ಕರಾವಳಿ

’ಲಿಕ್ಕರ್ ಲಾಬಿಗೆ ಕೂಡ್ಲಿಗಿಯವರು ಶರಣು ಶರಣು’- ಫೇಸ್‌ಬುಕ್‌ನಲ್ಲಿ ನೋವನ್ನು ಹೇಳುತ್ತಿದ್ದಾರೆ ಡಿವೈ‌ಎಸ್ಪಿ ಅನುಪಮಾ

Pinterest LinkedIn Tumblr

ವಿಶೇಷ ವರದಿ: ಯೋಗೀಶ್ ಕುಂಭಾಸಿ

ಪ್ರಾಮಾಣಿಕ, ದಕ್ಷ ಅಧಿಕಾರಿಯೆಂದೇ ಖ್ಯಾತರಾದ ಬಳ್ಳಾರಿಯ ಕೂಡ್ಲಗಿ ಡಿವೈ‌ಎಸ್ಪಿ ಅನುಪಮಾ ಶೆಣೈ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡುವ ಮೂಲಕ ತೀವ್ರ ಸಂಚಲನವನ್ನು ಉಂಟುಮಾಡಿದ್ದಾರೆ. ಮೂಲಗಳ ಪ್ರಕಾರ ಲಿಕ್ಕರ್ ಲಾಬಿಯನ್ನು ಎದುರು ಹಾಕಿಕೊಳ್ಳಲು ಹೋದ ಅನುಪಮಾ ಶೆಣೈ ಅವರಿಗೆ ಮೇಲಧಿಕಾರಿಗಳು ಸಪೋರ್ಟ್ ಮಾಡದಿರುವುದು ಮತ್ತು ರಾಜಕೀಯ ಹಸ್ತಕ್ಷೇಪವಾಗಿರುವುದೇ ರಾಜಿನಾಮೆಗೆ ಕಾರಣ ಎನ್ನಲಾಗುತ್ತಿದೆ.

Anupama shenoy

ಫೇಸ್‌ಬುಕ್ ಸಮರ….
ಶನಿವಾರದಂದು ಡಿವೈ‌ಎಸ್ಪಿ ಹುದ್ದೆಗೆ ರಾಜಿನಾಮೆ ನೀಡಿದ ತರುವಾಯ ಅನುಪಮಾ ಶೆಣೈ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೇ ಭಾನುವಾರ ಬೆಳೀಗ್ಗೆನಿಂದಲೂ ಫೇಸ್‌ಬುಕ್‌ನಲ್ಲಿ ಸಕ್ರೀಯರಾಗಿರುವ ಅವರು ತಮ್ಮ ಮನದಾಳದ ನೋವನ್ನು ಫೇಸ್‌ಬುಕ್ ಮೂಲಕ ತೋಡಿಕೊಳ್ಳುತ್ತಿದ್ದಾರೆ. ಅವರು ಹಾಕುತ್ತಿರುವ ಸ್ಟೇಟಸ್, ಫ್ರೋಫೈಲ್ ಫೋಟೋಗಳು, ಶೇರ್ ಮಾಡುತ್ತಿರುವ ಫೋಟೋಗಳಲ್ಲಿ ಅವರ ಮನಸ್ಸಿನ ನೋವುಗಳು ಹಾಗೂ ಭಾವನೆಗಳು ವ್ಯಕ್ತವಾಗುತ್ತಿದೆ. ವ್ಯವಸ್ಥೆಯ ಬಗ್ಗೆಗಿನ ಅಸಮಾಧಾನವೂ ಸ್ಪಷ್ಟವಾಗಿ ಕಾಣಿಸುತ್ತಿದೆ.

