ಕರಾವಳಿ

ಎತ್ತಿನಹೊಳೆಯಿಂದ ಮಳೆಗಾಲದಲ್ಲಿ ಮಾತ್ರ 24 ಟಿಎಂಸಿ ನೀರು – ಯೋಜನೆಯ ಮೊದಲ ಹಂತ 2018ಕ್ಕೆ ಪೂರ್ಣ : ಮೊಯ್ಲಿ

Pinterest LinkedIn Tumblr

veerappa_moily_minister

ಮಂಗಳೂರು, ಜೂನ್ .1 : ಎತ್ತಿನಹೊಳೆ ನೀರಾವರಿ ಯೋಜನೆಯ ಕಾಮಗಾರಿ ಚಾಲನೆಯಲ್ಲಿದ್ದು 2018ರ ವೇಳೆಗೆ ಪೂರ್ತಿಗೊಳ್ಳಲಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.

ರೈತರು ಸ್ವ-ಇಚ್ಛೆಯಿಂದಲೇ ಮುಂದೆ ಬಂದು ಯೋಜನೆಗೆ ಬೇಕಾದ ಭೂಮಿಯನ್ನು ಒದಗಿಸಿದ್ದಾರೆ. ಈಗಾಗಲೇ 124 ಎಕ್ರೆ ಭೂಮಿಯನ್ನು ಸ್ವಾಧೀನ ಪಡಿಸಲಾಗಿದೆ.  ಈ ಯೋಜನೆಯಿಂದ ಮಳೆಗಾಲದಲ್ಲಿ 24 ಟಿಎಂಸಿಯಷ್ಟು ನೀರು ಸಿಗಲಿದೆ ಎಂದು ಮೊಯ್ಲಿ ಹೇಳಿದ್ದಾರೆ.

‘ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳೊಳಗೆ ಮಾತ್ರ ಎತ್ತಿನಹೊಳೆ ಯೋಜನೆಯಿಂದ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಈಗಾಗಲೇ ಅನೇಕ ಕಂಪೆನಿಗಳು ಮಳೆಗಾಲದಲ್ಲಿ 24 ಟಿಎಂಸಿಯಷ್ಟು ನೀರು ಸಿಗುವುದನ್ನು ಖಾತ್ರಿಪಡಿಸಿವೆ. ಹೀಗಾಗಿ ಎತ್ತಿನಹೊಳೆ ಯೋಜನೆಯನ್ನು ನೀರು ಸಿಗದ ಯೋಜನೆ ಎನ್ನುವುದು ಸರಿಯಲ್ಲ’ ಎಂದು ಮೊಯ್ಲಿ ಹೇಳಿದ್ದಾರೆ.

Comments are closed.