೀತಿ ಕ್ರಮಕೈಗೊಂಡು ರಣರಾಗಿಣಿಯ ಧರ್ಮರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿದರೆ ದೇವಸ್ಥಾನಗಳ ಪಾವಿತ್ರ್ಯವು ಉಳಿದು ಸಮಾಜಕ್ಕೆ ಇದರ ಪೂರ್ಣ ಲಾಭವಾಗುವುದು ಎಂದು ರಣರಾಗಿಣಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.