ಕರಾವಳಿ

ಡಿವೈಎಸ್‍ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಫೇಸ್‍ಬುಕ್‍ನಲ್ಲಿ ಪ್ರತ್ಯಕ್ಷ! ಸರ್ಕಾರದ ಬಗ್ಗೆ ಏನು ಕಿಡಿಕಾರಿದ್ದಾರೆ….ಮುಂದೆ ಓದಿ…

Pinterest LinkedIn Tumblr

Anupama

ಬೆಂಗಳೂರು: ಕಳೆದೆರಡು ದಿನಗಳಿಂದ ಮೌನವಾಗಿರುವ ಕೂಡ್ಲಿಗಿ ಡಿವೈಎಸ್‍ಪಿ ಅನುಪಮಾ ಶೆಣೈ ಫೇಸ್‍ಬುಕ್‍ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ತನ್ನ ರಾಜೀನಾಮೆ ಹಿನ್ನೆಲೆಯಲ್ಲಿ ಜಸ್ಟಿಸ್ ಫಾರ್ ಅನುಪಮಾ ಶೆಣೈ ಎಂದು ಫೇಸ್‍ಬುಕ್‍ನಲ್ಲಿ ಆರಂಭವಾಗಿರೋ ಅಭಿಯಾನಕ್ಕೆ ಅನುಪಮಾ ಪ್ರತಿಕ್ರಿಯಿಸಿದ್ದಾರೆ.

ಇದು ನಡೆದಿರುವ ಘಟನೆ, ಸಿದ್ದರಾಮಯ್ಯರ ‘ರಮ್’ ರಾಜ್ಯ ಎಂದು ಬರೆದು ಅನುಪಮ ಶೆಣೈ ಫೇಸ್‍ಬುಕ್‍ನಲ್ಲಿ ಕಿಡಿಕಾರಿದ್ದಾರೆ.

ಫೇಸ್‍ಬುಕ್ ಅಭಿಯಾನದ ಪೇಜ್‍ನಲ್ಲೇನಿದೆ..?
ಅಂಬೇಡ್ಕರ್ ಭವನದ ರಸ್ತೆ ರಕ್ಷಣೆಗೆ ನಿಂತ ದಕ್ಷ ಅಧಿಕಾರಿ ಅನುಪಮಾ ಶೆಣೈಯವರಿಗೆ `ಕಿರುಕುಳ ಭಾಗ್ಯ’. ಬಾಯಿಬಿಟ್ಟರೆ ದಲಿತರ ಉದ್ಧಾರ ಮಾಡ್ತೇವೆ ಎಂದು ಹೇಳಿದ ಸಿದ್ದು ಸರಕಾರದಿಂದ ಇದೇನಿದು ದ್ವಂದ್ವ ನೀತಿ. ಅಂಬೇಡ್ಕರ್ ಭವನದ ಪಕ್ಕದಲ್ಲಿಯೇ ಇರುವ ಮದ್ಯದಂಗಡಿ ಅದರ ಪಕ್ಕದ ರಸ್ತೆ ಕಾಂಗ್ರೆಸ್ ಗೂಂಡಾಗಳಿಂದಲೇ ಒತ್ತುವರಿ. ದಲಿತರ ಕಂಪ್ಲೇಂಟ್ ಆಧಾರದಲ್ಲಿ ಅದನ್ನು ಪ್ರಶ್ನಿಸಿದರು ಅನುಪಮಾ ಶೆಣೈ. ಅಷ್ಟಕ್ಕೇ ಅವರ ವಿರುದ್ಧವಾಗಿ ಪ್ರತಿಭಟನೆಗಳು ನಡೆದವು. ಅವರಿಗೆ ಸಾಲು ಸಾಲು ಒತ್ತಡ ತರುವ ಪ್ರಯತ್ನವೂ ನಡೆದವು, ಕಿರುಕುಳವನ್ನೂ ನೀಡಲಾಯಿತು. ಇದರಿಂದ ಮನನೊಂದ ಅನುಪಮಾ ಶೆಣೈ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು. ನ್ಯಾಯ ಎಲ್ಲಿದೆ? ಎಂದು ವ್ಯಕ್ತಿಯೊಬ್ಬರು ಹಾಕಿರುವ ಪೋಸ್ಟನ್ನು ಅನುಪಮಾ ಶೆಣೈ ಶೇರ್ ಮಾಡಿಕೊಂಡಿದ್ದಾರೆ.

Comments are closed.