ಕರಾವಳಿ

ಡಿ.11 ರಂದು ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ; ಸಯ್ಯದ್ ಅಲಿ ತಂಙಲ್ ಕುಂಬೋಲ್ , ಎವಿ ಉಸ್ತಾದ್ ನಂದಿ , ಹುಸೈನ್ ದಾರಿಮಿ ದುಬೈ ಯಲ್ಲಿ

Pinterest LinkedIn Tumblr

32

ದುಬೈ : ಸಮನ್ವಯ ವಿಧ್ಯಾ ಕೇಂದ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಇದರ ಪೋಷಕ ಅಂಗ ಸಂಸ್ಥೆಯಾಗಿ ಅರಬ್ ರಾಷ್ಟ್ರ ಯು ಎ ಇ ಯಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ ಐ ಸಿ ) ಇಂದು ತನ್ನ ಹದಿನೈದು ವರ್ಷಗಳ ಸುಧೀರ್ಗ ಸೇವೆಯನ್ನು ಪೂರ್ತಿ ಗೊಳಿಸಿದ್ದು ಆ ಪ್ರಯುಕ್ತ ಡಿಸೆಂಬರ್ 11 ರಂದು ದುಬೈ ಯ ಓದ್ ಮೇತಾ ದಲ್ಲಿರುವ ಪ್ರತಿಷ್ಟಿತ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ಯು ಎ ಇ ರಾಷ್ಟ್ರೀಯ ದಿನಾಚರನೆಯೊಂದಿಗೆ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ.

