ಕರಾವಳಿ

ದತ್ತಿ ನಿಧಿಗೆ ‌ಎಲ್ಲೂ ಧಕ್ಕೆ ಬರಲು‌ ಅವಕಾಶವಿಲ್ಲ : ಪ್ರದೀಪ್‌ ಕುಮಾರ್

Pinterest LinkedIn Tumblr

pradeep_kumar_kalkura

ಮಂಗಳೂರು,ಜೂ.14: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ದತ್ತಿ ನಿಧಿಯು ‌ಅಗತ್ಯ. ಧತ್ತಿ ನಿಧಿಯಲ್ಲಿ ಶೇ.10 ರಷ್ಟು ಮೂಲ ನಿಧಿಗೆ ಹೋಗಲಿದ್ದು, ಅದರಲ್ಲಿ ಶೇ.90ರಷ್ಟು ಮಾತ್ರ ವಿನಿಯೋಗದ‌ ಅಧಿಕಾರ‌ ಇರುವುದು ಹಾಗಾಗಿ ಧತ್ತಿ ನಿಧಿಗೆ ‌ಎಲ್ಲೂಧಕ್ಕೆ ಬರಲು ‌ಅವಕಾಶವಿಲ್ಲ‌ ಎಂದು ಜಿಲ್ಲಾ ಸಾಹಿತ್ಯ ಪರಿಷತ್‌ನ‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಹೇಳಿದರು.

ಅವರು ಪುತ್ತೂರಿನಲ್ಲಿ ಜರಗಿದ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಪ್ರೊ. ವಿ.ಬಿ. ಅರ್ತಿಕಜೆಯವರ ಪ್ರಶ್ನೆಗೆ ಉತ್ತರಿಸಿದರು. ಒಂದು ವೇಳೆ ದತ್ತಿ ಕಾರ್ಯಕ್ರಮ ಕಾರ್ಯಗತ ಮಾಡಲು‌ ಆಗದಿದ್ದರೆ ‌ಅದು ದುರ್ವಿನಿಯೋಗ‌ ಆಗುತ್ತದೆ ‌ಎಂದರ್ಥವಲ್ಲ. ಕಾರ್ಯಕ್ರಮ ಬೇಕಾದರೆ ಬೇರೆ ತಾಲೂಕಿನಲ್ಲೂ ಮಾಡಬಹುದು. ಕಾರ್ಯಕ್ರಮ ಮಾಡಲು ‌ಆಗದಿದ್ದರೆ ಮೊತ್ತ ಮೂಲ ನಿಧಿಗೆ ಸೇರ್ಪಡೆಯಾಗುತ್ತದೆ. ಮುಂದೆ ‌ಇನ್ನೊಂದುಕಾರ್ಯಕ್ರಮ ಮಾಡುವಾಗ‌ ಇನ್ನೂ ಜಾಸ್ತಿ ಬಡ್ಡಿ ಹಣ ಸಿಗುತ್ತದೆ ಎಂದು ಕಲ್ಕೂರ ಹೇಳಿದರು.

ಈ ಸಂದರ್ಭ ಡಾ| ಸುಕುಮಾರಗೌಡ, ಬಿ. ಐತ್ತಪ ನಾಯ್ಕ್, ಬಿ. ಪುರಂದರ ಭಟ್, ಪ್ರೊ. ವಿ.ಬಿ ಅರ್ತಿಕಜೆ, ಸುಬ್ರಹ್ಮಣ್ಯಂ ಮೊದಲಾದವರು ಉಪಸ್ಥಿತರಿದ್ದರು.

Comments are closed.