ಕರಾವಳಿ

ಮಂಗಳೂರಿನಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಸಮುದ್ರದ ಉಪ್ಪು ನೀರು ಸಂಸ್ಕರಣಾ ಘಟಕ ಸ್ಥಾಪನೆ..!

Pinterest LinkedIn Tumblr

Sea-salt-water

ಮಂಗಳೂರು: ಕೈಗಾರಿಕೆಗಳಿಗೆ ಪರ್ಯಾಯ ನೀರಿನ ಬಳಕೆಗೆ ದ.ಕ. ಜಿಲ್ಲಾಡಳಿತ ಯೋಚಿಸಿದೆ. ಇದಕ್ಕಾಗಿ ಸಮುದ್ರದ ಉಪ್ಪು ನೀರು ಸಂಸ್ಕರಿಸಿ ಕೈಗಾರಿಕೆಗಳಿಗೆ ಬಳಸುವ ಯೋಜನೆಗಳ ಬಗ್ಗೆ ಪೂರ್ವಸಿದ್ಧತಾ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರದ ಪ್ರಮುಖ ಕೈಗಾರಿಕೆಗಳ ಪ್ರತಿನಿಧಿಗಳು, ಜಿಲ್ಲಾ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಬುಧವಾರ ಪ್ರಾಥಮಿಕ ಸಭೆ ನಡೆಸಿದ ಅವರು, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ ಅವರು, ಎಂಆರ್‌ಪಿಎಲ್‌, ಎಸ್‌ಇಝಡ್‌, ಎಂಸಿಎಫ್‌ ಮೊದಲಾದ ಕೈಗಾರಿಕೆಧಿಗಳ ಭವಿಷ್ಯದ ನೀರಿನ ಬೇಡಿಕೆ ಬಗ್ಗೆ ಲೆಕ್ಕಾಚಾರ ಮಾಡಿ ಸಮಗ್ರ ವರದಿ ತಯಾರಿಸುವಂತೆ ಜಂಟಿ ನಿರ್ದೇಶಕರಿಗೆ (ಕೈಗಾರಿಕೆ) ಸೂಚಿಸಿದರು.

Sea-salt-water-2

ಉಪ್ಪು ನೀರು ಸಂಸ್ಕರಣಾ ಘಟಕ ಸ್ಥಾಪಿಸಲು 95ರಿಂದ 100 ಕೋಟಿ ರೂ. ವೆಚ್ಚ ತಗಲಲಿದ್ದು, ಕನಿಷ್ಠ 10 ಎಂಎಲ್‌ಡಿ ಸಂಸ್ಕರಣಾ ಘಟಕವನ್ನು ಆರಂಭಿಸಬೇಕಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಎಸ್‌ಪಿವಿ (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ರಚನೆ ಮಾಡಿಕೊಳ್ಳುವ ಜತೆಗೆ, ಘಟಕ ನೀರಿನ ಮೂಲದ ಸಮೀಪದಲ್ಲೇ ನಿರ್ಮಿಸುವುದು ಅಗತ್ಯ ಎಂದು ಎಂಸಿಎಫ್‌ ನಿರ್ದೇಶಕ ಪ್ರಭಾಕರ ರಾವ್‌ ತಿಳಿಸಿದರು.

1,000 ಲೀಟರ್‌ ಉಪ್ಪು ನೀರು ಸಂಸ್ಕರಿಸಲು ನಿರ್ವ ಹಣಾ ವೆಚ್ಚ ಅಂದಾಜು 40 ರೂ. ಆಗಲಿದೆ. 20 ಎಂಎಲ್‌ಡಿ ಉಪ್ಪು ನೀರಿನ ಸಂಸ್ಕರಣಾ ಘಟಕಕ್ಕೆ 10 ಎಕರೆ ಭೂಮಿ ಅಗತ್ಯ. ಘಟಕಕ್ಕೆ ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕಾ ಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳ ಬಳಿಕ 18ರಿಂದ 20 ತಿಂಗಳಲ್ಲಿ ಘಟಕ ನಿರ್ಮಾಣ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.

1997ರಲ್ಲಿ ಸಂಸ್ಥೆ ಗುಜರಾತ್‌‌ನಲ್ಲಿ ಉಪ್ಪು ನೀರು ಸಂಸ್ಕರಣೆಯ ಪ್ರಥಮ ಘಟಕ ಆರಂಭಿಧಿಸಿದ್ದು, ಈಗ ಸಾಕಷ್ಟು ಬದಲಾವಣೆಗಳಾಗಿವೆ. 10 ಎಂಎಲ್‌ಡಿ ನೀರು ಸಂಸ್ಕರಣೆಗೆ 1.8 ಮೆಗಾವ್ಯಾಟ್‌ ವಿದ್ಯುತ್‌ ಅಗತ್ಯವಿದೆ ಎಂದು ಐಯಾನ್‌ ಎಕ್ಸ್‌ಚೇಂಜ್‌ ಇಂಡಿಯಾ ಲಿಮಿಟೆಡ್‌ನ‌ ಪ್ರತಿನಿಧಿ ಶ್ರೀಧರ್‌ ಹೇಳಿದರು.

Comments are closed.