ಅಂತರಾಷ್ಟ್ರೀಯ

ಮಹಿಳೆಯರ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗಳಲ್ಲಿ ‘ಪಿಂಕ್’ ಬಣ್ಣವೇ ಅಚ್ಚುಮೆಚ್ಚು!

Pinterest LinkedIn Tumblr

pink-ethnic

ನವದೆಹಲಿ: ‘ಪಿಂಕ್’ ಬಣ್ಣ ಹೆಣ್ಣುತನದ ಜೊತೆಗೆ ಸಾಮಾನ್ಯವಾಗಿ ತಳುಕು ಹಾಕಿಕೊಂಡಿರುತ್ತದೆ. ಈಗ ಈ ಸಮೀಕ್ಷೆಯ ಪ್ರಕಾರ, ಮಹಿಳೆಯರಿಗೆ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗೆ ಪಿಂಕ್ ಬಣ್ಣವೇ ಅಚ್ಚುಮೆಚ್ಚು.

ಅಂತರ್ಜಾಲ ಸಾಂಸ್ಕೃತಿ ಉಡುಗೆತೊಡುಗೆಗಳ ತಾಣ ಕ್ರಾಫ್ಟ್ಸ್ ವಿಲ್ಲಾ. ಕಾಂ ಮಾಡಿರುವ ಸಮೀಕ್ಷೆಯ ಪ್ರಕಾರ, ಪ್ರತಿ ದಿನದ ಉಡುಗೆ ತೊಡುಗೆಗೆ ಶೇಕಡಾ 78.5 ಭಾರತೀಯ ಮಹಿಳೆಯರು ಪಿಂಕ್ ಬಣ್ಣವನ್ನು ಇಷ್ಟ ಪಡುತ್ತಾರೆ ಎಂದಿದೆ.

ಇದರ ಮಧ್ಯೆ, ಹಳದಿ, ಕೆಂಪು, ಕಿತ್ತಳೆ ಮತ್ತು ಹಸಿರು ಬಣ್ಣಗಳು ನೀಲಿ ಬಣ್ಣದ ಮುಂದೆ ಮಸುಕಾಗಿವೆ. ನೀಲಿ ಬಣ್ಣ ೨೭.೨% ಪಡೆದು ಎರಡನೆ ಸ್ಥಾನದಲಿದೆ.

“ಭಾರತೀಯರು ಬಣ್ಣ ಬಣ್ಣದ ಉಡುಗೆಗೆ ಹೆಸರಾದವರು. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಬಣ್ಣಕ್ಕೂ ಮಹತ್ವವಿದೆ. ಈ ಸಮೀಕ್ಷೆಯಲ್ಲಿ ಭಾರತೀಯ ಮಹಿಳೆಯರು ದಿನದಿತ್ಯ ಮತ್ತು ವಿಶೇಷ ದಿನಗಳಂದು ಯಾವ ಬಣ್ಣದ ಉಡುಗೆ-ತೊಡುಗೆಗೆ ಮೊರೆ ಹೋಗುತ್ತಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದೇವೆ” ಎನ್ನುತ್ತಾರೆ ಕ್ರಾಫ್ಟ್ಸ್ ವಿಲ್ಲಾ.ಕಾಂನ ಸಹ ಸಂಸ್ಥಾಪಕ ಮೋನಿಕಾ ಗುಪ್ತಾ.

ವಿಶೇಷ ಸಂದರ್ಭಗಳಲ್ಲಿ ಮರೂನ್ ಮತ್ತು ಚಿನ್ನದ ಬಣ್ಣದ ಉಡುಗೆಗಳನ್ನು ತೊಡಲು ಭಾರತಿಯ ಮಹಿಳೆಯರು ಆಯ್ಕೆ ಮಾಡಿದ್ದಾರೆ. ಇವುಗಳನ್ನು ಕ್ರಮವಾಗಿ ೩೩.೯% ಮತ್ತು ೩೧.೯% ಜನ ಮೆಚ್ಚಿದ್ದಾರೆ.

Write A Comment