ಕರಾವಳಿ

ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರಿಗೆ ಗಲ್ಫ್ ವಿ.ವಿ.ಯಿಂದ ಗೌರವ ಡಾಕ್ಟರೇಟ್

Pinterest LinkedIn Tumblr

Tumbay_May 3-2016-IMG-20160501-WA0006

ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬಿ.ಎ. ಗ್ರೂಪ್- ಇಂಡಿಯಾದ ಅಧ್ಯಕ್ಷ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಅವರಿಗೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

Tumbay_May 3-2016-IMG-20160501-WA0005 (1)

ಯುಎಇಯ ಅಜ್ಮನ್‍ನಲ್ಲಿರುವ ಪ್ರಸಿದ್ಧ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವಾದ ಜಿಎಂಯು, ಅಹ್ಮದ್ ಹಾಜಿಯವರ ಸಾಮಾಜಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪದವಿ ನೀಡಿದೆ.

ಈ ಹಿನ್ನೆಲೆಯಲ್ಲಿ ಮೇ 1ರಂದು ಬಂಟ್ವಾಳ ತಾಲೂಕಿನ ತುಂಬೆ ಹಿಲ್ಸ್‍ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಹ್ಮದ್ ಹಾಜಿಯವರನ್ನು ಸನ್ಮಾನಿಸಲಾಯಿತು.  ಯುಎಇಯಲ್ಲಿ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಗವರ್ನರ್‍ಗಳ ಮಂಡಳಿಯ  ಮುಖ್ಯಸ್ಥರು, ಅಹ್ಮದ್ ಹಾಜಿ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ವಿಶ್ವವಿದ್ಯಾಲಯದ ಪ್ರೊ.ಗೀತಾ ಅಶೋಕ್ ರಾಜ್, ಜಿಎಂಯು ಡೀನ್‍ಗಳು ಕೂಡ ಈ ವೇಳೆ ಹಾಜರಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಹಾಗೂ ರಮಾನಾಥ ರೈ ಉಪಸ್ಥಿತರಿದ್ದರು.

ಬಿ.ಅಹ್ಮದ್ ಹಾಜಿ ಕುರಿತು
ಅಹ್ಮದ್ ಹಾಜಿ ಅವರು 1933ರಲ್ಲಿ ಬಿ.ಮುಹಿಯುದ್ದೀನ್ ಹಾಜಿ ಮತ್ತು ಮರಿಯಮ್ಮದಂಪತಿಯ ಪುತ್ರನಾಗಿ ಮಂಗಳೂರಿನಲ್ಲಿ ಜನಿಸಿದರು. 1954ರಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದ ಅವರು, 1957ರಲ್ಲಿ ಬಿ.ಎ.ಗ್ರೂಪ್ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಸಕ್ತ  ಅವರು ಈ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಹ್ಮದ್ ಹಾಜಿ ಎಂದರೆ ಕರ್ನಾಟದಲ್ಲಿ ಚಿರಪರಿಚಿತ ಹೆಸರು. ವಿಶೇಷವಾಗಿ ದಕ್ಷಿಣ  ಕನ್ನಡದಲ್ಲಿ ಅವರ ಹೆಸರು ಕೇಳದವರೇ ಇರಲಿಕ್ಕಿಲ್ಲ. ಕೈಗಾರಿಕೆ, ಶಿಕ್ಷಣ ಕ್ಷೇತ್ರ, ಪರೋಪಕಾರಿ  ವ್ಯಕ್ತಿಕ್ವ, ಸಾಮಾಜಿಕ ಮತ್ತು ಸಮುದಾಯ ಸೇವೆಗಳೆ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ. ಅಹ್ಮದ್ ಹಾಜಿ ಅವರು ಅಧ್ಯಕ್ಷರಾಗಿರುವ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್‍ನ ಪ್ರಾಯೋಜಕತ್ವದಲ್ಲಿ ಬಿ.ಎ. ಕೈಗಾರಿಕಾ ತರಬೇತಿ ಮತ್ತು ತಾಂತ್ರಿಕ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಟ್ರಸ್ಟ್ ಅಧೀನದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ಒಂದು ಪದವಿ ಪೂರ್ವ ಕಾಲೇಜು, ಒಂದು ನರ್ಸರಿ ಶಾಲೆ, ಒಂದು ಪ್ರಾಥಮಿಕ ಶಾಲೆ, ದಾರುಲ್ ಉಲೂಮ್ ಮುಹಿಯುದ್ದೀನ್ ಅರಬಿಕ್ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, 1500ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.  ಅಹ್ಮದ್ ಹಾಜಿ ಅವರು ಯೆನೋಪೋಯ ಮೆಡಿಕಲ್ ಕಾಲೇಜು ಮತ್ತು ದಂತ ವೈದ್ಯಕೀಯ ಕಾಲೇಜಿನ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಯಸ್ಕರ ಶಿಕ್ಷಣ ಸೊಸೈಟಿಯ
ಸದಸ್ಯರಾಗಿರುವ ಹಾಜಿ ಅವರು, ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ನೇಮಕಗೊಂಡಿದ್ದಾರೆ. ಸಮಾಜದಲ್ಲಿರುವ ನಿರ್ಗತಿಕರು ಮತ್ತು ಬಡವರಿಗೆ  ಶಿಕ್ಷಣ ದೊರಕಬೇಕು ಎಂಬ ಮಹದಾಸೆ ಹೊಂದಿರುವ ಅವರು, ಇದಕ್ಕಾಗಿ ಮಂಗಳೂರು ಮತ್ತು ಸುತ್ತಮುತ್ತ ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಮಾತ್ರವಲ್ಲ ಸಮುದಾಯ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೂ ತನ್ನದೇ ಆದ ಕೊಡುಗೆ ನೀಡಿದ್ದಾರೆ.  ಮಂಗಳೂರಿನ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಟ್ರಸ್ಟ್‍ಗಳ ಸ್ಥಾಪಕ ಅಧ್ಯಕ್ಷರು ಮತ್ತು ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲ 1000ಕ್ಕೂ ಅಧಿಕ ಮಸೀದಿಗಳ ಮುಖ್ಯಸ್ಥರೂ ಆಗಿದ್ದಾರೆ.

ಹಲವಾರು ಪ್ರಶಸ್ತಿಗಳು ಅಹ್ಮದ್ ಹಾಜಿ ಅವರನ್ನು ಹುಡುಕಿಕೊಂಡು ಬಂದಿವೆ. ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಂದ “ಜೀವಮಾನ ಶೇಷ್ಟ್ರ ಪ್ರಶಸ್ತಿ” ಸ್ವೀಕರಿಸಿರುವ ಹೆಗ್ಗಳಿಕೆಯೂ ಇವರದ್ದಾಗಿದೆ.

Write A Comment