
ಕೋಣಾಜೆ, ಜು.4: ಕೋಣಾಜೆ ಸಮೀಪದ ಮನೆಯ ಹಿಂಬದಿಯಲ್ಲಿ ಉಂಟಾಗಿದ್ದ ಭೂಕುಸಿತವನ್ನು ಸರಿಪಡಿಸುವ ವೇಳೆ ಬೃಹತ್ ಗಾತ್ರದ ಸುರಂಗವೊಂದು ಪತ್ತೆಯಾಗಿದ್ದು, ಸ್ಥಳಿಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಪುಳಿಂಚಾಡಿ ಸದಾಶಿವ ಎಂಬವರ ಮನೆಯ ಹಿಂಬದಿಯಲ್ಲಿ ನಿನ್ನೆ ಬೆಳಗ್ಗೆ ಭಾರೀ ಶಬ್ಧ ಕೇಳಿಸಿದ ಹಿನ್ನೆಲೆ ಸದಾಶಿವ ಅವರ ಪತ್ನಿ ಪ್ರಭಾವತಿ ಮನೆಯ ಹಿಂಬದಿ ನೋಡಿದಾಗ ಭೂಕುಸಿತವಾಗಿರುವ ಬಗ್ಗೆ ಅರಿವಾಗಿದೆ. ಮನೆಯಲ್ಲಿ ಪ್ರಭಾವತಿ ಒಬ್ಬರೇ ಇದ್ದರು.
ಭೂಕುಸಿತದಿಂದ ಮನೆಗೆ ಹಾನಿಯಾಗುವ ಸಂಭವವಿದ್ದುದ್ದರಿಂದ ತಕ್ಷಣ ಸ್ಥಳೀಯರು ಜೆಸಿಬಿ ತರಿಸಿ ಇದನ್ನು ಸರಿಪಡಿಸುವ ವೇಳೆ ಭೂಕುಸಿತ ಉಂಟಾದ ಜಾಗದಲ್ಲಿ ಬೃಹತ್ ಗಾತ್ರದ ಸುರಂಗವೊಂದು ಪತ್ತೆಯಾಗಿದೆ.ಇದೀಗ ಈ ಮನೆ ಅಪಾಯದ ಅಂಚಿನಲ್ಲಿದೆ. ಜೊತೆಗೆ ಅಕ್ಕಪಕ್ಕದಲ್ಲಿನ ಮನೆಗಳಿಗೂ ಹಾನಿಯಾಗುವ ಭೀತಿ ಉಂಟಾಗಿದೆ.
Comments are closed.