ಕರಾವಳಿ

ಭೂಗತ ಪಾತಕಿ ರವಿ ಪೂಜಾರಿಯಿಂದ ಶಾಸಕ ಎಚ್. ಎಂ. ರೇವಣ್ಣಗೆ ಬೆದರಿಕೆ ಕರೆ

Pinterest LinkedIn Tumblr

Revanna

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯಿಂದ ತಮಗೆ ಬೆದರಿಕೆ ಕರೆ ಬಂದಿದೆ ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎಂ ರೇವಣ್ಣ ದೂರು ದಾಖಲಿಸಿದ್ದಾರೆ.

ರವಿ ಪೂಜಾರಿ ತಮಗೆ ಕರೆ ಮಾಡಿ 10 ಕೋಟಿ ಹಣ ಕೇಳಿದ್ದಾನೆ ಎಂದು ರೇವಣ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿದ್ದಾಗ ಅನಾಮಧೇಯ ವ್ಯಕ್ತಿಯಿಂದ ರೇವಣ್ಣ ಅವರಿಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ಭೂಗತ ಪಾತಕಿ ರವಿ ಪೂಜಾರಿ ಎಂದು ಹೇಳಿದ್ದು, 10 ಕೋಟಿ ರೂ. ಹಣ ನೀಡುವಂತೆ ರೇವಣ್ಣ ಅವರಿಗೆ ಬೆದರಿಕೆ ಹಾಕಿದ್ದಾನೆ.

ಹಣ ಕೊಡದಿದ್ದರೆ ಮಗನ ಸಿನಿಮಾ ಬಿಡುಗಡೆಗೂ ಅಡ್ಡಿ ಪಡಿಸುವುದಾಗಿ ಹೇಳಿದ್ದಾನೆ. ರೇವಣ್ಣ ಅವರು ಈ ಕುರಿತು ಪೊಲೀಸರಿಗೆ ದೂರು ಕೊಟ್ಟಿದ್ದು, ಸೂಕ್ತ ರಕ್ಷಣೆ ನೀಡಬೇಕು ಮತ್ತು ದೂರವಾಣಿ ಕರೆ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ರೇವಣ್ಣ ಪುತ್ರ ಅನೂಪ್ ನಾಯಕರಾಗಿರುವ ಚೊಚ್ಚಲ ಚಿತ್ರ ‘ಲಕ್ಷ್ಮಣ’ ತೆರೆಗೆ ಬರಲು ಸಿದ್ಧವಾಗಿದೆ.

Comments are closed.