ದುಬೈ ; ಕರ್ನಾಟ ಇಸ್ಲಾಮಿಕ್ ಸೆಂಟರ್ ಕೆ ಐ ಸಿ ಯು ಎ ಇ ಅಧೀನದಲ್ಲಿ ಜೀಲಾನಿ ಹಾಗೋಒ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ, ಆದರ್ಶ ಪರಿಶುದ್ದತೆಯ ವರ್ಷ ಘೋಷ ವಾಖ್ಯದೊಂದಿಗೆ ಸಮಸ್ತ ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ ಸಭೆಯು ರಾಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕೆ ಐ ಸಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ ಸಲೀಂ ಫೈಝಿ ಇರ್ಫಾನಿ ಅಲ್ ಅಝ್-ಹರಿ ಯವರು ಪ್ರಾರ್ಥಿಸಿದರು.
ನಂತರ ಕೆ ಐ ಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ರವರು ಉಧ್ಘಾಟಿಸಿ ಮಾತನಾಡಿ ಭಾರತದಾದ್ಯಂತ ಇಸ್ಲಾಂ ದೀನಿನ ಆಶಯ ಆದರ್ಶಗಳನ್ನು ಈ ಸಮುದಾಯದ ಮುಂದೆ ಬಿತ್ತರಿಸಿದ ಪಂಡಿತ ಸಂಘಟನೆಯಾಗಿದೆ ಸಮಸ್ತ. ಕಳೆದ ತೊಂಬತ್ತು ವರ್ಷಗಳಿಂದ ಹಲವಾರು ದೀನೀ ದಅವಾ ಗಳ ಮೂಲಕ ಇಂದು ದೇಶದ ನಾನಾ ಭಾಗಗಳಲ್ಲಿ ವಿಧ್ಯಾ ಸಂಸ್ಥೆಗಳನ್ನು , ಮದ್ರಸ ಮಸೀದಿಗಳನ್ನು ನಡೆಸಿಕೊಂಡು ಬರುತ್ತಿರುವ ಈ ಪಂಡಿತ ಸಂಘಟನೆಯು ಇಂದು ತೊಂಬತ್ತನೇ ವರ್ಷದ ಹೊಸ್ತಿಲಲ್ಲಿದ್ದು ಫೆಬ್ರವರಿ ತಿಂಗಳಿನಲ್ಲಿ ತನ್ನ ಕಾರ್ಯಚಟುವಟಿಕೆ ಸ್ಮರಣಾರ್ಥ ಮಹಾ ಸಮ್ಮೇಳನವನ್ನು ಆಲಪ್ಪುಝ ದಲ್ಲಿ ಹಮ್ಮಿಕೊಂಡಿದ್ದು ಜನ ಸಾಗರದೊಂದಿಗೆ ಯಶಸ್ವಿ ಯನ್ನು ಸಾಧಿಸಲಿ ಎಂದು ಶುಭ ಹಾರೈಸಿ , ನಮ್ಮನ್ನಗಲಿದ ಪಂಡಿತ ಪ್ರತಿಭೆಗಳಾದ ಶೈಖುನ ಶಂಸುಲ್ ಉಲಮಾ , ಶೈಖುನ ಕನ್ನಿಯತ್ ಉಸ್ತಾದ್ ರವರ ಜೀವನ ಶೈಲಿ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಪರಲೋಕ ಸುಖಕ್ಕಾಗಿ ಜೀವನ ನಡೆಸುವಂತೆ ಕರೆ ನೀಡಿ , ಕುಂಬ್ರ ಪ್ರದೇಶದಲ್ಲಿ ಭೌದಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುತ್ತಾ ಬಂದಿರುವ ಕೆ ಐ ಸಿ ಎಂಬ ಈ ಸಂಸ್ಥೆಯನ್ನು ನಾವೆಲ್ಲರೂ ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯಲು ಕೈ ಜೋಡಿಸುವಂತೆ ಕೇಳಿಕೊಂಡು ಪವಿತ್ರ ಖುರ್ಆನಿನ ಸೂಕ್ತದೊಂದಿಗೆ ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ನಂತರ ಕೆ ಐ ಸಿ ದುಬೈ ಸಮಿತಿ ಕಾರ್ಯಾಧ್ಯಕ್ಷರಾದ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ ರವರು