
ನವದೆಹಲಿ: ಚಿನ್ನ ಮತ್ತು ಬೆಳ್ಳಿ ನಷ್ಟದೊಂದಿಗೆ ವರ್ಷಾಂತ್ಯ ಕಂಡಿವೆ. ಆಭರಣ ತಯಾರಕರು ಖರೀದಿಯಿಂದ ದೂರು ಉಳಿದಿದ್ದರಿಂದ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲ ವಹಿ ವಾಟು ಕಂಡಿದ್ದರಿಂದ ದೇಶೀಯ ಮಾರು ಕಟ್ಟೆಗಳಲ್ಲೂ ಕುಸಿತ ದಾಖಲಿಸಿದವು.
ಪ್ರತಿ ಹತ್ತು ಗ್ರಾಂ ಚಿನ್ನ ರು.260 ನಷ್ಟದೊಂದಿಗೆ ರು.25,390ಕ್ಕೆ ತಲುಪಿದರೆ ಬೆಳ್ಳಿ ಪ್ರತಿ ಕೆಜಿ ದರ ರು.250 ಕುಸಿದು ರು.33,300ಕ್ಕೆ ಕೊನೆಗೊಂಡಿತು. ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ಸತತವಾಗಿ ನಷ್ಟದೊಂದಿಗೆ ಅಂತ್ಯಕಂಡಿವೆ.
ಈ ವರ್ಷ ಒಟ್ಟಾರೆಯಾಗಿ ಚಿನ್ನದ ದರ ರು.1,550 ನಷ್ಟ ಕಂಡಿತು. ಜಾಗತಿಕ ಮಾರುಕಟ್ಟೆ ಯಲ್ಲಿ ಬೇಡಿಕೆ ಕಳೆದುಕೊಳ್ಳುವುದರ ಜೊತೆಗೆ ದೇಶೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರು ಹೆಚ್ಚಿನ ಖರೀದಿಗೆ ಮುಂದಾಗದಿದ್ದರಿಂದ ಚಿನ್ನ ಮತ್ತು ಬೆಳ್ಳಿ ದರಗಳು ಈ ವರ್ಷ ನಷ್ಟದೊಂದಿಗೆ ಅಂತ್ಯ ಕಂಡವು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.