ಕರಾವಳಿ

ಆಳವಾದ ವಿಮರ್ಶೆಯೊಂದಿಗೆ ಸ್ಪಷ್ಟ ನಿರ್ಣಯ ಕೈಗೊಳ್ಳುವ ಮೂಲಕ ಮಾಧ್ಯಮಕ್ಕೆ ಬಂದಿರುವ ಕಳಂಕ ದೂರ ಮಾಡಿ : .ಶ್ರೀ ಜಿ.ಭೀಮೇಶ್ವರ ಜೋಷಿ

Pinterest LinkedIn Tumblr

KJU_Meet_horanadu_1

ಸಮಾಜದ ಸ್ವಾಸ್ತ್ಯ ಕೆಡಿಸುವ ಸುದ್ಧಿಗಳು ಬೇಡ : ಪತ್ರಕರ್ತರಿಗೆ ಹೊರನಾಡು ಶ್ರೀ ಕ್ಷೇತ್ರದ ಧರ್ಮಕರ್ತ ಶ್ರೀ ಜಿ.ಭೀಮೇಶ್ವರ ಜೋಷಿ ಕರೆ

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ – ಚಿಕ್ಕಮಂಗಳೂರು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ 100ಕ್ಕೂ ಹೆಚ್ಚು ಚಿತ್ರಗಳನ್ನು ಇಲ್ಲಿ ವೀಕ್ಷಿಸಿ..

ಮಂಗಳೂರು / ಚಿಕ್ಕಮಂಗಳೂರು : ಕರ್ನಾಟಕ ಪತ್ರಕರ್ತರ ಸಂಘ ( ರಿ) ( Karnataka Journalists Union) ದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಮತ್ತು ವಿಶೇಷ ಸರ್ವ ಸದಸ್ಯರ ಸಭೆ ಜೂನ್ 4 ಮತ್ತು 5ರಂದು ಚಿಕ್ಕಮಂಗಳೂರು ಜಿಲ್ಲೆಯ ಶ್ರೀಕ್ಷೇತ್ರ ಹೊರನಾಡು ಇಲ್ಲಿನ ಮಾಂಗಲ್ಯ ಮಂಟಪದಲ್ಲಿ ಜರಗಿತು.

ಶ್ರೀಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಶ್ರೀ ಜಿ.ಭೀಮೇಶ್ವರ ಜೋಷಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದ್ದು, ಸಮಾಜದ ಸ್ವಾಸ್ತ್ಯ ಕೆಡಿಸುವ ಸುದ್ಧಿಗಳಿಗೆ ಹೆಚ್ಚು ಒತ್ತು ನೀಡದೇ, ಸಮಾಜಮುಖಿ ಕೆಲಸ ಮಾಡುವವರ ಬಗ್ಗೆ ಹಾಗೂ ಸಮಾಜಕ್ಕೆ ಕೊಡುಗೆ ನೀಡುವವರ ಬಗ್ಗೆ ಸುದ್ಧಿ ನೀಡುವ ಮೂಲಕ ಪತ್ರಕರ್ತರು ಸಮಾಜಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಮಾಧ್ಯಮವನ್ನು ದುರುಪಯೋಗ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸ್ವಾಭಿಮಾನಿ ಪತ್ರಕರ್ತರು ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಾಲಘಟ್ಟದಲ್ಲಿ ಪತ್ರಕರ್ತರು ಪರಿಪೂರ್ಣವಾಗಿ, ಅಳವಾಗಿ ಅಧ್ಯಯನ ಮಾಡಿ ಆಳವಾದ ವಿಮರ್ಶೆಯೊಂದಿಗೆ ಸ್ಪಷ್ಟ ನಿರ್ಣಯ ಕೈಗೊಳ್ಳುವ ಮೂಲಕ ಮಾಧ್ಯಮಕ್ಕೆ ಬಂದಿರುವ ಕಳಂಕ ದೂರ ಮಾಡಲು ಸಾಧ್ಯ ಎಂದು ಭೀಮೇಶ್ವರ ಜೋಷಿಯವರು ತಿಳಿಸಿದರು.

