ಕರಾವಳಿ

ಈ ವಾರದಲ್ಲಿ 4 ದಿನ ಬ್ಯಾಂಕ್ ಇಲ್ಲ

Pinterest LinkedIn Tumblr

BANK

ಬೆಂಗಳೂರು: ಈ ವಾರದಲ್ಲಿ ಬರುವ ಸರಣಿ ಸರ್ಕಾರಿ ರಜೆಗಳಿಂದಾಗಿ ಬ್ಯಾಂಕ್‍ಗಳೂ ಸತತ ನಾಲ್ಕು ದಿನ ಕಾರ್ಯ ನಿರ್ವಹಣೆ ನಿಲ್ಲಿಸಲಿವೆ.

ಡಿ.24 (ಗುರುವಾರ) ಈದ್ ಮಿಲಾದ್, ಡಿ.25 (ಶುಕ್ರವಾರ) ಕ್ರಿಸ್‍ಮಸ್, ಶನಿವಾರ (ನಾಲ್ಕನೇ ಶನಿವಾರ ಪೂರ್ಣ ರಜೆ), ನಂತರ ಎಂದಿನಂತೆ ಭಾನುವಾರ ರಜೆ ಇರುವುದರಿಂದ ಸತತವಾಗಿ 4 ದಿನ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ. ಬ್ಯಾಂಕ್ ಗಳಿಗೆ ಸಿಕ್ಕ ನಾಲ್ಕು ದಿನಗಳ ರಜೆಯಿಂದಾಗಿ ಎಟಿಎಂಗಳಿಗೂ ಹಣದ ಕೊರತೆಯಾಗಿಲಿದೆ. ಹೀಗಾಗಿ ಎಟಿಎಂಗಳೂ ಕಾರ್ಯ ನಿರ್ವಹಿಸುವುದು ಅನುಮಾನ.

ಕೆಲವು ರಾಷ್ಟ್ರೀಕೃತ ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಅನುಕೂಲಕ್ಕಾಗಿ ಪ್ರಮುಖ ಎಟಿಎಂಗಳಿಗೆ ಹಣ ತುಂಬಲಿವೆ. ಹೀಗಾಗಿ ಬಹುತೇಕ ಬ್ಯಾಂಕಿಂಗ್ ವ್ಯವಹಾರ ನಾಲ್ಕು ದಿನಗಳ ಕಾಲ ಸ್ತಬ್ಧವಾಗಲಿದೆ.

Write A Comment