ಕರಾವಳಿ

ಪಿಯುಸಿ : ದ.ಕ. ಜಿಲ್ಲೆ ಪ್ರಥಮ.. ಆದರೂ ಮೊದಲ ಹತ್ತು ಸ್ಥಾನ ಪಡೆಯುವಲ್ಲಿ ವಿಫಲ

Pinterest LinkedIn Tumblr

ಪಿಯುಸಿ ಫಲಿತಾಂಶದಲ್ಲಿ ದ.ಕ. ಜಿಲ್ಲೆ ರಾಜ್ಯಕ್ಕೆ ಪ್ರಥಮ ಬಂದಿದ್ದರೂ ಅತ್ಯಧಿಕ ಅಂಕ ಪಡೆದವರಲ್ಲಿ ಮೊದಲ ಹತ್ತು ಸ್ಥಾನವನ್ನು ದ.ಕ. ಜಿಲ್ಲೆಯ ಯಾರೋಬ್ಬರೂ ಪಡೆದಿಲ್ಲ.

ದ.ಕ. ಜಿಲ್ಲೆಯು 90.48 ಶೇ. ಫಲಿತಾಂಶ ಪಡೆದಿದೆ. ಕಳೆದ ವರ್ಷ 93.09 ಶೇ. ಫಲಿತಾಂಶ ಪಡೆದಿದ್ದ ದ.ಕ. ಈ ಬಾರಿ ಶೇ. ಮೂರು ಸಂಖ್ಯೆಯಲ್ಲಿಯೂ ಕುಸಿತ ಕಂಡಿದೆ. ಆದರೆ ಕಳೆದ ವರ್ಷ ರಾಜ್ಯಕ್ಕೆ ಪಡೆದಿದ್ದ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ.

ಅತ್ಯಧಿಕ ಅಂಕ ಗಳಿಸಿದ ಹತ್ತು ಮಂದಿ ಬೆಂಗಳೂರಿನ ರಕ್ಷಿತಾ ಟಿ. 596, ಉಡುಪಿಯ ನೇಹಾ ಡಿ ಶೆಟ್ಟಿ 595, ರಮ್ಯ ಎಂ. 594, ಉಡುಪಿಯ ಪ್ರಜ್ಞ 594, ಉಡುಪಿಯ ಪೂಜಾ ನಾಯಕ್ 593, ಹಾಸನದ ಐಶ್ವರ್ಯ ವಿ ಜಯರಾಮ್ 593, ಉಡುಪಿಯ ಅಕ್ಷಯ್ 593, ಚಿಕ್ಕಮಗಳೂರು ಸುಪ್ರಿತ್ 593, ತುಮಕೂರಿನ ಕಾರ್ತಿಕ್ 593, ಬೆಂಗಳೂರಿನ ಅಭಿನಂದಿನಿ 592 ಅಂಕಗಳನ್ನು ಪಡೆದಿದ್ದಾರೆ.

ಫಲಿತಾಂಶಕ್ಕೆ ಈ ವೆಬ್ ಸೈಟ್ ನೋಡಿ: ಕ್ಲಿಕ್ ಮಾಡಿ

ಸರ್ಕಾರದ www.karresults.nic.in ಮತ್ತು www.puc.kar.nic.in ವೆಬ್‌ಸೈಟ್‌ಗಳಲ್ಲಿ ಫ‌ಲಿತಾಂಶ ಲಭ್ಯ

Comments are closed.