ಕರಾವಳಿ

ಶಾರ್ಜ್ಹಾದಲ್ಲಿ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿರುವ ಚಂದ್ರಮೋಹನರಿಗೆ ಬೇಕಾಗಿದೆ ದಾನಿಗಳ ಸಹಾಯಹಸ್ತ

Pinterest LinkedIn Tumblr

1

ಶಾರ್ಜ್ಹಾ: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಬಿಳಿನೆಲೆ ಗ್ರಾಮದ ಚಂದ್ರಮೋಹನ್ ಕಳೆದ ಒಂದು ವರ್ಷದಿಂದ ಶಾರ್ಜ್ಹಾ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಅಲ್ ಬರೆಕ್ ಫೈರ್ ಎಕ್ಯೂಪ್ಮೆಂಟ್ ಮೈಂಟನೆನ್ಸ್ ಕಂಪೆನಿಯಲ್ಲಿ ಟೆಕ್ನೀಶಿಯನ್ ಆಗಿದ್ದು 2015 ಅಕ್ಟೋಬರ್ 11ನೇ ತಾರೀಕು ಸಜ್ಜಾ ಪೋಲಿಸ್ ಠಾಣಾ ವ್ಯಾಪ್ತಿಯ ದಯಿದ್ ರಸ್ತೆಯಲ್ಲಿ ಕಂಪೆನಿ ವಾಹನ ಪಿಕಪ್ ಟಯರ್ ಸ್ಪೋಟಗೊಂಡು ಅಪಘಾತವಾಗಿದೆ.ವಾಹನ ಮೂರು ನಾಲ್ಕು ಪಲ್ಟಿಯಾದ ಕಾರಣ ಹಿಂಬದಿಯಲ್ಲಿದ್ದ ಚಂದ್ರಮೋಹನ್ ಗೆ ತೀವ್ರ ಪೆಟ್ಟಾಗಿದ್ದು ಬೆನ್ನು ಹುರಿ ಕುತ್ತಿಗೆಯ ಭಾಗದಲ್ಲಿ ಮತ್ತು ಸೊಂಟ ಭಾಗದಲ್ಲಿ ಮುರಿದಿದ್ದು ಶಾರ್ಜ್ಹಾ ಅಲ್ ಕಾಸ್ಮೀಯ ಆಸ್ಪತ್ರೆಯಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಐಸಿಯುನಲ್ಲಿದ್ದಾರೆ.

111

11

ಎದ್ದು ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.ಈಗಾಗಲೇ ಕುತ್ತಿಗೆಯ ಹಿಂಭಾಗದಲ್ಲಿ ಕೃತಕ ಪ್ಲೇಟ್ ಫಿಕ್ಸ್ ಮಾಡಿ ಶಸ್ತ್ರಕ್ರಿಯೆ ನಡೆಸಲಾಗಿದೆ. ಮಾತನಾಡುವ ಸ್ಥಿತಿಯಲ್ಲಿಲ್ಲದೆ ಬರೇ ಕೈ ಸನ್ನೆಯಲ್ಲಿ ಬೇಕು ಬೇಡ ತಿಳಿಸುವಂತಾಗಿದೆ.ಅವರನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಅವರ ತಮ್ಮನಾದ ಪೂರ್ಣಚಂದ್ರರನ್ನು ವಿಸಿಟ್ ವಿಸಾದಲ್ಲಿ ಬರಮಾಡಿಕೊಂಡು ಅವರನ್ನು ನೋಡಿಕೊಳ್ಳುತ್ತಿದ್ದಾರೆ.

ಚಂದ್ರಮೋಹನ್ ಅವರ ಊರಿನಲ್ಲಿ ಹೆಂಡತಿ ಮತ್ತು ಎಂಟು ತಿಂಗಳ ಮಗು ಮತ್ತು ಎರಡುವರೆ ವರ್ಷದ ಮಗು ಇದ್ದಾರೆ. ಕಷ್ಟದ ಜೀವನ ನಡೆಸುತ್ತಿದ್ದು ಇದೀಗ ಅವರ ಜೀವನಕ್ಕೆ ದುಡಿಯಬೇಕಾಗಿದ್ದವರು ದುಡಿಯಲಾರದ ಸ್ಥಿತಿಗೆ ತಲುಪಿರುವುದು ದುರಂತವಾಗಿದೆ.ಇದೇ ಡಿಸೆಂಬರ್ ತಿಂಗಳು 12ನೇ ತಾರೀಕಿನಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ವಿಮಾನದಲ್ಲಿ ಮಲಗಿ ಪ್ರಯಾಣ ಮಾಡುವ ವ್ಯವಸ್ಥೆಯೊಂದಿಗೆ ಊರಿಗೆ ಕಳುಹಿಸಿ ಕೊಡುತ್ತಿದ್ದಾರೆ. ಅವರು ಕೆಲಸ ಮಾಡುವ ಕಂಪೆನಿಯ ವಾಹನದ ಇನ್ಸೂರೆನ್ಸ್ ಸರಿ ಇಲ್ಲದ ಕಾರಣ ಇವರಿಗೆ ಯಾವುದೇ ಇನ್ಸೂರೆನ್ಸ್ ಕೂಡ ದೊರೆಯದಂತಾಗಿದೆ. ಇಲ್ಲಿಯವರೆಗೆ ಎಲ್ಲಾ ಖರ್ಚುಗಳನ್ನು ಅವರ ಕಂಪೆನಿ ನೀಡಿದ್ದು ಅವರನ್ನು ಊರಿಗೆ ಕಳುಹಿಸಿ ಕೊಡುವವರೆಗೆ ಮಾತ್ರ ಖರ್ಚು ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಅವರು ಊರಿಗೆ ಹೋದ ನಂತರ ಅವತ ಚಿಕಿತ್ಸೆ ಅವರ ಕುಟುಂಬದ ನಿರ್ವಹಣೆಗೆ ದಿಕ್ಕು ತೋಚದಂತಾಗಿರುವ ಓರ್ವ ಬಡ ಕಾರ್ಮಿಕನಿಗೆ ದಾನಿಗಳ ನೆರವಿನ ಅಗತ್ಯವಿದೆ.ಸಹಾಯ ಮಾಡಲಿಚ್ಚಿಸುವವರು ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿರಿ

ಚಂದ್ರಮೋಹನ ಶಾರ್ಜ
052-6105589

ಪೂರ್ಣಚಂದ್ರ(ತಮ್ಮ)
9448887905

Write A Comment