ಅಂತರಾಷ್ಟ್ರೀಯ

ಖಿನ್ನತೆಗೆ ರಾಮಬಾಣ: ಅರಿಶಿನ ಜ್ಯೂಸ್

Pinterest LinkedIn Tumblr

turmericjuice

ಖಿನ್ನತೆ ಹೆಚ್ಚಿನ ಜನರನ್ನು ಕಾಡುವ ಮಾನಸಿಕ ಸಮಸ್ಯೆಯಾಗಿದೆ. ಖಿನ್ನತೆಯ ನಿರ್ಲಕ್ಷ್ಯ ಒಳ್ಳೆಯದಲ್ಲ. ಖಿನ್ನತೆ ಕಾಡುತ್ತಿದ್ದರೆ, ಅದಕ್ಕೆ ಚಿಕಿತ್ಸೆ ಪಡೆಯಬೇಕು. ಮಾನಸಿಕ ತಜ್ಞರ ಪ್ರಕಾರ ಖಿನ್ನತೆ ಹಲವಾರು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕೆಲವು ಸಂದರ್ಭದಲ್ಲಿ ಸಾವಿಗೂ ಕಾರಣವಾಗಬಹುದು.

ಖಿನ್ನತೆಯನ್ನು ನಿಯಂತ್ರಿಸದೆ ಹಾಗೆಯೇ ಬಿಟ್ಟಲ್ಲಿ ರೋಗಿಗೆ ಅಪಾಯ ತಪ್ಪಿದ್ದಲ್ಲ. ಖಿನ್ನತೆಯನ್ನು ದೂರವಾಗಿಸಲು ಮಾನಸಿಕ ಶಾಂತಿ ಮತ್ತು ಆರೋಗ್ಯವಂತ ಚಟುವಟಿಕೆಗಳೊಂದಿಗೆ ಖಿನ್ನತೆ ಪರಿಹರಿಸುವ ಪಾನೀಯ ಸೇವಿಸಬೇಕು.

ಅರಿಶಿನ, ಜೇನು ಹಾಗೂ ಹುಣಸೆ ಒಳಗೊಂಡ ಅರಿಶಿನ ಜ್ಯೂಸ್ ಒಳ್ಳೆಯದು.
ಈ ಪಾನೀಯದಲ್ಲಿರುವ ಮುಖ್ಯ ಅಂಶ ಅರಿಶಿನವಾಗಿದೆ. ಅರಿಶಿನ ನರದ ವ್ಯವಸ್ಥೆಯನ್ನು ಶಾಂತವಾಗಿಸುವ ಗುಣ ಹೊಂದಿದೆ.

ಅರಿಶಿನ ಸೇರಿದ ಪಾನೀಯ ಸೇವನೆ ಖಿನ್ನತೆಯನ್ನು ದೂರ ಮಾಡಿ ಮೂಡ್ ಅನ್ನು ಸರಿಮಾಡುತ್ತದೆ. ನಿತ್ಯವೂ ಈ ಪಾನೀಯದ ಸೇವನೆ ಮಾಡುವುದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಮಧುಮೇಹದಂತಹ ಸಮಸ್ಯೆಯನ್ನು ಹತ್ತಿರ ಸುಳಿಯಲೂ ಬಿಡುವುದಿಲ್ಲ. ಅಂತೆಯೇ ಮುಖ್ಯವಾಗಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಅರಿಶಿನವು ನಂಜು ನಿರೋಧಕ ಸಾಂಬಾರು ಪದಾರ್ಥವಾಗಿರುವುದರಿಂದ ನೀವು ಅನುಭವಿಸುತ್ತಿರುವ ಸೋಂಕಿನಿಂದ ರಕ್ಷಣೆ ನೀಡುತ್ತದೆ.

ಅರಿಶಿನ ಪಾನೀಯ ಸೇವನೆ ಜೊತೆಗೆ ನೈಸರ್ಗಿಕ ಪದಾರ್ಥಗಳ ಸೇವನೆಯಿಂದ ಖಿನ್ನತೆಯನ್ನು ಸರಿಪಡಿಸಿಕೊಳ್ಳಬಹುದು. ಡಾರ್ಕ್ ಚಾಕೊಲೆಟ್ ಸೇವನೆ ಸಹ ಖಿನ್ನತೆಗೆ ಪರಿಹಾರ ಒದಗಿಸುತ್ತದೆ. ಚಾಕೊಲೆಟ್‌ನಲ್ಲಿರುವ ಕೋಕಾ ಖಿನ್ನತೆಯ ಪರಿಹಾರಕ್ಕೂ ಹೇಳಿ ಮಾಡಿಸಿದ್ದಾಗಿದೆ. ಮನಸ್ಸು ಸ್ಥಿಮಿತಿದಲ್ಲಿಲ್ಲ ಎಂಬಂತಹ ಸಂದರ್ಭದಲ್ಲಿ ಎರಡು ತುಂಡು ಚಾಕೊಲೆಟ್ ಸೇವಿಸಿದರೆ ಚಾಕೊಲೆಟ್‌ನಲ್ಲಿರುವ ಕೋಕಾ ನಿಮ್ಮ ಮೆದುಳಿನ ಕೋಶಗಳನ್ನು ಸಂವಹಿಸಿ ನಿಮ್ಮನ್ನು ಸಂತಸದಿಂದ ಇರುವಂತೆ ಮಾಡುತ್ತದೆ.

ಅರಿಶಿನ ಪಾನೀಯ ತಯಾರಿಕೆ ಹೇಗೆ
ಖಿನ್ನತೆಯನ್ನು ದೂರ ಮಾಡುವ ಅರಿಶಿನ ಪಾನೀಯ ತಯಾರಿಕೆ ಈ ರೀತಿ ಇದೆ.
ಒಂದು ಚಮಚ ಅರಿಶಿನವನ್ನು ಒಂದು ಲೋಟ ನೀರಿಗೆ ಸೇರಿಸಿ ಅದನ್ನು 20 ನಿಮಿಷ ಕುದಿಸಿ ಕೆಳಗಿಳಿಸಿ. ನಂತರ ಅರಿಶಿನ ನೀರನ್ನು ಶೋಧಿಸಿಕೊಳ್ಳಬೇಕು. ಶೋಧಿಸಿದ ಅರಿಶಿನ ನೀರಿಗೆ ಒಂದು ಚಮಚ ಹುಣಸೆ ಪೇಸ್ಟನ್ನು ಹಾಕಿ ಐದು ನಿಮಿಷ ರುಬ್ಬಿಕೊಳ್ಳಬೇಕು. ಇದಕ್ಕೆ ಲಿಂಬೆರಸ, 2 ಚಮಚ ಜೇನುತುಪ್ಪ ಸೇರಿಸಿ ಸಿದ್ಧವಾದ ಅರಿಶಿನ ಪಾನೀಯವನ್ನು ಕುಡಿಯಿರಿ. ಖಿನ್ನತೆ ತೀವ್ರವಾಗಿದ್ದರೆ ದಿನಕ್ಕೆ ಎರಡು ಬಾರಿ ಜ್ಯೂಸ್ ಸೇವಿಸಿ. ಇಲ್ಲದಿದ್ದರೆ ನಿತ್ಯ ಒಂದು ಬಾರಿ ಅಥವಾ ಆಗಾಗ್ಗೆ ಈ ಅರಿಶಿನ ಪಾನೀಯ ಕುಡಿದರೆ ಖಿನ್ನತೆಗೆ ಮಾತ್ರೆ ನುಂಗುವ ಪ್ರಮೇಯವೇ ಬರುವುದಿಲ್ಲ.

Write A Comment