ಕರಾವಳಿ

ಕುಂದಾಪುರ(ಬೇಳೂರು): 40 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ; ಕುಂದಾಪುರ ಅಗ್ನಿಶಾಮಕ ದಳದ ಕಾರ್ಯಾಚರಣೆ

Pinterest LinkedIn Tumblr

* ಯೋಗೀಶ್ ಕುಂಭಾಸಿ

ಕುಂದಾಪುರ: ಮನೆಯ ಬಾವಿಯ ಕೆಸರು ತೆಗೆಯುವ ವೇಳೆ ಬಾವಿಗೆ ಬಿದ್ದ ವ್ಯಕ್ತಿಯೋರ್ವರನ್ನು ಕುಂದಾಪುರ ಅಗ್ನಿಶಾಮಕ ದಳ ಸಿಬ್ಬಂದಿಗಳು ರಕ್ಷಿಸಿದ ಘಟನೆ ಕುಂದಾಪುರದ ತೆಕ್ಕಟ್ಟೆ ಸಮೀಪದ ಬೇಳೂರು ಎಂಬಲ್ಲಿ ಭಾನುವಾರ ನಡೆದಿದೆ.

ಬೇಳೂರು ನಿವಾಸಿ ಕರುಣಾಕರ ಶೆಟ್ಟಿ (56) ಬಾವಿಗೆ ಬಿದ್ದು ರಕ್ಷಿಸಲ್ಪಟ್ಟ ವ್ಯಕ್ತಿ.

Belur_Man Falling_Well (12) Belur_Man Falling_Well (10) Belur_Man Falling_Well (4) Belur_Man Falling_Well (6) Belur_Man Falling_Well (11) Belur_Man Falling_Well (13) Belur_Man Falling_Well (8) Belur_Man Falling_Well (7) Belur_Man Falling_Well (9) Belur_Man Falling_Well (5) Belur_Man Falling_Well (3) Belur_Man Falling_Well (2) Belur_Man Falling_Well (1)

ಘಟನೆ ವಿವರ: ಕರುಣಾಕರ್ ಶೆಟ್ಟಿ ಅವರು ತನ್ನದೇ ಮನೆಯ 40 ಅಡಿಗೂ ಅಧಿಕ ಆಳದ ಬಾವಿಯ ಕೆಸರು ತೆಗೆಯುವ ಕಾರ್ಯವನ್ನು ನಾಲ್ಕಾರು ಕೆಲಸದಾಳುಗಳ ಕೈಯಲ್ಲಿ ಮಾಡಿಸುತ್ತಿದ್ದರು. ಮಧ್ಯಾಹ್ನದ ಊಟದ ತರುವಾಯ ಕೆಲಸದಾಳುಗಳ ಜೊತೆ ತಾನು ಬಾವಿಗಿಳಿದು ಒಂದಷ್ಟು ಹೊತ್ತು ಕೆಲಸವನ್ನು ಮಾಡಿ ಮೇಲಕ್ಕೆ ಹತ್ತುವಾಗ ಈ ಘಟನೆ ನಡೆದಿದೆ. ಬಹುತೇಕ ಮೇಲಕ್ಕೆ ಹಗ್ಗದ ಸಹಾಯದಿಂದ ಏರಿದ್ದ ಅವರು ಇನ್ನೇನು ಮೇಲಕ್ಕೆ ಬಂದೇ ಬಿಡುತ್ತಾರೆನ್ನುವ ಸಂದರ್ಭ ಹಗ್ಗ ಕೈಜಾರಿ ಮೇಲಿನಿಂದ ಆಳಕ್ಕೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಿಸುವ ಪ್ರಯತ್ನವನ್ನು ಸ್ಥಳೀಯರು ಮಾಡಿದರಾದರೂ ಕೂಡ ಕರುಣಾಕರ ಶೆಟ್ಟಿ ಅವರ ಕಾಲಿನ ಭಾಗಕ್ಕೆ ಬಲವಾದ ಗಾಯವಾದ ಕಾರಣ ಮತ್ತು ಸ್ಥಳೀಯರಿಗೆ ಬವಿಯಿಂದ ಮೇಲಕ್ಕೆತ್ತುವ ಯಾವುದೇ ಉಪಾಯವಿಲ್ಲದ ಕಾರಣ ಅದು ಅಸಾಧ್ಯವಾಗಿ ಕುಂದಾಪುರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ
ಬೇಳೂರು ಕಡೆಯಿಂದ ಕರೆ ಬರುತ್ತಲೇ ತಕ್ಷಣ ಕುಂದಾಪುರ ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ದೌಡಾಯಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಪ್ರದೀಪ್ ನಾಯ್ಕ್, ರವೀಂದ್ರ ದೇವಾಡಿಗ ಅವರು ಬಾವಿಗಿಳಿದು ಏಣಿಯ ಹಾಗೂ ಹಗ್ಗದ ಸಹಾಯದಿಂದ ಕರುಣಾಕರಶೆಟ್ಟಿಯವರನ್ನು ನಾಜೂಕಾಗಿ ಮೇಲಕ್ಕೆತ್ತುವ ಕಾರ್ಯವನ್ನು ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ನೆರೆದಿದ್ದ ಜನರು ಸಹಕಾರ ನೀಡಿದ್ದರು.

ಕರುಣಾಕರ್ ಶೆಟ್ಟಿ ಅವರ ಕಾಲಿಗೆ ಬಲವಾದ ಏಟಾಗಿದ್ದ ಕಾರಣ ಅವರನ್ನು ಸ್ಫೂರ್ತಿಧಾಮದ ಆಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಸಂದರ್ಭ ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಭರತ್ ಕುಮಾರ್, ಕುಂದಾಪುರ ಉಪಠಾಣಾಧಿಕಾರಿ ನವೀನ್, ಅಗ್ನಿಶಾಮಕ ಸಿಬ್ಬಂದಿಗಳಾದ ಮುಸ್ತಾಫ್, ಕೃಷ್ಣ ನಾಯ್ಕ್, ಸಂತೋಷ್ ಶೆಟ್ಟಿ, ಕೆದೂರು ಸ್ಪೂರ್ತಿಧಾಮದ ಕಾರ್ಯನಿರ್ವಾಹಕ ಡಾ. ಕೇಶವ ಕೊಟೇಶ್ವರ ಮೊದಲಾದವರು ಉಪಸ್ಥಿತರಿದ್ದರು.

Comments are closed.