ಕರಾವಳಿ

ಮಹಾಕಾಳಿಪಡ್ಪು ಶಾಲೆಯಲ್ಲಿ ಪುಸ್ತಕ, ಬ್ಯಾಗು, ಕೊಡೆ ವಿತರಣೆ

Pinterest LinkedIn Tumblr

Mahakali_Padpu_book_1

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಹಾಗೂ ಅತ್ತಾವರ ವಾರ್ಡ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಜೆಪ್ಪು ಮಹಾಕಾಳಿಪಡ್ಪುವಿನಲ್ಲಿರುವ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗು ಹಾಗೂ ಕೊಡೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರು, ಕರ್ನಾಟಕ ಸರಕಾರ ಶಾಲಾ ಮಕ್ಕಳೀಗೆ ವಿದ್ಯಾಶ್ರೀ ಯೋಜನೆ, ಬಿಸಿಯೂಟ, ಶೂ ಭಾಗ್ಯ, ಕ್ಷೀರ ಭಾಗ್ಯ ಮುಂತಾದ ಯೋಜನೆಗಳನ್ನು ಜಾರಿ ಮಾಡಿ ಮಕ್ಕಳ ವಿದ್ಯಾರ್ಜನೆಗೆ ವಿಶೇಷವಾದ ಒತ್ತನ್ನುಕೊಟ್ಟಿದೆ. ಬಡ ಮಕ್ಕಳಿಗೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

Mahakali_Padpu_book_2 Mahakali_Padpu_book_3 Mahakali_Padpu_book_4 Mahakali_Padpu_book_5 Mahakali_Padpu_book_6 Mahakali_Padpu_book_7 Mahakali_Padpu_book_8

ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್ ಮಾತನಾಡಿ ಕಳೆದ 12 ವರ್ಷಗಳಿಂದ ಈ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳುತ್ತಾ ಬಂದಿದೆ. ಇದು ಮಕ್ಕಳಿಗೆ ಮಾತ್ರವಲ್ಲದೇ ಅವರ ಹೆತ್ತವರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿರುತ್ತದೆ ಎಂದರು.

ಕಂಕನಾಡಿ ವಾರ್ಡ್ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ ಮೆರಿಲ್ ರೇಗೋ ಮಾತನಾಡಿದರು.ಅತ್ತಾವರ ವಾರ್ಡ್ ಕಾರ್ಪೋರೇಟರ್ ಶೈಲಜಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್ ವಿಜಯಲಕ್ಷ್ಮಿ ಯುವ ಕಾಂಗ್ರೆಸ್ ಮುಖಂಡರುಗಳಾದ ರಮಾನಂದ ಪೂಜಾರಿ, ಪುಷ್ಪರಾಜ್ ಪೂಜಾರಿ, ಮೊಹಮದ್ ನವಾಜ್, ರಾಕೇಶ್ ದೇವಾಡಿಗ, ಶರೀಫ್ ಕಣ್ಣೂರು, ವಸಂತ, ಅಶೋಕ್ ಕುಡುಪಾಡಿ, ಕೀರ್ತಿರಾಜ್ ಬಾಬುಗುಡ್ಡೆ, ವಿದ್ಯಾ, ಪ್ರಶಾಂತ್, ಸಲೀಂ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು.

Comments are closed.