
ಮಂಗಳೂರು,ಜೂನ್.21: ವೇದ- ವೇದಾಂತ ಪಾರಂಗತರೂ ಪ್ರಸ್ತುತ ಕದ್ರಿ ದೇವಳದ ಅರ್ಚಕರೂ ಆಗಿರುವ ಪಿಎಚ್‌ಡಿ ಪದವೀಧರ ಡಾ. ಪ್ರಭಾಕರ ಅಡಿಗರಿಗೆ ಕಲ್ಕೂರ ಪ್ರತಿಷ್ಠಾನದಿಂದ ಕಲ್ಕೂರ ವೇದ ವಾರಿಧಿ ಸಿರಿ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪುರಸ್ಕಾರ ನೀಡಿ ಗೌರವಿಸಿದರು.
ಈ ಸಂದರ್ಭ ವಿಪ್ರ ಸಮಾಗಮ ವೇದಿಕೆಯ ಅಧ್ಯಕ್ಷ ರಾಮಕೃಷ್ಣ ರಾವ್, ಕೆ.ಎಸ್. ಕಲ್ಲೂರಾಯ, ಪ್ರಭಾಕರ ರಾವ್ ಪೇಜಾವರ,ಲೀಲಾ ಉಪಾಧ್ಯಾಯ, ಪೂರ್ಣೀಮಾ ರಾವ್ ಪೇಜಾವರ, ದಯಾನಂದ ಕಟೀಲು ಮೊದಲಾದವರು ಉಪಸ್ಥಿತರಿದ್ದರು.
Comments are closed.