ಸ್ವಾಗತಿ ಮಾತನಾಡಿ , ಯು ಎ ಇ ಹಾಗೂ ಇತರ ಅರಬ್ ರಾಷ್ಟ್ರಗಳಲ್ಲಿ ಕೆ ಐ ಸಿ ಯು ನಡೆಸಿಕೊಂಡು ಬರುತ್ತಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಬಾಳಿನಲ್ಲಿ ಬೆಳಕನ್ನು ಚೆಲ್ಲಿ , ಸಮುದಾಯದ ಮುಂದೆ ಕಪ್ಪು ಚುಕ್ಕೆಯಾಗಿ ಇತರ ಸಹೋದರರಿಂದ ನಿರ್ಲಕ್ಷಿಸಲ್ಪಡುತ್ತಿರುವವರನ್ನು ಅಕಾಡೆಮಿ ಆಡಳಿತ ಸಮಿತಿಯ ನಿಯಮಾನುಸಾರ ಸುದೀರ್ಘ ಎಂಟು ವರ್ಷಗಳ ಉಚಿತ ಲೌಕಿಕ ಹಾಗೂ ಭೌಧಿಕ ವಿಧ್ಯಾಭ್ಯಾಸವನ್ನು ನೀಡಿ ಬಿ ಎ ಪದವಿಯೊಂದಿಗೆ ಕೌಸರಿಗಳೆಂಬ ಬಿರುದು ನೀಡಿ ಸಮುದಾಯಕ್ಕೆ ಸಮರ್ಪಿಸುತ್ತಾ ಬಂದಿರುವ ಈ ಸಂಸ್ಥೆಯು ಇಂದು ದೇಶ ವಿದೇಶಗಳಲ್ಲಿ ತನ್ನ ಶಾಖಾ ಚಟುವಟೀಕೆಗಳನ್ನು ಪ್ರಾರಂಭಿಸಿದೆ.ಅಲ್ಲದೆ ಕಳೆದ ವರ್ಷಗಳಿಂದ ಖುರ್ ಆನ್ ಕಂಠ ಪಾಠ ಸಂಶುಲ್ ಉಲಮಾ ಹಿಫ್ಳುಲ್ ಖುರ್ ಆನ್ ಸೆಂಟರ್ ಅನ್ನು ಪ್ರಾರಂಭಿಸಿದ್ದು , ಈ ಸಂಸ್ಥೆಯಲ್ಲಿ ಕಲಿತ ವಿಧ್ಯಾರ್ಥಿಗಳು ಇಂದು ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಮುಂದೆ ಸಂಸ್ಥೆಯು ಸಮುದಾಯದ ಬಡ ವಿಧ್ಯಾರ್ಥಿಗಲಿಗೊಸ್ಕರ ಹಲವಾರು ಕೈಗಾರಿಕಾ ತರಬೇತಿ , ಖುರ್ ಆನ್ ಸ್ಟಡಿ ಸೆಂಟರ್ ಮೊದಲಾದ ಕಾರ್ಯ ಯೋಜನೆಗಳನ್ನು ಹಮ್ಮಿ ಕೊಂಡಿದ್ದು ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಸಂಸ್ಥೆಯ ಪ್ರಗತಿಗೆ ಸಹಕರಿಸುವಂತೆ ಕೇಳಿಕೊಂಡರು .
ನಂತರ ಮುಖ್ಯ ಪ್ರಭಾಷಣಕಾರ ರಾಗಿ ಆಗಮಿಸಿದ ಡಾ. ಸಲೀಂ ಫೈಝಿ ಇರ್ಫಾನಿ ಅಲ್ ಅಝ್ ಹರಿ ಯವರು ಮಾತನಾಡುತ್ತಾ , ಇಂದು ದೇಶದ ನಾನಾ ಭಾಗಗಲ್ಲಿ ಅಹ್ಲ್ ಸುನ್ನತ್ ನ ಬಗ್ಗೆ ಸಂಶಯಾತೀತರಾಗಿ ವಿವಿದ ವ್ಯಕ್ತಿ ಪಂಗಡಗಳು ಮೊಳಕೆಯೋಡೆಯುತ್ತಿದ್ದು , ಈ ಸಮುದಾಯವು ಅವೆಲ್ಲವನ್ನು ಲೆಕ್ಕಿಸದೆ ನಮ್ಮ ಹಿರಿಯ ನಮ್ಮನ್ನಗಲಿದ ನೇತಾರರಾದ ಶೈಖುನ ಶಂಸುಲ್ ಉಲಮಾ ಶೈಖುನಾ ಕನ್ನಿಯತ್ ಉಸ್ತಾದ್ ರಂತಹ ಮಹಾನುಭಾವರು ತೋರಿಸಿಕೊಟ್ಟ ಪಾದದಲ್ಲಿ ವಿಶ್ವಾಸವಿಟ್ಟು ಜೀವಿಸುವಂತೆ ಕರೆ ನೀಡಿದರು. ಇಂದು ನಮ್ಮ ಯುವ ಸಮೂಹಗಳು ನಾನಾ ಆಚಾರ ವಿಚಾರಗಳಿಂದ ಆಕರ್ಶಿತರಾಗುತ್ತಿದ್ದು ಅಂತಗರಗಳೆಡೆಯಲ್ಲಿ ಹುಟ್ಟಿ ಬಂದ ನೂತನ ಪ್ರಸ್ಥಾನಗಳ ಮುಂದೆ ಮಂಡಿಯೂರದೆ ಗತ ವರ್ಷಗಳ ಹಿತಿಹಾಸವನ್ನು ತಿಳಿಯುವಂತೆ ವಿನಂತಿಸಿಕೊಂಡ ಅವರು ಸುನ್ನತ್ ಜಮಾ ಅತ್ತಿನಲ್ಲಿ ವಿಶ್ವಾಸವಿಡುವಂತೆ ಕೇಳಿಕೊಂಡರು.
