
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೊನೆಗೂ ಭರ್ಜರಿ ಸರ್ಜರಿಯಾಗಿದ್ದು, ಸಂಪುಟಕ್ಕೆ ನೂತನ ಸಚಿವರಾಗಿ 13 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದ ಗಾಜಿನಮನೆಯಲ್ಲಿ 13 ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯ್ ರುಡಾಭಾಯ್ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. 13 ಶಾಸಕರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 13 ಶಾಸಕರ ಪೈಕಿ 9 ಶಾಸಕರು ಸಂಪುಟ ದರ್ಜೆ ಸಚಿವರಾಗಿ ಹಾಗೂ 4 ಶಾಸಕರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯ್ ವಾಲಾ ಅವರು ಅಭಿನಂದಿಸಿದರು. ಇನ್ನು ಸಿದ್ದರಾಮಯ್ಯ ಅವರು ಸಚಿವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರು
ಕಲಘಟಗಿ ಶಾಸಕ ಸಂತೋಷ್ ಲಾಡ್, ಗೋಕಾಕ್ ಶಾಕರ ರಮೇಶ್ ಜಾರಕಿಹೊಳಿ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ದಾವಣಗೆರೆ ಉತ್ತರ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್, ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ, ಬಾಗಲಕೊಟೆ ನಗರ ಶಾಸಕ ಹೆಚ್ ವೈ ಮೇಟಿ, ವಿಧಾನಪರಿಷತ್ ಸದಸ್ಯ ಎಂಆರ್ ಸೀತಾರಾಂ, ಸಾಗರ ಶಾಸಕ ಕಾಗೋಡು ತಿಮ್ಮಪ್ಪ, ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ನರಸಿಂಹರಾಜ ಶಾಸಕ ತನ್ವೀರ್ ಸೇಠ್, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಚಿತ್ತಾಪುರ್ ಶಾಸಕ ಪ್ರಿಯಾಂಕ್ ಖರ್ಗೆ.
ಸಂಪುಟದಿಂದ 14 ಮಂದಿ ಸಚಿವರನ್ನು ಸದ್ಯ ಕೈಬಿಡಲಾಗಿದ್ದು, ಈ ಪೈಕಿ 8 ಸಚಿವರು ಅಸಮರ್ಥರು ಎಂಬ ಹಣೆಪಟ್ಟಿ ಹೊಂದಿದ್ದಾರೆ.
ಯಾರಿಗೆ ಯಾವ ಖಾತೆ..?
– ಕಾಗೋಡು ತಿಮ್ಮಪ್ಪ – ಕಂದಾಯ
– ರಮೇಶ್ ಕುಮಾರ್ – ಕೃಷಿ
– ತನ್ವೀರ್ ಸೇಠ್ – ವಕ್ಫ್ ಮತ್ತು ಪೌರಾಡಳಿತ
– ಎಚ್.ವೈ ಮೇಟಿ – ಸಣ್ಣ ಕೈಗಾರಿಕೆ
– ಎಸ್.ಎಸ್ .ಮಲ್ಲಿಕಾರ್ಜುನ – ಯುವಜನ ಮತ್ತು ಕ್ರೀಡೆ
– ಬಸವರಾಜ ರಾಯರೆಡ್ಡಿ – ಶಿಕ್ಷಣ
– ಸಂತೋಷ್ ಲಾಡ್ – ಕಾರ್ಮಿಕ ಖಾತೆ
– ರಮೇಶ್ ಜಾರಕಿಹೊಳಿ – ಅಬಕಾರಿ
– ಎಂ.ಆರ್.ಸೀತಾರಾಂ – ನಗರಾಭಿವೃದ್ಧಿ
ನೂತನ ರಾಜ್ಯ ಸಚಿವರಿಗೆ ಖಾತೆ ಹಂಚಿಕೆಯ ಸಂಭವನೀಯ ಪಟ್ಟಿ
– ಪ್ರಿಯಾಂಕ ಖರ್ಗೆ – ಆಹಾರ ಮತ್ತು ನಾಗರಿಕ ಪೂರೈಕೆ
– ರುದ್ರಪ್ಪ ಲಮಾಣಿ – ವಸತಿ ಖಾತೆ
– ಪ್ರಮೋದ್ ಮಧ್ವರಾಜ್ – ಮೀನುಗಾರಿಕೆ, ಬಂದರು
– ಈಶ್ವರ್ ಖಂಡ್ರೆ – ಸಣ್ಣ ನೀರಾವರಿ ಖಾತೆ
Comments are closed.