ಉಡುಪಿ: ಕಾಂಗ್ರೆಸ್ ಸರ್ಕಾರ ಗೊಂದಲದ ಗೂಡಾಗಿದೆ. ಅತೃಪ್ತ ಶಾಸಕರನ್ನು ಸಮಾಧಾನಿಸುವಲ್ಲೇ ಸಿದ್ದರಾಮಯ್ಯ ಕಾಲ ಕಳೆಯುತ್ತಿದ್ದಾರೆ. ಬಿಜೆಪಿಗೆ ಅತೃಪ್ತ ಶಾಸಕರನ್ನು ಸೆಳೆಯುವ ಯಾವುದೇ ಉದ್ದೇಶವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀನಿವಾಸ್ ಪ್ರಸಾದ್ ಅವರ ಬಗ್ಗೆ ಗೌರವವಿದೆ. ಅವರೊಬ್ಬರು ಅನುಭವಿ ರಾಜಕಾರಣಿ. ಸಂಪುಟದಿಂದ ಕೈಬಿಟ್ಟಾಗ ಅವರಿಗೆ ಸಾಂತ್ವಾನ ಹೇಳಿದ್ದೇವೆ. ಪಕ್ಷ ಬಿಟ್ಟು ಬಂದ್ರೆ ಚುನಾವಣೆಯ ವೇಳೆಯಲ್ಲಿ ಸೇರ್ಪಡೆ ಮಾಡುವ ಬಗ್ಗೆ ನಿರ್ದರಿಸಲಾಗುವುದು ಎಂದರು.
ಇನ್ನು ಕುಂದಾಪುರದ ತ್ರಾಸಿಯಲ್ಲಿ ನಡೆದ ಅಪಘಾತದಲ್ಲಿ ೮ ಮಕ್ಕಳನ್ನು ಬಲಿಪಡೆದ ಘಟನೆಯ ಬಗ್ಗೆ ಮಾತನಾಡಿದ ಅವರು ಸರಕಾರ ನಿಯಮಾವಳಿಗಳನ್ನು ರೂಪಿಸಬೇಕು. ಯಾವ ವಾಹನದಲ್ಲಿ ಎಷ್ಟು ಮಕ್ಕಳನ್ನು ಹಾಕಬೇಕು ಎಂಬುದರ ಬಗ್ಗೆ ನಿಯಮ ರೂಪಿಸಬೇಕು. ಖಾಸಗೀ ಬಸ್ ಗಳ ವೇಗಕ್ಕೆ ಕಡಿವಾಣ ಹಾಕಬೇಕು. ಮಕ್ಕಳ ಕುಟುಂಬಗಳಿಗೆ ಸರಕಾರ ಶೀಘ್ರ ಪರಿಹಾರ ವಿತರಿಸಬೇಕು ಎಂದರು.
Comments are closed.