ಕರಾವಳಿ

ಹೊರ ರಾಜ್ಯಕ್ಕೆ ಅಕ್ರಮ ಮರಳು ಸಾಗಾಟ : ಮೂರು ಲಾರಿ ಸಹಿತಾ ಮೂವರು ಆರೋಪಿಗಳ ಸೆರೆ

Pinterest LinkedIn Tumblr

sand_lorry_2209990f

ಕೊಣಾಜೆ, ಮೇ 27: ಕೋಣಾಜೆ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹೊರರಾಜ್ಯಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ, ಮೂರು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕಲ್ಲಾಪು ಪ್ರದೇಶದಿಂದ ಕೇರಳಕ್ಕೆ ಅಕ್ರಮವಾಗಿ ಲಾರಿಗಳ ಮೂಲಕ ಮರಳು ಸಾಗಾಟ ಮಾಡುತ್ತಿದ್ದಾಗ ಇನ್‌ಸ್ಪೆಕ್ಟರ್ ಅಶೋಕ್ ನೇತೃತ್ವದ ಪೊಲೀಸರ ತಂಡ ಲಾರಿಗಳನ್ನು ವಶಪಡಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಸೈ ಮದಕ ನಿವಾಸಿ ಮುಹಮ್ಮದ್ ಅಶ್ರಫ್(23), ಬೆಳ್ಮ ದೇರಳಕಟ್ಟೆಯ ಮುಹಮ್ಮದ್ ಮುಖ್ತಾರ್(24) ಹಾಗೂ ತಲಪಾಡಿ ಕೆ.ಸಿ.ರೋಡ್‌ನ ಇಬ್ರಾಹೀಂ(56) ಎಂದು ಗುರುತಿಸಲಾಗಿದೆ. ಪ್ರಕರಣ ಕೊಣಾಜೆ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಂಪೂರ್ಣ ವಿವರ :

ಕೋಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ದಿನಾಂಕ 26-05-2016 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ನೆತ್ತಿಲಪದವು ಕ್ವಾರ್ಟಸ್ ಬಳಿ ಮಂಗಳಾಂತಿ ಕಡೆಯಿಂದ ಬರುತ್ತಿದ್ದ ಲಾರಿ ನಂಬ್ರ ಕೆಎಲ್-32-ಡಿ- 7975 ನೇಯದನ್ನು ನಿಲ್ಲಿಸಿ ಪರಿಶೀಲಿಸಲಾಗಿ ಸದ್ರಿ ಲಾರಿಯಲ್ಲಿ ಮರಳು ತುಂಬಿಸಿದ್ದು, ಈ ಬಗ್ಗೆ ಸದ್ರಿ ಟಿಪ್ಪರ್ ಲಾರಿ ಚಾಲಕರಾದ ಇಬ್ರಾಹಿಂ ಎಂಬುವರನ್ನು ವಿಚಾರಿಸಿ ಟಿಪ್ಪರ್ ಲಾರಿಯನ್ನು ಪರಶಿಲಿಸಲಾಗಿ ಯಾವುದೇ ದಾಖಲಾತಿಗಳು ಇಲ್ಲದೇ ಇದ್ದು, ಆರೋಪಿಗಳಾದ ಟಿಪ್ಪರ್ ಲಾರಿ ಚಾಲಕ ಇಬ್ರಾಹಿಂ ಮತ್ತು ಮಾಲಕರಾದ ಬಾವಾಕ ಎಂಬುವರು ಒಟ್ಟುಸೇರಿ ಮರಳನ್ನು ಉಳ್ಳಾಲ ಕಲ್ಲಾಪು ಬಳಿ ಹರಿದು ಹೋಗುವ ನೇತ್ರಾವತಿ ನದಿಯಿಂದ ಕಳವು ಮಾಡಿ, ಸದ್ರಿ ಟಿಪ್ಪರ್ ಲಾರಿಯಲ್ಲಿ ತುಂಬಿಸಿ ಕರ್ನಾಟಕ ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ ಮರಳನ್ನು ತೆಗೆಯಲು ಹಾಗೂ ಸಾಗಾಟ ಮಾಡಲು ಯಾವುದೇ ಪರವಾನಿಗೆ ಪಡೆಯದೇ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಹೊರ ರಾಜ್ಯ ಯಾ ಹೊರ ಜಿಲ್ಲೆಗೆ ಸಾಗಾಟ ಮಾಡುತ್ತಿರುವುದು ಖಚಿತ ಪಟ್ಟ ಮೇರೆಗೆ ಮರಳು ತುಂಬಿದ ಟಿಪ್ಪರ್ ಲಾರಿ ಮತ್ತು ಅದರ ಚಾಲಕನನ್ನು ಸ್ವಾಧೀನ ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.

ಕೋಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ದಿನಾಂಕ 26-05-2016 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ತೌಡುಗೋಳಿ ಜಂಕ್ಷನ್ ನಲ್ಲಿ ಮಂಜನಾಡಿ ಕಡೆಯಿಂದ ಬರುತ್ತಿದ್ದ ಲಾರಿ ನಂಬ್ರ ಕೆಎ-19-ಸಿ-6084ನೇಯದನ್ನು ನಿಲ್ಲಿಸಿ ಪರಿಶೀಲಿಸಲಾಗಿ ಸದ್ರಿ ಲಾರಿಯಲ್ಲಿ ಮರಳು ತುಂಬಿಸಿದ್ದು, ಈ ಬಗ್ಗೆ ಸದ್ರಿ ಟಿಪ್ಪರ್ ಲಾರಿ ಚಾಲಕರಾದ ಮಹಮ್ಮದ್ ಮುಕ್ತಾರ್ ಎಂಬುವರನ್ನು ವಿಚಾರಿಸಿ ಟಿಪ್ಪರ್ ಲಾರಿಯನ್ನು ಪರಶಿಲಿಸಲಾಗಿ ಯಾವುದೇ ದಾಖಲಾತಿಗಳು ಇಲ್ಲದೇ ಇದ್ದು, ಆರೋಪಿಗಳಾದ ಟಿಪ್ಪರ್ ಲಾರಿ ಚಾಲಕ ಮಹಮ್ಮದ್ ಮುಕ್ತಾರ್ ಮತ್ತು ಮಾಲಕರಾದ ಅದ್ರಾಮ @ ಅಬ್ದುಲ್ ರಹಿಮಾನ್ ಎಂಬುವರು ಒಟ್ಟುಸೇರಿ ಮರಳನ್ನು ಉಳ್ಳಾಲ ಕಲ್ಲಾಪು ಬಳಿ ಹರಿದು ಹೋಗುವ ನೇತ್ರಾವತಿ ನದಿಯಿಂದ ಕಳವು ಮಾಡಿ, ಸದ್ರಿ ಟಿಪ್ಪರ್ ಲಾರಿಯಲ್ಲಿ ತುಂಬಿಸಿ ಕರ್ನಾಟಕ ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ ಮರಳನ್ನು ತೆಗೆಯಲು ಹಾಗೂ ಸಾಗಾಟ ಮಾಡಲು ಯಾವುದೇ ಪರವಾನಿಗೆ ಪಡೆಯದೇ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಹೊರ ರಾಜ್ಯ ಯಾ ಹೊರ ಜಿಲ್ಲೆಗೆ ಸಾಗಾಟ ಮಾಡುತ್ತಿರುವುದು ಖಚಿತ ಪಟ್ಟ ಮೇರೆಗೆ ಮರಳು ತುಂಬಿದ ಟಿಪ್ಪರ್ ಲಾರಿ ಮತ್ತು ಅದರ ಚಾಲಕನನ್ನು ಸ್ವಾಧೀನ ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಜಜರುಗಿಸಲಾಗಿದೆ.

ಕೋಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ದಿನಾಂಕ 26-05-2016 ರಂದು ನೆತ್ತಿಲಪದವು ಜಂಕ್ಷನ್ ನಲ್ಲಿ ಮಂಜನಾಡಿ ಕಡೆಯಿಂದ ಬರುತ್ತಿದ್ದ ಲಾರಿ ನಂಬ್ರ ಕೆಎಲ್-40-ಡಿ-1228ನೇಯದನ್ನು ನಿಲ್ಲಿಸಿ ಪರಿಶೀಲಿಸಲಾಗಿ ಸದ್ರಿ ಲಾರಿಯಲ್ಲಿ ಮರಳು ತುಂಬಿಸಿದ್ದು, ಈ ಬಗ್ಗೆ ಸದ್ರಿ ಟಿಪ್ಪರ್ ಲಾರಿ ಚಾಲಕರಾದ ಮಹಮ್ಮದ್ ಅಶ್ರಫ್ಎಂಬುವರನ್ನು ವಿಚಾರಿಸಿ ಟಿಪ್ಪರ್ ಲಾರಿಯನ್ನು ಪರಶಿಲಿಸಲಾಗಿ ಯಾವುದೇ ದಾಖಲಾತಿಗಳು ಇಲ್ಲದೇ ಇದ್ದು, ಆರೋಪಿಗಳಾದ ಟಿಪ್ಪರ್ ಲಾರಿ ಚಾಲಕ ಮಹಮ್ಮದ್ ಅಶ್ರಫ್ ಮತ್ತು ಮಾಲಕರಾದ ಅದ್ರಾಮ @ ಅಬ್ದುಲ್ ರಹಿಮಾನ್ ಎಂಬುವರು ಒಟ್ಟುಸೇರಿ ಮರಳನ್ನು ಉಳ್ಳಾಲ ಕಲ್ಲಾಪು ಬಳಿ ಹರಿದು ಹೋಗುವ ನೇತ್ರಾವತಿ ನದಿಯಿಂದ ಕಳವು ಮಾಡಿ, ಸದ್ರಿ ಟಿಪ್ಪರ್ ಲಾರಿಯಲ್ಲಿ ತುಂಬಿಸಿ ಕರ್ನಾಟಕ ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ ಮರಳನ್ನು ತೆಗೆಯಲು ಹಾಗೂ ಸಾಗಾಟ ಮಾಡಲು ಯಾವುದೇ ಪರವಾನಿಗೆ ಪಡೆಯದೇ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಹೊರ ರಾಜ್ಯ ಯಾ ಹೊರ ಜಿಲ್ಲೆಗೆ ಸಾಗಾಟ ಮಾಡುತ್ತಿರುವುದು ಖಚಿತ ಪಟ್ಟ ಮೇರೆಗೆ ಮರಳು ತುಂಬಿದ ಟಿಪ್ಪರ್ ಲಾರಿ ಮತ್ತು ಅದರ ಚಾಲಕನನ್ನು ಸ್ವಾಧೀನ ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.

Comments are closed.