ಅಲ್ಲದೆ ಕೆ ಐ ಸಿ ಅಕಾಡೆಮಿಗೆ ಭೇಟಿ ನೀಡಿದ ಸಂಧರ್ಭವನ್ನು ಸ್ಮರಿಸಿಕೊಂಡ ಅವರು , ಅಲ್ಲಿನ ವಿಧ್ಯಾಭ್ಯಾಸ , ವಿಧ್ಯಾರ್ಥಿಗಳ ಕಲಿಕೆ , ಅಕಾಡೆಮಿ ಆವರಣ ಪರಿಸ್ತಿಗಳನ್ನು ಪ್ರಶಂಸಿಸಿ ಮುಂದೆ ಈ ಸಂಸ್ಥೆಯು ಉನ್ನತ ಮಟ್ಟ ದಲ್ಲಿ ರಾಜ್ಯ ರಾಷ್ಟ್ರದಾಧ್ಯಂತ ಪರಿಚಯಿಸಲ್ಪಡಲಿ ಎಂದು ಶುಭ ಹಾರೈಸಿದರು .
ಇದೆ ಸಂಧರ್ಭದಲ್ಲಿ ಮಾತನಾಡಿದ ಅವರು ಸಮಸ್ತ ಕೇರಳ ಜಮ್ಯೀಯತುಲ್ ಉಲಮಾ ಪಂಡಿತ ಸಭೆಯು ಇಂದು ತನ್ನ ತೊಂಬತ್ತು ವರ್ಷಗಳನ್ನು ಪೂರೈಸುತ್ತಿದ್ದು ಮುಂದಿನ ತಿಂಗಳು ಕೇರಳದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲೇ ಐತಿಹಾಸಿಕ ಸಮ್ಮೇಳನವನ್ನು ಆಯೋಜಿಸಿದ್ದು ಆ ಕಾರ್ಯಕ್ರದಲ್ಲಿ ತಾವೆಲ್ಲರೂ ಭಾಗವಹಿಸಲು ಶ್ರಮಿಸುವಂತೆ ಕೇಳಿಕೊಂಡು , ಯಶಸ್ವೀ ಗಾಗಿ ಪ್ರಾರ್ಥಿಸುವಂತೆ ವಿನಂತಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಅಬ್ದುಲ್ ಖಾದರ್ ಬೈತಡ್ಕ ರವರು ಮಾತನಾಡಿ ಇಂದು ರಾಜ್ಯಾದ್ಯಂತ ವಿವಿದ ಭಾಷಾ ಪ್ರಭಾಷನಗಳಲ್ಲಿ ಪರಿಚಯಿಸಲ್ಪಟ್ಟ ಕೌಸರಿಗಲೆಂಬ ಯುವ ಪ್ರತಿಭೆಗಳನ್ನು ಈ ಸಮುದಾಯಕ್ಕೆ ಸಮರ್ಪಿಸಿದ ಈ ಸಂಸ್ಥೆಯು , ತಮ್ಮಂತಹ ಯುವ ನೇತಾರ ಸಹಕಾರ ದಿಂದಾಗಿ ಯಶಸ್ವಿಯ ಪಥದಲ್ಲಿ ಮುಂದೆ ಸಾಗುತ್ತಿದೆ. ಇಂದು ಪತ್ರಿಕಾ ಮಾಧ್ಯಮ , ದೃಶ್ಯ ಮಾಧ್ಯಮಗಳು ಮುಸ್ಲಿಂ ಸಮುದಾಯವನ್ನು ತೀರಾ ನಿರ್ಲಕ್ಷ್ಯ ನೀತಿಯಿಂದ ಸಮಾಜದ ಮುಂದೆ ಪರಿಚಯಿಸಲ್ಪಡುತ್ತಿರುವ ಇಂತಹ ಸಂಧರ್ಭದಲ್ಲಿ ನಮ್ಮ ಸಂಸ್ಥೆಯು ಅವೆಲ್ಲದಕ್ಕೂ ತಮ್ಮ ಮಾತಿನ ಮೂಲಕವೇ ಉತ್ತರಿಸಬಲ್ಲ ಯುವ ಸಮುದಾಯವನ್ನು ಸಮುದಾಯದ ಮುಂದೆ ಸಮಾಜದ ಮುಂದೆ ಸಮರ್ಪಿಸಿದ್ದು , ಇಂದು ಕೌಸರಿಗಲೆಂಬ ಪ್ರತಿಭೆಗಳು ನಮ್ಮ ಸಂಸ್ಥೆಯ ಅಭಿಮಾನವಾಗಿದ್ದು , ಮುಂದೆ ಸಂಸ್ಥೆಯು ಹಲವಾರು ಕಾಮಗಾರಿ ಗಳನ್ನೂ ಹಮ್ಮಿಕೊಂಡಿದ್ದು