KJU_Meet_horanadu_2 KJU_Meet_horanadu_3 KJU_Meet_horanadu_4 KJU_Meet_horanadu_5 KJU_Meet_horanadu_6 KJU_Meet_horanadu_7 KJU_Meet_horanadu_8 KJU_Meet_horanadu_9 KJU_Meet_horanadu_10 KJU_Meet_horanadu_11 KJU_Meet_horanadu_12 KJU_Meet_horanadu_13 KJU_Meet_horanadu_14 KJU_Meet_horanadu_15 KJU_Meet_horanadu_16 KJU_Meet_horanadu_17 KJU_Meet_horanadu_18 KJU_Meet_horanadu_19 KJU_Meet_horanadu_20 KJU_Meet_horanadu_21 KJU_Meet_horanadu_22 KJU_Meet_horanadu_23 KJU_Meet_horanadu_24 KJU_Meet_horanadu_25 KJU_Meet_horanadu_26 KJU_Meet_horanadu_27 KJU_Meet_horanadu_28 KJU_Meet_horanadu_29 KJU_Meet_horanadu_30

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮುರುಗೇಶ್ ಬಿ.ಶಿವಪೂಜಿ ಅವರು ಮಾತನಾಡಿ, ಸಂಘದ ಸದಸ್ಯರು ಹಲವಾರು ಚಟುವಟಿಕೆಗಳ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂದು ರಾಜ್ಯದ ಮೂಲೆ ಮೂಲೆಯಲ್ಲೂ ಸಂಘ ವಿಸ್ತಾರವಾಗಿ ಬೆಳೆದು ಅಭಿವೃದ್ಧಿ ಕಾಣುತ್ತಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಸಂಘದ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿರುವುದರಿಂದ ಸಂಘ ಕೆಲವೊಂದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಸಂಘದ ರಾಜ್ಯ ಸಮಿತಿಯ ಕಾರ್ಯಕಾರಿ ಸದಸ್ಯರು ಆಗಿರುವ ದ.ಕ.ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಅವರ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಜನಪರ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದಿದೆ ಎಂದು ಸಭೆಯಲ್ಲಿ ಹೇಳಿದ ಶಿವಪೂಜಿಯವರು ದ.ಕ.ಜಿಲ್ಲೆಯಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಸಂಘ ಉತ್ತಮ ಪ್ರಗತಿ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

KJU_Meet_horanadu_31 KJU_Meet_horanadu_32 KJU_Meet_horanadu_33 KJU_Meet_horanadu_34 KJU_Meet_horanadu_35 KJU_Meet_horanadu_36 KJU_Meet_horanadu_37 KJU_Meet_horanadu_38 KJU_Meet_horanadu_39 KJU_Meet_horanadu_40 KJU_Meet_horanadu_41 KJU_Meet_horanadu_42 KJU_Meet_horanadu_43 KJU_Meet_horanadu_44 KJU_Meet_horanadu_45 KJU_Meet_horanadu_46 KJU_Meet_horanadu_47 KJU_Meet_horanadu_48 KJU_Meet_horanadu_49 KJU_Meet_horanadu_50 KJU_Meet_horanadu_51 KJU_Meet_horanadu_52 KJU_Meet_horanadu_53 KJU_Meet_horanadu_54 KJU_Meet_horanadu_55 KJU_Meet_horanadu_56 KJU_Meet_horanadu_57 KJU_Meet_horanadu_58 KJU_Meet_horanadu_59 KJU_Meet_horanadu_60

ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಪಾಂಚಾಲ್, ಕಳಸ ಜಿಲ್ಲಾ ಪಂಚಾಯತ್ ಸದಸ್ಯ ಪ್ರಭಾಕರ್, ಚಿಕ್ಕಮಂಗಳೂರು ಜಿಲ್ಲೆಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಮಂಜುನಾಥ್, ಕರ್ನಾಟಕ ಪತ್ರಕರ್ತರ ಸಂಘದ ದ.ಕ.ಜಿಲ್ಲಾ ಕಾರ್ಯದರ್ಶಿ ಸತೀಶ್ ಕಾಪಿಕಾಡ್, ಹೊರನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸನ್ಮತಿ ವೃಷಭರಾಜ್, ತಾಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಮೀನಾಕ್ಷಿ ಮೋಹನ್, ರಾಜ್ಯ ಸಮಿತಿ ಸದಸ್ಯರಾದ ಬಿ.ತಿಪ್ಪೇರುದ್ರಪ್ಪ, ಬಿ.ಕೃಷ್ಣಪ್ಪನಾಯಕ್ ಮುಂತಾದವರು ಅತಿಥಿಗಳಾಗಿದ್ದರು.

