ಕರಾವಳಿ

ಸೆಪ್ಟೆಂಬರ್ 30 ರಂದು ದುಬೈಯಲ್ಲಿ ಶನೈಶ್ಚರ ಪೂಜೆ

Pinterest LinkedIn Tumblr

DSC_1080

ಶನೈಶ್ಚರ ಪೂಜಾ ಸೇವಾ ಕಾರ್ಯಕರ್ತರ ಸಭೆ ತಾ 26-02-2016 ರಂದು ಕರಮದ ದಾಸ್ ಪ್ರಕಾಶ್ ಹೋಟೆಲಿನಲ್ಲಿ ಜರಗಿತು . ಪ್ರಸ್ತುತ ವರುಷದ ಪೂಜೆಯ ಪೂರ್ವಭಾವಿ ಸಿಧ್ಧತೆಗಳ ಬಗ್ಗೆ ವಿಚಾರ ಗೋಷ್ಠಿಗಳ ನಡೆಯಿತು .

ಸೆಪ್ಟೆಂಬರ್ 30 ರಂದು ಪೂಜಾ ಕಾರ್ಯಕ್ರಮವನ್ನು ನೆರವೇರಿಸಲು ಹಾಜರಿದ್ದ ಎಲ್ಲರ ಸಮ್ಮತದಿಂದ ನಿರ್ಧರಿಸಲಾಯಿತು . ಪೂಜಾ ಸಭಾಂಗಣವನ್ನು ಸದ್ಯದಲ್ಲಿ ತಿಳಿಯಪದಿಸಲಾಗುವುದು .

1

DSC_1072

DSC_1078

ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ,ಶ್ರೀ ಕ್ಷೇತ್ರಧಾಮ ,ಮಾಣಿಲ ಆಶೀರ್ವಚನ ಗಯ್ಯಲಿರುವರು ಖ್ಯಾತ ಪುರೋಹಿತ ಹಾಗು ನಾಗಾರಾಧನೆಯ ಬಗ್ಗೆ ಬಹಳಷ್ಟು ಮಾಹಿತಿ ಯನ್ನು ಸಂಗ್ರಹಿಸಿರುವ ಶ್ರೀಯುತ ವೇದಮೂರ್ತಿ ಕುಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ ,ಉಡುಪಿ ಇವರಿಂದ ಪೂಜಾ ವಿಧಿ ವಿಧಾನ ಗಳು ನೆರವೇರಲಿದೆ .

ಶ್ರೀಯುತ ಶಮ್ನಡಿಗರು ,ಖ್ಯಾತ ನ್ಯಾಯವಾದಿಗಳು,ಕುಂಬ್ಳೆ ಇವರಿಂದ ಶನಿಕಥಾ ಪಾರಾಯಣ ಹಾಗು ಸ್ಥಳೀಯ ಭಜನ ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ . ಶ್ರೀಯುತ ಸ್ವಾಮೀಜೀಯವರ ಪೂರ್ಣಕಂಭ ಸ್ವಾಗತ ,ಸ್ವಾಮೀಜಿಯವರ ಆಶೀರ್ವಚನ ,ಭಜನೆ ತದ ನಂತರ ಮಹಾ ಮಂಗಳಾರತಿ ,ಪೂಜಾ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ .

ಯು ಎ ಇ ಯಾ ಎಲ್ಲ ಭಕ್ತಾದಿಗಳು ,ದಾನಿಗಳು ಹಾಗೂ ಸಂಘ ಸಂಸ್ತೆ ಗಳಿಂದ ಕಾರ್ಯಕ್ರಮದ ಯಶಸ್ಸಿಗೆ ತುಂಬು ಹೃದಯದ ಸಹಕಾರ ಕೋರಲಾಗಿದೆ ..

ಶ್ರೀಯುತ ವಿಟ್ಟಲ್ ಶೆಟ್ಟಿಯವರು ಕಾರ್ಯಕ್ರಮಗಳ ವಿವರಣೆ ನೀಡಿದರು .ಶ್ರಿಯುತ ಸುಧಾಕರ ತುಂಬೆಯವರು ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆದು ಬಂದಿರುವ ಶನೈಶ್ಚರ ಪೂಜೆಯ ಅವಲೋಕನ ಮಾಡಿ,ಈ ಬಾರಿ ಆಗಮಿಸಲಿರುವ ಗಣ್ಯ ಅತಿಥಿಗಳ ವಿವರ ನೀಡಿ ,ಧನ್ಯವಾದ ಸಮರ್ಪಣೆಯನ್ನು ಮಾಡಿದರು . ಎಲ್ಲ ಉತ್ಸಾಹಿ ಕಾರ್ಯಕರ್ತರು ಸೂಕ್ತ ಸಲಹೆಗಳನ್ನು ನೀಡಿ ತಮಗೆ ನೀಡಿದ ಜವಾಬ್ದಾರಿಯನ್ನು ಸ್ವೀಕರಿಸಿ, ತಮ್ಮ ಸಂಪೂರ್ಣ ಸಹಕಾರ ವ್ಯಕ್ತಪಡಿಸಿದರು .

ಶ್ರೀಯುತ ಸ್ವಾಮೀಜಿಯವರ ಸಹೋದರ ಶ್ರೀಯುತ ಚಂದ್ರಶೇಕರ ರವರು ವಿಶೇಷ ಅತಿಥಿ ಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದು ತಮ್ಮ ಸಂತೋಷ ಹಾಗೂ ಸಂಪೂರ್ಣ ಸಹಕಾರ ವ್ಯಕ್ತಪಡಿಸಿದರು .. ಶ್ರೀಯುತ ಆನಂದ ಸಾಲಿಯಾನ್ ,ಜಗನ್ನಾಥ್ ಬೆಳ್ಳಾರೆ ,ರೀತು ಅಂಚನ್ ಕುಲಶೇಕರ ,ಕ್ರಿಷ್ಣ ಕುಮಾರ್ ಐಲ ,ಬಲು ಶೆಟ್ಟಿ ಮಾದೂರು,ಸಂದೀಪ್ ಕುಮಾರ್ ದೇವಾಡಿಗ ಹಾಗು ಜಯಂತ ಶೆಟ್ಟಿ ಯವರು ಉಪಸ್ತಿತರಿದ್ದರು. ಮಾಧ್ಯಮದ ಪರವಾಗಿಶ್ರೀ ವಿನಯ್ ಕುಮಾರ್,ನಮ್ಮ ಟಿವಿ .ಶ್ರಿ ಸುಜಿತ್ ಫೆರ್ನಾಡಿಸ್ ,ನ್ಯೂಸ್ ಕರ್ನಾಟಕ ಉಪಸ್ತಿತರಿದ್ದರು. ಇತರ ಎಲ್ಲ ಮಾಧ್ಯಮದ ಪ್ರತಿನಿಧಿಗಳು ತಮ್ಮ ಸಹಕಾರವನ್ನು ವ್ಯಕ್ತಪಡಿಸಿದ್ದಾರೆ .

ಛಾಯಾಚಿತ್ರಗಳು ಕೃಪೆ: ಶ್ರೀ ಸುಜಿತ್ ಫೆರ್ನಾಡಿಸ್ ,
​ವರದಿ : ವಿಟ್ಟಲ್ ಶೆಟ್ಟಿ ​

Write A Comment