ಸಮುದಾಯಿ ಪ್ರೇಮಿಗಳಾದ ತಾವೆಲ್ಲರೂ ಸಹಕರಿಸುವಂತೆ ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಕೆ ಐ ಸಿ ನೇತಾರರು ಡಾ ಸಲೀಂ ಫೈಝಿ ಇರ್ಫಾನಿ ಅಲ್ ಅಝ್ ಹರಿಯವರನ್ನು ಶಾಲು ಹೊದಿಸಿ ಸನ್ಮಾನಿಸಿದರು
ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ , ಕೆ ಐ ಸಿ ಸ್ಥಾಪಕ ಸದಸ್ಯರಾದ ಮಾಡಾವು ಮುಹಮ್ಮದ್ . ದುಬೈ ಸಮಿತಿ ಅಧ್ಯಕ್ಷರಾದ ಅಶ್ರಫ್ ಖಾನ್ ಮಾಂತೂರ್ , ಶಾರ್ಜಃ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಮಣಿಲ , ಅಬುಧಾಬಿ ಸಮಿತಿ ಅಧ್ಯಕ್ಷರಾದ ಹನೀಫ್ ಆರ್ಯಮೂಲೇ , ಅಬುಧಾಬಿ ಸಮಿತಿ ಕೊಶಾಧಿಕಾರು ಹನೀಫ್ ಮುಸ್ಲಿಯಾರ್ ಬಿ ಸಿ ರೋಡ್ , ಕೇಂದ್ರ ಸಮಿತಿ ಕಾರ್ಯಧ್ಯಕ್ಷರಾದ ಶರೀಫ್ ಕಾವು ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷರಾದ ಜಬ್ಬಾರ್ ಬೈತಡ್ಕ , ಹಕೀಂ ಫೈಝಿ , ಮುಸ್ತಫಾ ಮುಸ್ಲಿಯಾರ್ , ಇಬ್ರಾಹಿಮ್ ಫೈಝಿ ಮೊದಲಾದವರು ಉಪಸ್ತಿತರಿದ್ದು ಸಂಧರ್ಬ್ಹೊಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಭಾ ಕಾರ್ಯಕ್ರಮದ ನಂತರ ಕೆ ಐ ಸಿ ಕಾರ್ಯಾಧ್ಯಕ್ಷರಾದ ಶರೀಫ್ ಕಾವು ರವರ ಅಧ್ಯಕ್ಷತೆಯಲ್ಲಿ ಕೆ ಐ ಸಿ ಕಾರ್ಯ ಯೋಜನೆ , ಮುಂದಿನ ಅಕಾಡೆಮಿ ಕಾಮಗಾರಿ ಹಾಗೂ ಅರಬ್ ರಾಷ್ಟ್ರಗಳಲ್ಲಿ ಕೆ ಐ ಸಿ ಭಲ ವರ್ಧನೆಯ ಕುರಿತು ಸಭೆ ನಡೆಸಿ , ಪಧಾಧಿಕಾರಿಗಳಿಂದ ಸಲಹೆ ಸೂಚನೆಗಳನ್ನು ಕ್ರೋಡೀಕರಿಸಲಾಯಿತು .
ಕಾರ್ಯಕ್ರಮದಲ್ಲಿ ಕೆ ಐ ಸಿ ಧಾರ್ಮಿಕ ಸಲಹೆಗಾರರು , ಸಕ್ರಿಯ ಕಾರ್ಯಕರ್ತರೂ ಆದ ಅಬ್ದುಲ್ಲಾ ನಯೀಮಿ ಯವರ ನೇತೃತ್ವದಲ್ಲಿ ನೇರ ಪ್ರಸಾರವನ್ನು ಒದಗಿಸಿದ್ದು , ಶಂಸುದ್ದೀನ್ ಹನೀಫಿ ಮರ್ಧಾಲ ವಂದಿಸಿ ನೂರ್ ಮುಹಮ್ಮದ್ ನೀರ್ಕಜೆಯವರು ಕಾರ್ಯಕ್ರಮವನ್ನು ನಿರೂಪಿಸಿದರು .