ಮಂಗಳೂರು:ಲಕುಮಿ ಕ್ರಿಯೇಶನ್ ಹಾಗೂ ಶ್ರೀ ದುರ್ಗಾ ಎಂಟರ್ ಟೈನ್ ಮೆಂಟ್ ನ ಎಕ್ಕಸಕ ಖ್ಯಾತಿಯ ಕೆ.ಸೂರಜ್ ಶೆಟ್ಟಿಯವರ ನಿರ್ದೇಶನದಲ್ಲಿ ಮಹಿಳಾ ಪ್ರಧಾನ ಚಿತ್ರ “ಪಿಲಿಬೈಲ್ ಯಮುನಕ್ಕ” ಎಂಬ ತುಳು ಚಿತ್ರವು ತೆರೆ ಕಾಣಲಿದೆ.
ಚಿತ್ರದ ಮುಹೂರ್ತ ಕಳೆದ ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಜರಗಿತು.ಮುಹೂರ್ತ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು “ತುಳು ಭಾಷೆಯನ್ನು ವಿಶ್ವ ಮಟ್ಟದಲ್ಲಿ ಪ್ರಚಾರಪಡಿಸಲು ತುಳು ಸಿನಿಮಾ ಉತ್ತಮ ವೇದಿಕೆಯಾಗಿದೆ.ಇದಕ್ಕೆ ಪ್ರೋತ್ಸಾಯಿಸಿ ಬೆಳೆಸಬೇಕು” ಎಂದು ಶುಭಾಶಂಸನೆಗೈದು ಮಾತನಾಡಿದರು.
ಪಿಲಿಬೈಲ್ ಯಮುನಕ್ಕ ತುಳು ಸಿನಿಮಾದ ಆರಂಭ ಫಲಕವನ್ನು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ತಂತ್ರಿ,ಲಕುಮಿ ತಂಡದ ಸಂಘಟಕ ಹಾಗೂ ಎಕ್ಕಸಕ ಚಿತ್ರದ ನಿರ್ಮಾಪಕ ಕಿಶೋರ್.ಡಿ.ಶೆಟ್ಟಿ, ಚಿತ್ರದ ನಿರ್ಮಾಪಕ ರೋಹನ್ ಶೆಟ್ಟಿ,ಸಹ ನಿರ್ಮಾಪಕ ಹರೀಶ್ ರಾವ್,ನಿರ್ದೇಶಕ ಸೂರಜ್ ಶೆಟ್ಟಿ,ಮೈಮ್ ರಾಮದಾಸ್,ರಾಜೇಶ್ ಡಿ. ಶೆಟ್ಟಿ,ಚಂದ್ರಹಾಸ ಶೆಟ್ಟಿ,ಸತೀಶ್ ಆಚಾರ್ಯ,ನೀಲಯ್ಯ ಕೋಟ್ಯಾನ್ ಕಟೀಲು,ಪದ್ಮನಾಭ ಶೆಟ್ಟಿ,ನವೀನ್ ಶೆಟ್ಟಿ ಸಂದೇಶ್ ಆರ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಸಹ ನಿರ್ಮಾಪಕರಾಗಿ ಉತ್ಸಾಹಿ ಯುವಕರಾದ ಹರೀಶ್ ರಾವ್ ಮತ್ತು ಸಂದೇಶ್ ಆರ್ ಬಂಗೇರ ಇದ್ದಾರೆ.ಸಂಗೀತ ಕಿಶೋರ್ ಕುಮಾರ್ ಶೆಟ್ಟಿ,ಗೀತಾ ಸಾಹಿತ್ಯವನ್ನು ಮಯೂರ್ ಶೆಟ್ಟಿ ನೀಡಿದ್ದಾರೆ.ಛಾಯಾಗ್ರಹಣವನ್ನು ಅನುಭವಿ ಕೀರ್ತನ್ ಪೂಜಾರಿ ಬೆಂಗಳೂರು ಸಂಕಲನವನ್ನು ಕೆ.ಲಿಂಗರಾಜು ನಿರ್ವಹಿಸಲಿದ್ದಾರೆ.
ಯಮುನಕ್ಕ ಪಾತ್ರಧಾರಿಯಾಗಿ ಹೆಸರಾಂತ ನಟಿಯೋರ್ವರು ಅಭಿನಯಿಸಲಿದ್ದಾರೆ.ನಾಯಕರಾಗಿ ನಾಗರಾಜ್ ಅಂಬರ್,ನಾಯಕಿಯಾಗಿ ಸೋನಾಲಿ ಮೊಂತೇರೊ ಉಳಿದಂತೆ ನವೀನ್.ಡಿ ಪಡೀಲ್,ಭೋಜರಾಜ್ ವಾಮಂಜೂರು ಅರವಿಂದ ಬೋಳಾರ್,ಸತೀಶ್ ಬಂದಲೆ,ದೀಪಕ್ ರೈ,ಉಮೇಶ್ ಮಿಜಾರು,ಸಂದೀಪ್ ಶೆಟ್ಟಿ,ಪ್ರಸನ್ನ ಶೆಟ್ಟಿ,ಉದಯ ಶೆಟ್ಟಿ ಇನ್ನಾ,ರೂಪ ವರ್ಕಾಡಿ,ನಮಿತಾ ಇನ್ನಿತರರು ಅಭಿನಯಿಸಲಿದ್ದಾರೆ.


