ಕರಾವಳಿ

2.5 ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಸ್ಟಮ್ಸ್ ಕಮಿಷನರೇಟ್ ಸಿಬ್ಬಂದಿಗಳ ವಸತಿಗೃಹ ಉದ್ಘಾಟನೆ.

Pinterest LinkedIn Tumblr

Customs_cottrs_1

ಮಂಗಳೂರು,ಮೇ.31: ನಗರದ ಬಿಕರ್ನಕಟ್ಟೆಯಲ್ಲಿ ಮಂಗಳೂರು ಕಸ್ಟಮ್ಸ್ ಕಮಿಷನರೇಟ್ ಸಿಬ್ಬಂದಿಗಳಿಗಾಗಿ ನಿರ್ಮಿಸಲಾಗಿರುವ ವಸತಿಗೃಹ ಸಮುಚ್ಚಯದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ವಸತಿ ಸಮುಚ್ಚಯದಲ್ಲಿ ಒಟ್ಟು 72 ಫ್ಯಾಟ್‌ಗಳಿದ್ದು ಒಟ್ಟು 6 ಬ್ಲಾಕ್‌ಗಳನ್ನು ಹೊಂದಿದೆ.12.5 ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಒಟ್ಟು 4.2ಎಕ್ರೆ ಪ್ರದೇಶವನ್ನು ಹೊಂದಿದೆ.

ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಆಂಡ್ ಕಸ್ಟಮ್ಸ್ (ಸಿಬಿಇಸಿ) ಸದಸ್ಯೆ ವನಜಾ ಎನ್. ಸರ್ನಾ ಅವರು ವಸತಿಗೃಹ ಸಮುಚ್ಚಯವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಿಬಂದಿಯ ವಸತಿಗೃಹ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ದಿಗೆ ಅದ್ಯತೆ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ಇಲಾಖೆಯ ಸಿಬ್ಬಂದಿ ಗೃಹಗಳು ಸುಂದರವಾಗಿ ನಿರ್ಮಾಣಗೊಂಡಿದೆ ಎಂದರು.

Customs_cottrs_2 Customs_cottrs_3 Customs_cottrs_4 Customs_cottrs_5 Customs_cottrs_6 Customs_cottrs_7 Customs_cottrs_8 Customs_cottrs_9 Customs_cottrs_10

ಸಮಾರಂಭದಲ್ಲಿ ಅವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಕಸ್ಟಮ್ಸ್ ಬೆಂಗಳೂರು ವಲಯದ ಮುಖ್ಯ ಆಯುಕ್ತ ರಾಜೀವ್ ಭೂಷಣ್ ತಿವಾರಿ ಮಾತನಾಡಿ, ಕರ್ನಾಟಕ ಕರಾವಳಿಯಲ್ಲಿ ಕಸ್ಟಮ್ಸ್ ಇಲಾಖೆಗೆ ಸೇರಿದ ಹಲವು ಜಾಗಗಳಿದ್ದು ಇದರ ದಾಖಲೆ ಸಂಗ್ರಹಿಸಿ ಡಿಜಿಟಲೀಕರಣಗೊಳಿಸಲಾಗುವುದು ಮಂಗಳೂರು ಹಳೇ ಬಂದರು ಪ್ರದೇಶದಲ್ಲಿರುವ ಕಸ್ಟಮ್ಸ್ ಇಲಾಖೆಗೆ ಹಳೆಯ ಕಚೇರಿ ಹಾಗೂ ಗೋದಾಮು ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಪ್ರಾಥಮಿಕ ಹಂತವಾಗಿ ಇದಕ್ಕೆ ಅವರಣ ಬೇಲಿ ನಿರ್ಮಿಸಲಾಗುವುದು ಎಂದು ಹೇಳಿದರು.

ಕೇಂದ್ರ ಲೋಕೋಪಯೋಗಿ ಇಲಾಖೆಯ ಬೆಂಗಳೂರು ವಲಯದ ಮುಖ್ಯ ಎಂಜಿನಿಯರ್ ಆರ್.ಕೆ.ಸೋನಿ ಅತಿಥಿಗಳಾಗಿದ್ದರು.ಮಂಗಳೂರು ಕಸ್ಟಮ್ಸ್ ಸೆಂಟ್ರಲ್ ಎಕ್ಸೈಸ್ ಯಾಂಡ್ ಸರ್ಮಿಸ್ ಟ್ಯಾಕ್ಸ್ ಕಮಿಷನರೇಟ್ ನ ಅಯುಕ್ತ ಡಾ.ಎಂ.ಸುಬ್ರಹ್ಮಣಂ ಅವರು ಸ್ವಾಗತಿಸಿದರು. ಉಪ ಆಯುಕ್ತ ಪ್ರವೀಣ್ ವಿನೋದ್ ಅವರು ವಂದಿಸಿದರು.

Comments are closed.