
ಮಂಗಳೂರು,ಜುಲೈ.09 : ವಯೋ ವೃದ್ಧರಿಗೆ ಅನುಕೂಲವಾಗುವಂತೆ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ 2 ಎಸ್ಕಲೇಟರ್‌ಗಳನ್ನು ಅಳವಡಿಸಲಾಗಿದ್ದು, ಇದರ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹಾಸನ-ಬೆಂಗಳೂರು ರೈಲು ಮಾರ್ಗದ ಕಾಮಗಾರಿಗೆ ಈ ಸಾಲಿನ ಬಜೆಟ್‌ನಲ್ಲಿ ಅನುದಾನ ಒದಗಿಸಿದ್ದು ಕೆಲಸ ವೇಗವನ್ನು ಪಡೆದುಕೊಂಡಿದೆ. ಸೋಲೂರು ಸಮೀಪ ಭೂಸ್ವಾದೀನ ಸಂಬಂಧ ಇದ್ದ ಸಮಸ್ಯೆ ನಿವಾರಣೆಯಾಗಿದ್ದು, ಕಾಮಗಾರಿ ಮಾರ್ಚ್‌ನಲ್ಲಿ ಮುಗಿಯಲಿದೆ ಎಂದು ಅವರು ಹೇಳಿದರು.

ಶೋರ್ನೂರು-ಮಂಗಳೂರು ರೈಲು ಮಾರ್ಗದ ವಿಧ್ಯುದ್ದೀಕರಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಚೆರ್ವತ್ತೂರು ವರೆಗೆ ವಿದ್ಯುದೀಕರಣ ಕಾಮಗಾರಿ ಮುಗಿದಿದ್ದು ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದು ಪಣಂಬೂರು ವರೆಗೆ ಮುಂದುವರಿಯಲಿದೆ ಎಂದು ಪಾಲ್ಗಾಟ್ ರೈಲ್ವೇ ವಿಭಾಗದ ವಿಭಾಗೀಯ ಪ್ರಬಂಧಕ ನರೇಶ್ ಲಾಲ್‌ವಾನಿ ಅವರು ತಿಳಿಸಿದರು.
ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದಕ್ಷಿಣ ರೈಲ್ವೆ ಡಿ.ಆರ್.ಎಂ.ನರೇಶ್ ಲಾಲ್ ವಾನಿ, ಇಂಜಿನಿಯರ್ ಆರುಣ್, ಪಾಲ್ಘಾಟ್ ವಿಭಾಗದ ಭದ್ರತಾ ಅಯುಕ್ತ ರಘುವೀರ್ ಮೊದಲಾದವರು ಉಪಸ್ಥಿತರಿದ್ದರು.
Comments are closed.