ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಪುನಾರಚಿತ ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳ ಹಂಚಿಕೆ ಕಾರ್ಯವನ್ನೂ ಪೂರ್ಣಗೊಳಿಸಿದ್ದಾರೆ. ನಿರೀಕ್ಷೆಯಂತೆ ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಕಂದಾಯ ಖಾತೆಯನ್ನು ವಹಿಸಲಾಗಿದೆ.

ಬಹುತೇಕ ಹಿರಿಯ ಸಚಿವರು ಈ ಹಿಂದಿನ ಖಾತೆಗಳನ್ನೇ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರೂ ಕೆಲವರು ಪ್ರಮುಖ ಖಾತೆಗಳಿಂದ ವಂಚಿತರಾಗಿದ್ದಾರೆ. ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆಯನ್ನು ನೀಡಲಾಗಿದೆ.
ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಮಂತ್ರಿ ಟಿ.ಬಿ. ಜಯಚಂದ್ರ ಅವರು ಈ ಹಿಂದೆ ಹೊಂದಿದ್ದ ಉನ್ನತ ಶಿಕ್ಷಣ ಖಾತೆಯನ್ನೂ ಹೊಸ ಮಂತ್ರಿ ತನ್ವೀರ್ ಸೇಠ್ ಅವರಿಗೆ ವಹಿಸಲಾಗಿದೆ.
ಸಂಪುಟದಿಂದ ಕೈಬಿಡಲಾಗುವುದು ಎಂಬ ಭೀತಿಗೆ ಗುರಿಯಾಗಿದ್ದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಎಚ್. ಆಂಜನೇಯ ಅವರು ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳುವುದರ ಜೊತೆ ಜೊತೆಯಲ್ಲೇ ತಮ್ಮ ಹಳೆಯ ಖಾತೆಗಳನ್ನೂ ಉಳಿಸಿಕೊಳ್ಳುವಲ್ಲಿ ಕೂಡ ಸಫಲರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಖಾತೆಯ ಜತೆಗೆ ಈಗ ವಾರ್ತಾ ಇಲಾಖೆ ಹಾಗೂ ವಸತಿ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ವಾರ್ತಾ ಸಚಿವರಾಗಿದ್ದ ರೋಷನ್‌ಬೇಗ್‌ರವರಿಗೆ ನಗರಾಭಿವೃದ್ಧಿ ಖಾತೆಯನ್ನು ನೀಡಿದ್ದಾರೆ.
ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್‌ರವರ ಖಾತೆ ಬದಲಾಗಿದ್ದು, ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ಮುಖ್ಯಮಂತ್ರಿಗಳು ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾತೆಯನ್ನು ರಮೇಶ್‌ಕುಮಾರ್‌ರವರಿಗೆ ನೀಡಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯನ್ನು ತನ್ವೀರ್‌ಸೇಠ್‌ರವರಿಗೆ ನೀಡಲಾಗಿದ್ದು, ಉನ್ನತ ಶಿಕ್ಷಣ ಸಚಿವರಾಗಿದ್ದ ಟಿ.ಬಿ. ಜಯಚಂದ್ರರವರಿಗೆ ಕಾನೂನು, ಸಂಸದೀಯ ಇಲಾಖೆಗಳ ಜತೆಗೆ ಸಣ್ಣ ನೀರಾವರಿ ಇಲಾಖೆಯ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಉಳಿದಂತೆ ಸಂಪುಟದಲ್ಲಿ ಉಳಿದಿದ್ದ ಸಚಿವರುಗಳಿಗೆ ಹಳೇ ಖಾತೆಗಳನ್ನೆ ಮುಂದುವರೆಸಲಾಗಿದೆ. ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ್‌ರವರಿಗೆ ಅವರ ತಂದೆ ಶಾಮನೂರು ಶಿವಶಂಕರಪ್ಪ ನಿರ್ವಹಿಸುತ್ತಿದ್ದ ತೋಟಗಾರಿಕೆ ಮತ್ತು ಎಪಿಎಂಸಿ ಖಾತೆಯನ್ನೆ ಹಂಚಿಕೆ ಮಾಡಲಾಗಿದೆ.
ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ ಖರ್ಗೆರವರಿಗೆ ಪ್ರವಾಸೋದ್ಯಮ ಮತ್ತು ಐಟಿ-ಬಿಟಿ, ಬಸವರಾಜರಾಯರೆಡ್ಡಿರವರಿಗೆ ಪ್ರಾಥಮಿಕ ಶಿಕ್ಷಣ, ಹೆಚ್.ವೈ. ಮೇಠಿರವರಿಗೆ ಅಬಕಾರಿ, ರಮೇಶ್‌ಜಾರಕಿಹೊಳಿರವರಿಗೆ ಅವರ ಸಹೋದರ ಸತೀಶ್‌ಜಾರಕಿ ಹೊಳಿ ನಿರ್ವಹಿಸುತ್ತಿದ್ದ ಸಣ್ಣ ಕೈಗಾರಿಕೆ ಖಾತೆಯನ್ನೆ ನೀಡಲಾಗಿದೆ.

Comments are closed.