ಚಿಕ್ಕಮಂಗಳೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ರೂವಾರಿ ಜಿ.ಎಂರಾಜಶೇಖರ್ ಸ್ವಾಗತಿಸಿ, ಪ್ರಸ್ತಾವನೆಗೈದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ದ.ಕ.ಜಿಲ್ಲಾ ಕಮಿಟಿಯ ಸದಸ್ಯರಾದ ವೆಂಕಟೇಶ್ ಬೆಂಡೆ ,ಇಜಾಝ್ ಮೇರಮಜಲ್, ಬಂಟ್ವಾಳ ತಾಲ್ಲೂಕು ಕಮಿಟಿಯ ಸದಸ್ಯರಾದ ಲತೀಪ್ ನೇರಳಕಟೆ,ಮೋಹನ್ ಶಿಯಾನ್,ಜಯಾನಂದ ಪೆರಾಜೆ, ಮಂಗಳೂರು ಸಮಿತಿ ಸದಸ್ಯೆ ಕರೀಶ್ಮಾ ಎಸ್. ಶೆಟ್ಟಿ, ಚಿಕ್ಕಮಂಗಳೂರು ಜಿಲ್ಲಾ ಪತ್ರಕರ್ತ ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕದ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

KJU_Meet_horanadu_61 KJU_Meet_horanadu_62 KJU_Meet_horanadu_63 KJU_Meet_horanadu_64 KJU_Meet_horanadu_65 KJU_Meet_horanadu_66 KJU_Meet_horanadu_67 KJU_Meet_horanadu_68 KJU_Meet_horanadu_69 KJU_Meet_horanadu_70 KJU_Meet_horanadu_71 KJU_Meet_horanadu_72 KJU_Meet_horanadu_73 KJU_Meet_horanadu_74 KJU_Meet_horanadu_75 KJU_Meet_horanadu_76 KJU_Meet_horanadu_78 KJU_Meet_horanadu_79 KJU_Meet_horanadu_80 KJU_Meet_horanadu_81 KJU_Meet_horanadu_82 KJU_Meet_horanadu_83 KJU_Meet_horanadu_84 KJU_Meet_horanadu_85 KJU_Meet_horanadu_86 KJU_Meet_horanadu_87 KJU_Meet_horanadu_88 KJU_Meet_horanadu_89 KJU_Meet_horanadu_90 KJU_Meet_horanadu_91 KJU_Meet_horanadu_92 KJU_Meet_horanadu_93 KJU_Meet_horanadu_94 KJU_Meet_horanadu_95 KJU_Meet_horanadu_96 KJU_Meet_horanadu_97 KJU_Meet_horanadu_98 KJU_Meet_horanadu_99 KJU_Meet_horanadu_101 KJU_Meet_horanadu_102 KJU_Meet_horanadu_103 KJU_Meet_horanadu_104 KJU_Meet_horanadu_105 KJU_Meet_horanadu_106 KJU_Meet_horanadu_107 KJU_Meet_horanadu_109 KJU_Meet_horanadu_111 KJU_Meet_horanadu_112 KJU_Meet_horanadu_113 KJU_Meet_horanadu_114 KJU_Meet_horanadu_115 KJU_Meet_horanadu_116 KJU_Meet_horanadu_117 KJU_Meet_horanadu_118 KJU_Meet_horanadu_119 KJU_Meet_horanadu_121 KJU_Meet_horanadu_125 KJU_Meet_horanadu_126 KJU_Meet_horanadu_127 KJU_Meet_horanadu_128 KJU_Meet_horanadu_129 KJU_Meet_horanadu_130 KJU_Meet_horanadu_131 KJU_Meet_horanadu_132 KJU_Meet_horanadu_133

