ಅಂತರಾಷ್ಟ್ರೀಯ

ಮುಂದಿನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಹೆಸರು ಏನು ಗೊತ್ತಾ..? ಅದರ ವಿಶೇಷತೆ ಎಲ್ಲವೂ ಇಲ್ಲಿದೆ ಓದಿ..

Pinterest LinkedIn Tumblr

AndroidNougat

ವಾಷಿಂಗ್ಟನ್: ಮುಂದಿನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಹೆಸರು ಏನಿರಲಿದೆ ಎನ್ನುವ ಕುತೂಹಲಕ್ಕೆ ಗೂಗಲ್ ತೆರೆ ಎಳೆದಿದ್ದು, ನೂಗಟ್ ಹೆಸರಿಟ್ಟಿದೆ.

ಮಾರ್ಷ್‍ಮೆಲೋ ಬಂದ ನಂತರ ಮುಂದಿನ ‘ಎನ್’ ಹೆಸರಿನಿಂದ ಆರಂಭವಾಗಲಿರುವ ಆಪರೇಟಿಂಗ್ ಸಿಸ್ಟಂಗೆ ನಟ್‍ಕಟ್, ನೆಯಪ್ಪನ್ ಹೆಸರು ಇಡಲು ಭಾರತೀಯರು ಒತ್ತಾಯಿಸಿದರೂ ಗೂಗಲ್ ಇದಕ್ಕೆ ಯುರೋಪಿನ ಜನಪ್ರಿಯ ತಿಂಡಿ ನೂಗಟ್ ಹೆಸರನ್ನು ಇಟ್ಟಿದೆ.

ಹೊಸ ಓಎಸ್‍ನಲ್ಲಿ ಏನಿರುತ್ತೆ?
ಒಂದೇ ಸಮಯದಲ್ಲಿ ಒಂದೇ ವಿಂಡೋದಲ್ಲಿ 2 ಆ್ಯಪ್ ರನ್ ಆಗುವಂತಹ ವಿಶೇಷತೆ. ಬ್ಯಾಟರಿ ಉಳಿತಾಯ ಜೊತೆಗೆ ಹೈ ಲೆವೆಲ್ ಗ್ರಾಫಿಕ್ಸ್ ಸಪೋರ್ಟ್ ಮಾಡಲಿದೆ. ಅಷ್ಟೇ ಅಲ್ಲದೇ ನೋಟಿಫಿಕೇಶನ್/ಮೆಸೇಜ್‍ಗಳು ಬಂದ ಕೂಡಲೇ ಅಪ್ ತೆರೆಯದೇ ಅಲ್ಲೇ ರಿಪ್ಲೈ ಮಾಡು ವಿಶೇಷತೆಯನ್ನು ಸೇರಿಸಲಿದೆ ಎಂದು ಹೇಳಲಾಗುತ್ತಿದೆ.

ರಿಲೀಸ್ ಯಾವಾಗ?
ಮೂರನೇ ತ್ರೈಮಾಸಿಕದಲ್ಲಿ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಗೂಗಲ್ ಬಿಡುಗಡೆ ಮಾಡಲಿದ್ದು, ಟೆಕ್ ತಾಣಗಳು ವರದಿ ಮಾಡುವಂತೆ ಸೆಪ್ಟೆಂಬರ್‍ನಲ್ಲಿ ಗ್ರಾಹಕರಿಗೆ ಸಿಗುವ ಸಾಧ್ಯತೆಯಿದೆ.

ಅಪ್‍ಡೇಟ್ ಯಾವಾಗ?
ಗೂಗಲ್ ನೆಕ್ಸಸ್ ಮತ್ತು ಮೋಟೋ ಜಿ ಸ್ಮಾರ್ಟ್‍ಫೋನ್‍ಗಳಲ್ಲಿ ಪ್ಯೂರ್ ಆಂಡ್ರಾಯ್ಡ್ ಓಎಸ್ ಇರುತ್ತದೆ. ಹೀಗಾಗಿ ಈ ಗ್ರಾಹಕರು ಹೊಸ ಓಎಸ್ ಬಿಡುಗಡೆಯಾದ ತಕ್ಷಣ ಅಪ್‍ಡೇಟ್ ಮಾಡಿಕೊಳ್ಳಬಹುದು. ಇದು ಹೊರತು ಪಡಿಸಿ ಉಳಿದ ಕಂಪೆನಿಗಳು ಆಂಡ್ರಾಯ್ಡ್ ಓಎಸ್ ಬಳಸುತ್ತಿದ್ದರೂ ಅದಕ್ಕೆ ಅವರದೇ ಅದ ಕೆಲ ವಿಶೇಷತೆಗಳನ್ನು ಸೇರಿಸುತ್ತಾರೆ. ಹೀಗಾಗಿ ಗೂಗಲ್ ಅಪ್‍ಡೇಟ್ ಕೊಟ್ಟ ನಂತರ ಈ ಕಂಪೆನಿಗಳು ಅಪ್‍ಡೇಟ್ ಕೊಡುವಾಗ ಕೆಲ ತಿಂಗಳು ಕಳೆದಿರುತ್ತದೆ.

ಚಾಕ್ಲೇಟ್ ಫ್ಲೇವರ್:
ಗೂಗಲ್ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂಗಳಿಗೆ ಚಾಕಲೇಟ್ ಫ್ಲೇವರ್‍ಗಳ ಹೆಸರನ್ನು ಇಡುತ್ತದೆ. ಅಷ್ಟೇ ಅಲ್ಲದೇ ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳ ಅನುಸರವಾಗಿ ತನ್ನ ಆಪರೇಟಿಂಗ್ ಸಿಸ್ಟಂಗಳ ಹೆಸರನ್ನು ಇರಿಸಿಕೊಂಡು ಬರುತ್ತದೆ. ಅಸ್ಟ್ರೋ, ಕಪ್ ಕೇಕ್, ಡೋನಟ್, ಏಕ್ಲೇರ್, ಫ್ರಾಯ್, ಜಿಂಜರ್‍ಬ್ರಿಡ್, ಹಾನಿಕಾಂಬ್, ಐಸ್‍ಕ್ರೀಂ ಸ್ಯಾಂಡ್‍ವಿಚ್,ಜೆಲ್ಲಿ ಬೀನ್, ಕಿಟ್‍ಕ್ಯಾಟ್, ಲಾಲಿಪಾಪ್, ಮಾರ್ಶ್‍ಮಲೋ ಈಗ ನೂಗಟ್ ಹೆಸರನ್ನು ಇರಿಸಿದೆ.

Comments are closed.