ಕರಾವಳಿ

ನರೇಶ್ ಶೆಣೈ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ.

Pinterest LinkedIn Tumblr

Baliga_murder_naresh

ಮಂಗಳೂರು,ಮೇ.31:ಆರ್ ಟಿ ಐ ಕಾರ್ಯಕರ್ತ ವಿನಾಯಕ ಪಿ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ನರೇಶ್ ಶೆಣೈ ರಾಜ್ಯ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ.

ಅರ್ಜಿದಾರರ ಪರವಾಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದ ವಕೀಲ ಟಿ.ಪ್ರಕಾಶ್ ಅವರು ಈ ಪ್ರಕರಣದಿಂದ ಹಿಂದೆ ಸರಿದಿದ್ದು, ಅವರ ಸ್ಥಾನದಲ್ಲಿ ವಕೀಲ ಶ್ಯಾಮ ಸುಂದರ್ ಅವರನ್ನು ನೇಮಿಸಿಲಾಗಿದೆ,

ಈ ಪ್ರಕರಣವನ್ನು ಅಧ್ಯಯನ ಮಾಡಲು ತಮಗೆ ಸ್ವಲ್ಪ ಕಾಲಾವಕಾಶ ಬೇಕೆಂದು ವಕೀಲರಾದ ಶ್ಯಾಮ ಸುಂದರ್ ಅವರು ನ್ಯಾಯಾಲಯದಲ್ಲಿ ವಿನಂತಿಸಿದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದ್ದು, ಜೂನ್.1ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ.

ಇನ್ನೊಂದು ಕಡೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಸಹಕರಿಸಲು ನ್ಯಾಯವಾದಿ ಎನ್.ರವೀಂದ್ರನಾಥ ಕಾಮತ್ ಅವರನ್ನು ನೇಮಿಸಲು ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗರ ತಂದೆ ರಾಮಚಂದ್ರ ಬಾಳಿಗ ಅವರು ಮಾಡಿದ ಕೋರಿಕೆಯನ್ನೂ ಹೈಕೋರ್ಟ್ ಪುರಸ್ಕರಿಸಿದೆ.

Comments are closed.