KJU_Meet_horanadu_77 KJU_Meet_horanadu_100 KJU_Meet_horanadu_108 KJU_Meet_horanadu_110 KJU_Meet_horanadu_120 KJU_Meet_horanadu_122 KJU_Meet_horanadu_123 KJU_Meet_horanadu_124

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜಿಲ್ಲೆ : ಪ್ರೇಕ್ಷಣೀಯ ಸ್ಥಳಗಳ ಸ್ವರ್ಗ

ಚಿಕ್ಕಮಂಗಳೂರು ಜಿಲ್ಲೆ ಗುಡ್ಡ – ಬೆಟ್ಟಗಳೇ ತುಂಬಿರುವ ಸುಂದರವಾದ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಜಿಲ್ಲೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಡೀ ಜಿಲ್ಲೆ ಸುಂದರ ಪರಿಸರವನ್ನು ಹೊಂದಿದ್ದು, ವಿಸ್ಮಯಗೊಳಿಸುವ ಬೆಟ್ಟ,ಗುಡ್ಡಗಳು, ಬಂಡೆಕಲ್ಲುಗಳ ಮಧ್ಯೆ ನೀರು ಹರಿದಾಡುವ ನದಿ, ಸುತ್ತಮುತ್ತಲು ಹಸಿರು ತುಂಬಿದ್ದು, ಯಾವಾಗಲೂ ತಂಪಿನ ಅನುಭವ ನೀಡುವ ವಾತಾವರಣ. ಕಾಫಿ ಹಾಗೂ ಟೀ ಎಸ್ಟೇಟ್ ಗಳಿಂದ ಕಂಗೋಳಿಸುತ್ತಿರುವ ಒಂದು ಸುಂದರ ನಾಡು.

ಈ ಜಿಲ್ಲೆಯಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ, ಶ್ರೀ ಕ್ಷೇತ್ರ ಹೊರನಾಡು, ಶ್ರೀ ಕ್ಷೇತ್ರ ಕಳಸ, ಬಾಬಬುಡನಗೀರಿ, ಎತ್ತರ ಪ್ರದೇಶದಲ್ಲಿರುವ ಆಕರ್ಷಕ ಡ್ಯಾಮ್ ಹಾಗೂ ವಿಶಾಲವಾದ ರಾಷ್ಟ್ರೀಯ ಉದ್ಯಾನ (ಅರಣ್ಯ)ವನ್ನು ಹೊಂದಿರುವ ಕುದುರೆಮುಖ, ವಿಶೇಷವಾಗಿ ಸಿನಿಮಾ ಚಿತ್ರೀಕರಣಕ್ಕಾಗಿ ಎಂದೇ ರೂಪುಗೊಂಡಿರುವ ಆಕರ್ಷಣೀಯ ಸ್ಥಳಗಳಾದ ಬಲ್ಗೇರಿ ಬೆಟ್ಟ, ಗಾಳಿಗೋಪುರ, ಮುಳ್ಳಯನಗಿರಿ ಬೆಟ್ಟ, ಹಳ್ಳಿಮನೆ, ಅಂಭಾ ತೀರ್ಥ, ತೂಗೂ ಸೇತುವೆ( ರೋಫ್ ವೇ ), ಹನುಮಾನ್ ಗುಂಡಿ, ಇನ್ನೂ ನೂರಾರು ಪ್ರೇಕ್ಷಣೀಯ ಸ್ಥಳಗಳು ಇಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಆಯೋಜಿಸಲಾದ ಎರಡು ದಿನಗಳ ಸಮ್ಮೇಳನಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದಂತಹ ಎಲ್ಲಾ ಪತ್ರಕರ್ತರಿಗೆ ಇಲ್ಲಿನ ಹಲವಾರು ರಮಣೀಯ ಸ್ಥಳಗಳನ್ನು ವೀಕ್ಷಿಸುವ ಅವಕಾಶವನ್ನು ಚಿಕ್ಕಮಂಗಳೂರು ಜಿಲ್ಲಾ ಪತ್ರಕರ್ತ ಸಂಘದ ಅಶ್ರಯದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.

Comments are closed.