ಕರಾವಳಿ

ಆಗಸ್ಟ್ 7 : ಮಂಗಳೂರಿನಿಂದ ಶಾರ್ಜಾಕ್ಕೆ ನೇರ ವಿಮಾನಯಾನ ಆರಂಭ

Pinterest LinkedIn Tumblr

JET_AIRWAYS_sharja

ಮಂಗಳೂರು, ಜೂ.9: ಜೆಟ್ ಏರ್‌ವೇಸ್‌ನಿಂದ ಶಾರ್ಜಾಕ್ಕೆ ಪ್ರಥಮ ನೇರ ವಿಮಾನವು ಆಗಸ್ಟ್ 7ರಂದು ಬೆಳಗ್ಗೆ 9:30ರ ಭಾರತೀಯ ಕಾಲಮಾನಕ್ಕೆ ಮಂಗಳೂರಿನಿಂದ ಹೊರಟು ಶಾರ್ಜಾಕ್ಕೆ ಬೆಳಗ್ಗೆ 11:45ಕ್ಕೆ ತಲುಪಲಿದೆ. ಶಾರ್ಜಾದಿಂದ ಮಂಗಳೂರಿಗೆ ವಾಪಸು ವಿಮಾನ ಮಧ್ಯಾಹ್ನ 12:45ಕ್ಕೆ ಹೊರಟು 5:55ಕ್ಕೆ ತಲುಪಲಿದೆ.

ಈ ಮೂಲಕ ಜೆಟ್ ಏರ್‌ವೇಸ್‌ನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಯುಎಇ ಶಾರ್ಜಾ ನಡುವೆ ನೇರ ವಿಮಾನ ಯಾನ ಆಗಸ್ಟ್ 7ರಿಂದ ಆರಂಭಗೊಳ್ಳಲಿದೆ.

ಯುಎಇ ತಾಣಗಳಿಗೆ ಜೆಟ್ ಏರ್‌ವೇಸ್‌ನಿಂದ ಇದು ಮೂರನೆ ನೇರ ವಿಮಾನ ಯಾನವಾಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಟ್ ಏರ್‌ವೇಸ್‌ನ ನೇರ ವಿಮಾನಗಳು ಈಗಾಗಲೇ ದುಬೈ ಮತ್ತು ಅಬುದಾಭಿಗೆ ಕಾರ್ಯಾಚರಿಸುತ್ತಿವೆ.

ಮಂಗಳೂರಿನಿಂದ ಶಾರ್ಜಾಕ್ಕೆ ವಿಮಾನ ಯಾನ ಪ್ರಯಾಣ ದರವು ಎಕಾನಮಿ ದರ್ಜೆಗೆ 21, 418 ರೂ. ಆಗಿದ್ದು, ಪ್ರೀಮಿಯರ್ ದರ್ಜೆಗೆ 42,294 ರೂ.ಗಳಾಗುತ್ತವೆ. ಇದು ಉದ್ಘಾಟನಾ ದರವಾಗಿದ್ದು, ಎಲ್ಲಾ ಸಮಯದಲ್ಲೂ ಈ ದರ ಅನ್ವಯವಾಗುವುದಿಲ್ಲ ಎಂದು ಜೆಟ್ ಏರ್‌ವೇಸ್‌ನ ಪ್ರಕಟನೆ ತಿಳಿಸಿದೆ.

Comments are closed.