ಉಡುಪಿ: ಜಿಲ್ಲೆಯ ಮಲ್ಪೆ, ಕೋಡಿಬೆಂಗ್ರೆ, ಹೆಜಮಾಡಿ, ಮಡಿಕಲ್ಲು ಮತ್ತು ಗಂಗೊಳ್ಳಿ ಮೀನುಗಾರಿಕಾ ಬಂದರುಗಳ ಅಭಿವೃದ್ದಿ ಕಾಮಗಾರಿಗಳಿಗೆ ವೇಗ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮೀನುಗಾರಿಕಾ ಸಚಿವ ಅಭಯ್ ಚಂದ್ರ ಜೈನ್ ತಿಳಿಸಿದ್ದಾರೆ.
ಉಡುಪಿ ಜಿ.ಪಂ ನಲ್ಲಿ ವಿವಿಧ ಮೀನುಗಾರರ ಸಂಘಟನೆಗಳ ಮುಂದಾಳು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಶಾಸಕ ಪ್ರಮೋದ್ ಮದ್ವರಾಜ್ ಮಾತನಾಡಿ ಮೀನುಗಾರರು ಮುಕ್ತವಾಗಿ ಸಚಿವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದೆ. ಮೀನುಗಾರರ ಬೇಡಿಕೆ ಇದೇರಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಲ್ಪೆ ಬಂದರಿನ ಮೂರನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ನಾಲ್ಕನೇ ಹಂತದ ಕಾಮಗಾರಿ ಮಾಡಲು ಬೇಡಿಕೆ ಸಲ್ಲಿಸಿದ್ದಾರೆ ಅದರಂತೆ ತಮಿಳುನಾಡು, ಮತ್ತು ಕೇರಳ ಮಾದರಿಯಲ್ಲಿ ಸಮುದ್ರದಲ್ಲಿ ೨ಸಾವಿರ ದೋಣಿಗಳ ನಿಲುಗಡೆಗೆ ಎಲ್ ಆಕಾರದ ಬ್ರೇಕ್ ವಾಟರ್ ನಿರ್ಮಿಸಲಾಗುವುದು ಎಂದರು.
ಇದೇ ಸಂದರ್ಬದಲ್ಲಿ ಮೀನುಗಾರಿಕೆ ವೇಳೆ ಮೃತಪಟ್ಟ ಎರ್ಮಾಳಿನ ಗಣೇಶ್ ಪುತ್ರನ್ ಕುಟುಂಬಕ್ಕೆ ೨ಲಕ್ಷ , ಬಡಿಯಾ ಮರಕಾಲ ಕುಟುಂಬಕ್ಕೆ ೧ಲಕ್ಷ ರೂಗಳನ್ನು ಸಚಿವರು ವಿತರಿಸಿದರು.
ಮೀನುಗಾರಿಕಾ ನಿಗಮದ ಅದ್ಯಕ್ಷ ಹಿರಿಯಣ್ಣ, ಸಬೂನು ಮತ್ತು ಮಾರ್ಜಕ ನಿಗಮದ ಅದ್ಯಕ್ಷೆ ವೆರೇನಿಕಾ ಕರ್ನೇಲಿಯೋ ಮುಂತಾದವರು ಉಪಸ್ಥಿತರಿದ್ದರು.
Comments are closed.