
ಮಂಗಳೂರು,ಜೂನ್,21: ಎಸ್ ಎಸ್ ಎಫ್ ಕ್ಯಾಂಪಸ್ ಉಳ್ಳಾಲ ಆಶ್ರಯದಲ್ಲಿ ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ಉಳ್ಳಾಲ ದರ್ಗಾ ನೂತನಾಧ್ಯಕ್ಷ ರಶೀದ್ ಹಾಜಿ ಯವರಿಗೆ ಸನ್ಮಾನ ಸಮಾರಂಭ, ಸ್ಕಾಲರ್ಶಿಪ್ ಮಾಹಿತಿ ಕಾರ್ಯಾಗಾರ ಹಾಗೂ ಇಫ್ತಾರ್ ಮೀಟ್ ನಡೆಯಿತು.
ಸನ್ಮಾನ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ರಶೀದ್ ಹಾಜಿ ಸ್ವರ್ಗವು ಕಾತರದಿಂದ ಕಾಯುವ ಉತ್ತಮ ಗುಣನಡತೆ,ಸ್ವಭಾವವನ್ನು ರೂಪಿಸಿಕೊಳ್ಳುವ ಸಮೂಹದಲ್ಲಿ ನಾವು ಒಳಗೊಳ್ಳಬೇಕು.ವಿದ್ಯಾರ್ಥಿಗಳು ಸದ್ರಢವಾಗಿ ಬೆಳೆದು ಸಮಾಜಕ್ಕೆ ಮಾದರಿಯಾಗುವ ಒಳಿತನ್ನು ಮಾಡಬೇಕು.ಎಸ್ ಎಸ್ ಎಫ್ ಮುಂದಕ್ಕೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಾಹಿಲ್ ಕೋಟೆಪುರ,ಮುಝಫ್ಫರ್ ಅಕ್ಕರೆಕೆರೆ,ರೋಶನ್ ಮೇಲಂಗಡಿ ಹಾಗೂ ರಾಝಿಕ್ ಟಿಪ್ಪುಸುಲ್ತಾನ್ ಇವರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಅತಿಥಿಗಳನ್ನು ಹೂಗುಚ್ಛ ನೀಡಿ ಸಮೀರ್ ಮುಕ್ಕಚ್ಚೇರಿ,ನೌಫಲ್ ಕೋಟೆಪುರ ಹಾಗೂ ಫಾಶಿರ್ ಮತ್ತು ತಶ್ರೀಫ್ ಮೇಲಂಗಡಿ ಬರಮಾಡಿಕೊಂಡರು.ಪ್ರಸ್ತುತ ಕಾರ್ಯಕ್ರಮವನ್ನು ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಉದ್ಘಾಟನೆಗೈದರು.ಅಡ್ವೊಕೇಟ್ ಯೂಸುಫ್ ವಖ್ತಾರ್ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ನೀಡಿದರು.
ಯೂನುಸ್ ಇಮ್ದಾದಿ ಆಧ್ಯಾತ್ಮಿಕ ತರಗತಿ ನಡೆಸಿದರು.ಇಫ್ತಾರ್ ಮೀಟ್ ಸೌಕರ್ಯವನ್ನು ಎಸ್ ಎಸ್ ಎಫ್ ಮೇಲಂಗಡಿ ಶಾಖಾ ಕಾರ್ಯಕರ್ತರಾದ ಇಮ್ರಾನ್,ನವಾಝ್ ಹಾಗೂ ಝಿಯಾದ್ ಮಾಡಿದರು.ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಞ್ಞಿಮೋನು,ಎಸ್ ಎಸ್ ಎಫ್ ತೊಕ್ಕೋಟು ಸೆಕ್ಟರ್ ಕಾರ್ಯದರ್ಶಿ ಜಾಫರ್ ಅಳೇಕಲ ಹಾಗೂ ಎಸ್ ಬಿ ಎಸ್ ಉಳ್ಳಾಲ ಝೋನ್ ಅಧ್ಯಕ್ಷ ಮುಹಾಝ್ ಉಪಸ್ಥಿತರಿದ್ದರು.
ಎಸ್ ಎಸ್ ಎಫ್ ಕ್ಯಾಂಪಸ್ ಕಾರ್ಯದರ್ಶಿ ಹಫೀಝ್ ಕೋಡಿ ಕಾರ್ಯಕ್ರಮ ನಿರೂಪಿಸಿದರು
Comments are closed.