ಕನ್ನಡ ವಾರ್ತೆಗಳು

ಡಿ.12 : ವಿ.ವಿ ಮಟ್ಟದ ಆಹ್ವಾನಿತ ಪುರುಷ ತಂಡಗಳ ಕಬಡ್ಡಿ ಪಂದ್ಯಾಟ ಖೇಲ್ ಕಬಡ್ಡಿ.

Pinterest LinkedIn Tumblr

Khel_Kabadi_Press_1

ಮಂಗಳೂರು,ಡಿ.08 : ನಾರಾಯಣ ಗುರು ಕಾಲೇಜು ಕುದ್ರೋಳಿ ಈ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವು ಅಮೇಚೂರ ಕಬಡ್ಡಿ ಅಸೋಶಿಯೇಶನ್ (ರಿ.) ದ.ಕ ಹಾಗೂ ಮಂಗಳೂರು ತಾಲೂಕು ಅಮೇಚೂರು ಕಬಡ್ಡಿ ಅಸೋಸಿಯೇಶನ್ (ರಿ.) ಇವರ ಸಹಯೋಗ ದೊಂದಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಹಾಗೂ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಆಹ್ವಾನಿತ ಪುರುಷ ತಂಡಗಳ ಕಬಡ್ಡಿ ಪಂದ್ಯಾಟ ‘ಖೇಲ್ ಕಬಡ್ಡಿ -2015 ‘ವನ್ನು ಡಿಸೆಂಬರ್ 12, 2015  ಶನಿವಾರದಂದು ಮಂಗಳೂರಿನ ಉರ್ವಾ ಮಾರ್ಕೆಟ್ ಬಳಿಯ ‘ಉರ್ವ ಮೈದಾನ’ದಲ್ಲಿ ಆಯೋಜಿಸಿದೆ ಎಂದು ಕಾಲೇಜಿನ ಹಳೆ ವಿಧ್ಯಾರ್ಥಿ ಸಂಘ ಅಧ್ಯಕ್ಷ ಶ್ರೀದೀಪಕ್ ಸುವರ್ಣ ಅವರು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 9.30 ಕ್ಕೆ ಹಾಗೂ ಸಭಾ ಕಾರ್ಯಕ್ರಮ ಸಂಜೆ 6.30 ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Khel_Kabadi_Press_2 Khel_Kabadi_Press_3 Khel_Kabadi_Press_4

Khel_Kabadi_Press_5

ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಆಹ್ವಾನಿತ ಕಬಡ್ಡಿ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ -1 ನೇ ಬಹುಮಾನ 7,777/- ನಗದು ಹಾಗೂ ಪಾರಿತೋಷಕ, 2ನೇ ಬಹುಮಾನ 5,555/- ನಗದು ಹಾಗೂ ಪಾರಿತೋಷಕ, 3ನೇ ಬಹುಮಾನ 3,333/- ನಗದು ಹಾಗೂ ಪಾರಿತೋಷಕ, ಜಿಲ್ಲಾ ಮಟ್ಟದ ಆಹ್ವಾನಿತ ಕಬಡ್ಡಿ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ 1ನೇ ಬಹುಮಾನ 33,333/- ನಗದು ಹಾಗೂ ಪಾರಿತೋಷಕ, 2ನೇ ಬಹುಮಾನ 22,222/- ನಗದು ಹಾಗೂ ಪಾರಿತೋಷಕ, 3ನೇ ಬಹುಮಾನ 9,999/-ನಗದು ಹಾಗೂ ಪಾರಿತೋಷಕ, 4ನೇ ಬಹುಮಾನ 9,999/-ನಗದು ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಾಗುವುದು. ಮಾತ್ರವಲ್ಲದೇ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಉತ್ತಮ ಸರ್ವಾಂಗೀಣ ಆಟಗಾರ ಇವರಿಗೆ ಪಾರಿತೋಷಕಳೊಂದಿಗೆ ಪುರಸ್ಕರಿಸಲಾಗುವುದು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜಿನ ಪಾಂಶುಪಾಲ ಡಾ.ವಸಂತ್ ಕುಮಾರ್, ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಅಸೋಶಿಯೇಶನ್ ಕಾರ್ಯದರ್ಶಿ ಪುರುಷೋತ್ತಮ್ .ಬಿ, ಶ್ರೀ ನಾರಾಯಣ ಗುರು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ ರತ್ನಾಕರ್ ಕುಡ್ವ ಮುಂತಾದವರು ಉಪಸ್ಥಿತರಿದ್ದರು.

ಹೆಚ್ಚಿನ ವಿವರಗಾಗಿ ಶ್ರೀ ನಾರಾಯಣ ಗುರು ಕಾಲೇಜು ಹಳೆ ವಿದ್ಯಾರ್ಥಿ ಸಂಘ (ರಿ.) ಕುದ್ರೋಳಿ, ಮಂಗಳೂರು, ಇದರ ಅಧ್ಯಕ್ಷರಾದ ದೀಪಕ್ ಸುವರ್ಣ – 9448368969, ಪ್ರದಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ – 9481270933 ಮತ್ತು ಕ್ರೀಡಾ ಕಾರ್ಯದರ್ಶಿ ಯಶವಂತ್ – 9900411496 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Write A Comment