ಏನಿದೆ ಎಫ್.ಬಿ. ಖಾತೆಯಲ್ಲಿ….
ಭಾನುವಾರ ಮುಂಜಾನೆ ಸ್ನೇಹಿತರು ಹ್ಯಾಶ್ ಟ್ಯಾಗ್ ಮಾಡಿದ ಕೂಡ್ಲಗಿ ಲಿಕ್ಕರ್ ಲಾಬಿಯ ಸತ್ಯಾಸತ್ಯತೆಯ ಫೋಸ್ಟ್ ಅನ್ನು ಅನುಪಮಾ ಅವರು ‘#……ರ ರಮ್ ರಾಜ್ಯ’ ಎನ್ನುವ ಮೂಲಕ ಶೇರ್ ಮಾಡಿದ್ದಾರೆ. ಬಳಿಕ “ಲಿಕ್ಕರ್ ಲಾಬಿಗೆ ಶರಣು ಶರಣು ಎನ್ನಿರೇ ಕೂಡ್ಲಿಗಿಯ ಜನತೆ ಶರಣು ಶರಣು ಎನ್ನಿರೇ ?” ಎನ್ನುವ ಸ್ಟೇಟಸ್ ಫೋಸ್ಟ್ ಮಾಡಿದ್ದಾರೆ. ‘if you ever let your head down, it should be just to admire your shoes’ ಎನ್ನುವ ಬರಹವಿರುವ ಫೋಟೋ, ” When injustice Becomes Law, Rebellion Becomes Duty’(ಅನ್ಯಾಯವೇ ಕಾನೂನಾದಾಗ, ಬಂಡಾಯ ಎನ್ನುವುದು ಕರ್ತವ್ಯವಾಗುತ್ತದೆ) ಎಂಬ ಸಾರಾಂಶವಿರುವ ಫೋಟೋವನ್ನು ತಮ್ಮ ಫ್ರೊಪೈಲ್ ಫೋಟೋವಾಗಿ ಅಪ್ಡೇಟ್ ಮಾಡಿದ್ದರು. ಇನ್ನು ಸೋಮವಾರ ಬೆಳಿಗ್ಗೆಯೂ ತಮ್ಮ ಎಫ್.ಬಿ. ಖಾತೆಯಲ್ಲಿ ಒಂದು ಸ್ಟೇಟಸ್ ಹಾಕಿದ್ದಾರೆ. ಅಲ್ಲದೇ ಮಂಡ್ಯದ ಡಿ.ಎ.ಆರ್. ಪೊಲೀಸ್ ಸಿಬ್ಬಂದಿ ವಜಾ ಪ್ರಕರಣದ ಬಗ್ಗೆ ಪತ್ರಿಕೆಯಲ್ಲಿ ಬಂದ ಫೋಟೋವನ್ನು ಶೇರ್ ಮಾಡಿ ‘ಗುಬ್ಬಿ ಮೇಲೆ ಬ್ರಮ್ಮಾಸ್ತ್ರ’ ಎಂದು ಬರೆದಿದ್ದಾರೆ.

DYSp Anupama Shenoy (2) DYSp Anupama Shenoy (1) DYSp Anupama Shenoy (3)

(ಫೇಸ್‌ಬುಕ್‌ನಲ್ಲಿ ಜನರು ಹಾಕುತ್ತಿರುವ ಫೋಟೋಸ್ )

ಜಸ್ಟೀಸ್ ಫಾರ್ ಅನುಪಮಾ…..
ಇನ್ನು ಫೇಸ್‌ಬುಕ್ಕಿನಲ್ಲಿ ಈಗಾಗಲೇ “ಜಸ್ಟೀಸ್ ಪಾರ್ ಅನುಪಮಾ ಶೆಣೈ” ಎಂಬ ಹೆಸರಿನಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ. ಅನುಪಮಾ ಅವರ ಸ್ಟೇಟಸ್, ಫೋಟೋಗಳಿಗೆ ಸಾವಿರಾರು ಜನರು ಲೈಕ್, ಕಮೆಂಟ್ ಮಾಡುತ್ತಿರುವುದಲ್ಲದೇ ಶೇರ್ ಮಾಡುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಅಲ್ಲದೇ ‘ನಿಮ್ಮೊಂದಿಗಿದ್ದೇವೆ, ರಾಜಿನಾಮೆ ಕೊಡಬೇಡಿ’ ಎನ್ನುವ ಕಮೆಂಟ್ ಹಾಕಿ ಸಪೋರ್ಟ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ರಾಜಕೀಯ ವ್ಯವಸ್ಥೆ, ಹಿರಿಯ ಅಧಿಕಾರಿಗಳಿಂದ ದಕ್ಷ ಅಧಿಕಾರಿಗಳಿಗಾಗುತ್ತಿರುವ ಕೆಲಸ ತೊಡಕಿನ ಬಗ್ಗೆಯೂ ಜನರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ನಿಷ್ಟಾವಂತ ಅಧಿಕಾರಿಯೊಬ್ಬರನ್ನು ವ್ಯವಸ್ಥೆಯ ಕಾಣದಕೈಗಳು ಕೈಕಟ್ಟಿ ಕೂರುವಂತೆ ಮಾಡಿದ್ದಂತೂ ನಿಜ. ಇದಕ್ಕೆ ನಮ್ಮನ್ನಾಳುವ ಸರಕಾರ ಹಾಗೂ ಇಲಾಖೆಯ ಮೇಲಧಿಕಾರಿಗಳ ಅ‘ವ್ಯವಸ್ಥೆ’ ಕಾರಣ ಎಂಬುದು ಜನಕ್ಕೆ ಸ್ಪಷ್ಟವಾಗಿ ತಿಳಿದುಹೋಗಿದೆ.

Comments are closed.