ರಾಷ್ಟ್ರೀಯ

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ ಕಟುಕ …ಶವದ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ !

Pinterest LinkedIn Tumblr

rape

ನವದೆಹಲಿ: ಕುಡಿದ ಅಮಲಿನಲ್ಲಿ ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಕೊಲೆಗೈದು, ಆಕೆಯ ಶವದ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಬೆಳಿಗ್ಗೆಯವರೆಗೂ ಶವದ ಜೊತೆ ಮಲಗಿ ನಂತರ 5 ದಿನಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದ ಪ್ರದೀಪ್ ಶರ್ಮಾ ಹಾಗೂ ಮೋನಿಕಾ ಪರಸ್ಪರ ಪ್ರೀತಿಸಿ ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ನಂತರ ಈ ದಂಪತಿ ದೆಹಲಿಗೆ ತಮ್ಮ ವಾಸ್ತ್ಯವನ್ನು ಬದಲಾಯಿಸಿಕೊಂಡಿದ್ದರು. ನಿರುದ್ಯೋಗಿಯಾಗಿದ್ದ ಪ್ರದೀಪ್ ಅಟೋರಿಕ್ಷಾ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಆದರೆ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಪ್ರದೀಪ್‍ಗೆ ದೊರೆಯದ ಕಾರಣ ಮನೆಯಲ್ಲಿ ದಿನನಿತ್ಯ ಜಗಳಗಳಾಗುತ್ತಿತ್ತು.

ಕಳೆದ ಸೋಮವಾರ ಮನೆ ಮಾಲೀಕ ಬಾಡಿಗೆ ಕಟ್ಟದ ವಿಷಯದಲ್ಲಿ ದಂಪತಿಯನ್ನ ತರಾಟೆಗೆತ್ತಿಕೊಂಡಿದ್ರು. ಈ ಹಿನ್ನಲೆಯಲ್ಲಿ ಜಗಳ ಅತಿರೇಕಕ್ಕೆ ಹೋಗಿದ್ದು, ಮದ್ಯದ ಅಮಲಿನಲ್ಲಿ 23 ವರ್ಷದ ಮೋನಿಕಾಳನ್ನು ಕೊಲೆ ಮಾಡಿರುವುದಾಗಿ ಪ್ರದೀಪ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ.

Comments are closed.