ಕರಾವಳಿ

ಅಕ್ರಮ ಗಾಂಜಾ ಮಾರಾಟ : ಐವರು ಆರೋಪಿಗಳ ಬಂಧನ – 5 ಕೆ.ಜಿ ಗಾಂಜಾ ಸಹಿತಾ ಒಟ್ಟು ರೂ.10 ಲಕ್ಷ ಮೌಲ್ಯದ ಸೊತ್ತು ವಶ

Pinterest LinkedIn Tumblr

Ganja_Five_arest_1

ಮಂಗಳೂರು,ಮೇ.25 : ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಬಂಧಿಸಿರುವ ಸಿ.ಸಿ.ಬಿ ಪೊಲೀಸರು ಆರೋಪಿಗಳಿಂದ 5 ಕೆ.ಜಿ ಗಾಂಜಾ, ವಾಹನ, ಮೊಬೈಲ್, ನಗದು ಹಣ ಸಹಿತಾ ಒಟ್ಟು ರೂ.10 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಅಡ್ಯಾರ್ ಗ್ರಾಮದ ವಳಚ್ಚಿಲ್‌ನ ಶರೀಫ್ ವಿ.ಎಚ್.(36), ಕುಲಶೇಖರದ ಹರ್ಷಿತ್ (36) ಹಾಗೂ ದೀಕ್ಷಿತ್ ಪೂಜಾರಿ (37), ಮೂಡುಶೆಡ್ಡೆ ಶಿವನಗರದ ಇಮ್ರಾನ್ (30) ಮತ್ತು ಶಕ್ತಿನಗರದ ಪ್ರಥ್ವಿರಾಜ್ (25) ಎನ್ನಲಾಗಿದೆ.

Ganja_Five_arest_3 Ganja_Five_arest_4

ದಿನಾಂಕ 24-05-2016 ರಂದು ಮಂಗಳೂರು ತಾಲೂಕಿನ ತೊಕ್ಕೊಟ್ಟು ಒಳಪೇಟೆಯಲ್ಲಿ ಒಂದು ಪಿಯೇಟ್ ಪುಂಟೋ ಕಾರು ಮತ್ತು ಒಂದು ಬಜಾಜ್ ಡಿಸ್ಕವರಿ ಮೋಟಾರು ಸೈಕಲಿನಲ್ಲಿ ಐದು ಮಂದಿ ಗಾಂಜಾ ಮಾರಾಟ ಮಾಡಲು ಬಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿ.ಸಿ.ಬಿ ಪೊಲೀಸರು ತಹಶಿಲ್ದಾರರಾದ ಶ್ರೀ.ಶಿವಶಂಕರ್ರವರೊಂದಿಗೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.

ಗಾಂಜಾವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿರುವುದಾಗಿ ಬಂಧಿತರು ತಿಳಿಸಿದ್ದು, ಇವರಿಂದ ಒಟ್ಟು ಒಟ್ಟು 10 ಲಕ್ಷ ರೂ. ವೌಲ್ಯದ 5 ಕೆ.ಜಿ ಗಾಂಜಾ, ಫಿಯೆಟ್ ಪುಂಟೋ ಕಾರು, ಬಜಾಜ್ ಡಿಸ್ಕವರ್ ಬೈಕ್, 9 ಮೊಬೈಲ್ ಪೋನ್‌ಗಳು, 1,105 ರೂ.ನ್ನು ವಶಪಡಿಸಿಕೊಳ್ಳಲಾಗಿದೆ.

Ganja_Five_arest_2 Ganja_Five_arest_5

ಗಾಂಜಾ ಖರೀದಿಸಿದರೂ ಕಾನೂನು ಕ್ರಮ : ಕಮಿಷನರ್

ಕಾಲೇಜ್ ಮತ್ತು ಇತರ ಪರಿಸರ ಹಾಗೂ ಇತರ ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗಾಂಜಾವನ್ನು ಪಡೆದು ಕೊಂಡಲ್ಲಿ ಹಾಗೂ ಗಾಂಜಾವನ್ನು ಉಪಯೋಗ ಮಾಡಿದ ಬಗ್ಗೆ ಮಾಹಿತಿ ಬಂದು ಪತ್ತೆ ಮಾಡಿದ್ದಲ್ಲಿ ಅಂತವರ ವಿರುದ್ಧವೂ ಸಹ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಪ್ರಕಟಿಸಿದ್ದಾರೆ.

ಪೊಲೀಸ್ ಕಮೀಷನರ್ ಶ್ರೀ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಶ್ರೀ. ಕೆ. ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ ಪಾಟೀಲ್ ರವರ ಮಾರ್ಗದಶರ್ನದಲ್ಲಿ ಸಿ.ಸಿ.ಬಿ ಘಟಕದ ಇನ್ಸ್ ಪೆಕ್ಟರ್ ವೆಲೆಂಟೈನ್ ಡಿ ಸೋಜಾ ಮತ್ತು ಸಬ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

ಬಂಧಿತ ಆರೋಪಿಗಳ ಸಂಪೂರ್ಣ ವಿವರ :

ಶರೀಪ್.ವಿ.ಹೆಚ್, ಪ್ರಾಯ 36 ವರ್ಷ ತಂದೆ: ವಿ.ಹೆಚ್.ಯಾಕೂಬ್, ವಾಸ: ವಿ.ಹೆಚ್.ಹೌಸ್ ವಳಚ್ಚಿಲ್ , ಅಡ್ಯಾರ್ ಅಂಚೆ ಮತ್ತು ಗ್ರಾಮ, ಮಂಗಳೂರು ತಾಲೂಕು.
ಹರ್ಷಿತ್ ಪ್ರಾಯ 36 ವರ್ಷ ತಂದೆ: ದಿವಂಗತ ದಿನಕರ ಶೆಟ್ಟಿ ವಾಸ: ಹೆಚ್ವಿಜೆ ಹೌಸ್,ನಿಡ್ಡೆಲ್ ಗೋಕರ್ಣ, ಕುಲಶೇಖರ ಅಂಚೆ, ಮಂಗಳೂರು ತಾಲೂಕು
ದೀಕ್ಷಿತ್ ಪೂಜಾರಿ, 37 ವರ್ಷ ತಂದೆ: ಮೋಹನ್ದಾಸ್, ವಾಸ: ಸಾಯಿಕೇಶವ, ನಿಡ್ಡೇಲ್ ಗೋಕರ್ಣ ಮೈನ್ ರೋಡ್, ಕುಲಶೇಖರ, ಮಂಗಳೂರು.
ಇಮ್ರಾನ್ 30ವರ್ಷ ತಂದೆ ಅಬ್ದುಲ್ ರಹಿಮಾನ್, ವಾಸ: ಶಿವನಗರ ಮನೆ, ಮೂಡುಶೆಡ್ಡೆ, ಮಂಗಳೂರು ತಾಲೂಕು
ಪ್ರಥ್ವಿರಾಜ್ 25 ವರ್ಷ ತಂದೆ: ಲಕ್ಷ್ಮಣ ಶೆಟ್ಟಿ, ವಾಸ: ಬೊಲ್ಯ ಹೌಸ್,ಗೋಪಾಲಕೃಷ್ಣ ದೇವಸ್ಥಾನದ ಬಳಿ, ಶಕ್ತಿನಗರ, ಮಂಗಳೂರು.

Comments are closed.