ಕರಾವಳಿ

ಕುಲಶೇಖರ : ತೋಡಿನಲ್ಲಿ ನೀರು ನಿಂತು ದುರ್ವಾಸನೆ – ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸ್ಥಳೀಯರು

Pinterest LinkedIn Tumblr
drain_Water_prblm_1
ಮಂಗಳೂರು,ಜೂನ್.13: ದ.ಕ.ಜಿಲ್ಲೆಯಲ್ಲಿ ಮಳೆ ಆರಂಭಗೊಂಡಿದ್ದು, ನಗರದ ಹಲವೆಡೆಗಳಲ್ಲಿ ಚರಂಡಿ ಸಮಸೈಗಳಿಂದ ಸರಾಗವಾಗಿ ನೀರು ಹರಿದಾಡಲು ಸಾಧ್ಯವಾಗದೇ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ನಗರದ ಕುಲಶೇಖರ ಪದಮಿತ್ತ್ ಎಂಬಲ್ಲಿ ಚರಂಡಿಯಲ್ಲಿ  ಹೂಳುತುಂಬಿ ಈ ಬಾರಿಯ ಮಳೆಗೆ  ತೋಡಿನಲ್ಲಿ ನೀರು ಸರಾಗವಾಗಿ ಹರಿದಾಡಲು ಆಡಚಣೆಯುಂಟಾಗಿದೆ. ಕಸಕಡ್ಡಿಗಳೊಂದಿಗೆ ನೀರು ಅಲ್ಲೇ ಶೇಖರಣೆಗೊಂಡು ದುರ್ವಾವಾಸನೆ ಬೀರುತ್ತಿರುವುದರಿಂದ ಸ್ಥಳೀಯರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಜೊತೆಗೆ ಈ ರೀತಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತಿ ಹೆಚ್ಚುತ್ತಿರುವುದರಿಂದ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ಸ್ಥಳೀಯ ನಿವಾಸಿಗಳು ಭಯಬೀತರಾಗಿದ್ದಾರೆ.
drain_Water_prblm_2 drain_Water_prblm_3 drain_Water_prblm_4 drain_Water_prblm_5
ಈ ಬಗ್ಗೆ  ಸ್ಥಳೀಯ ಕಾರ್ಪೋರೇಟರ್ ಹಾಗೂ ಮನಪಾ ಮೇಯರ್ ಹರಿನಾಥ್ ಅವರಿಗೆ ಈಗಾಗಲೇ ಲಿಖಿತ ಮನವಿ ನೀಡಲಾಗಿದ್ದು, ಆದರೆ ಇವರು ಯಾರು ಈ ಸಮಸೈ ಪರಿಹರಿಸುವ ಬಗ್ಗೆ ಉತ್ಸಾಹ ತೋರದೇ ಇರುವುದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯ ಮುಖಂಡರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Comments are closed.