ಸಂಜೆ 4.30 ರಿಂದ 9.30 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತಾಯಿ ನಾಡಿನಿಂದ , ಹಲವಾರು ವಿಶಿಷ್ಟ ಅತಿಥಿಗಳು ಭಾಗವಹಿಸಲಿದ್ದು , ಸಯ್ಯದ್ ಮನೆತನದ ಅಗ್ರಗಣ್ಯರು , ಕುಂಬೋಲ್ ಕುಟುಂಬದ ಕಣ್ಮನಿಯು ಕೆ ಐ ಸಿ ಗೌರವ ನಿರ್ದೇಶಕರು ಆದ ಸಯ್ಯದ್ ಅಲಿ ಅಲಿ ತಂಙಲ್ ಕುಂಬೋಲ್, ದಕ್ಷಿಣ ಭಾರತ ದ ಪ್ರಸಿದ್ದ ಧಾರ್ಮಿಕ ಶಿಕ್ಷಣ ಕೇಂದ್ರ ನಂದಿ ದಾರುಸ್ಸಲಾಮ್ ಅರೇಬಿಕ್ ಕಾಲೇಜ್ ಇದರ ಕುಲಪತಿ , ಶೈಖುನ ಎ ವಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ , ಪ್ರಪ್ರಥಮ ಬಾರಿಗೆ ಕರ್ನಾಟಕದ ಮಣ್ಣಿನಲ್ಲಿ ಸಮಸ್ತ ಅಧೀನದಲ್ಲಿ ಸಮನ್ವಯ ವಿಧ್ಯಾ ಸಂಸ್ಥೆಯನ್ನು ಪರಿಚಯಿಸಿ , ಸರಿ ಸುಮಾರು ಇಪ್ಪತ್ತು ವರ್ಷಗಳಿಂದ ಈ ವಿಧ್ಯಾ ಸಂಸ್ಥೆಯನ್ನು ಪೋಷಿಸುತ್ತಾ ಬಂದಿರುವ ಶಿಕ್ಷಣ ಕ್ಷೇತ್ರದ ಹರಿಕಾರ ಹಾಜಿ ಅಹಮ್ಮದ್ ಆಕರ್ಷಣ್ , ಪ್ರಭಾಷಣ ಲೋಕದ ದ್ರುವ ತಾರೆ , ದೇಶ ವಿದೇಶಗಳಲ್ಲಿ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ವಿಶಿಷ್ಟ ವ್ಯಕ್ತಿತ್ವ , ಕೆ ಐ ಸಿ ಪೋಷಕರಲ್ಲಿ ಒರ್ವರೂ ಆದ ಹಾಜಿ ಹುಸೈನ್ ದಾರಿಮಿ ರೆಂಜಲಾಡಿ , ಕೆ ಐ ಸಿ ವಿಧ್ಯಾ ಸಂಸ್ಥೆಯ ಆರಂಭ ಕಾಲದಿಂದಲೂ ಸಂಸ್ಥೆಯನ್ನು ಪೋಷಿಸುತ್ತಾ ಬಂದಿರುವ ಸಂಸ್ಥೆಯ ಕಾರ್ಯದರ್ಶಿ ಕೆ ಎಂ ಬಾವ ಹಾಜಿ ಕೂರ್ನಡ್ಕ , ಹಾಗೂ ಉದ್ಯಮಿಗಳೂ ಯುವ ನೇತಾರರು , ಕೆ ಐ ಸಿ ಸಂಸ್ಥೆಯ ಎಲ್ಲಾ ಹಾಗು ಹೋಗುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬರುತ್ತಿರುವ ಕೆ ಪಿ ಸಾದಿಕ್ ಹಾಜಿ ಆಕರ್ಷಣ್ ಮೊದಲಾದವರು ಭಾಗವಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ಸಭಾಧ್ಯಕ್ಷತೆ ವಹಿಸಲಿದ್ದು ಕೆ ಐ ಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಆಸ್ಕರ್ ಅಲಿ ತಂಙಲ್ ಕೊಲ್ಪೆ ರವರು ಉಪಸ್ತಿತರಿರಲಿದ್ದು , ಸಯ್ಯದ್ ಹಾಮಿದ್ ಕೋಯಮ್ಮ ತಂಙಲ್ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಯುವ ಉಧ್ಯಮಿಗಳು ಹಲವಾರು ಸಾಮಾಜಿಕ ದಾರ್ಮಿಕ ಕಾರ್ಯಗಳ ಮೂಲಕ ಸಮುದಾಯದ ಏಳಿಗೆಗೆ ಸಹಕರಿಸುತ್ತಾ ಬಂದಿರುವ ಕೆ ಐ ಸಿ ಪೋಷಕರಲ್ಲಿ ಓರ್ವರು ಆದ ಹಾಜಿ ಅಬ್ದುಲ್ ಖಾದರ್ ಅಮ್ಚಿನಡ್ಕ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು , ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಜನಾಬ್ ಬಿ ಕೆ ಶರೀಫ್ ಕಾವು ರವರು ಸ್ವಾಗತ ಭಾಷಣವನ್ನು ಮಾಡಲಿದ್ದಾರೆ. ಅಲ್ಲದೆ ಅರಬ್ ರಾಷ್ಟ್ರ ಯು ಎ ಇ ಸ್ವದೇಶೀ ಮೇಧಾವಿಗಳು , ಯು ಎ ಇ , ಸೌದಿ ಅರೇಬಿಯಾ , ಖತಾರ್ , ಕುವೈಟ್ , ಹಾಗೂ ಇನ್ನಿತರ ಪ್ರದೇಶಗಳ ಕೆ ಐ ಸಿ ನೇತಾರರು ಪೋಷಕರು , ಉದ್ಯಮಿಗಳೂ ಸಾಮಾಜಿಕ ದಾರ್ಮಿಕ ಕ್ಷೇತ್ರಗಳ ಮುಂಚೂಣಿ ನಾಯಕರುಗಳು ಕಾರ್ಯಕ್ರಮದಲ್ಲಿ ಉಪಸ್ತಿತರಿರಲಿದ್ದಾರೆ .

ಕಾರ್ಯ ಕ್ರಮದಲ್ಲಿ ಸುಮಾರು 1200 ಕೆ ಐ ಸಿ ಹಿತೈಷಿಗಳು ಭಾಗವಹಿಸುವ ನಿರೀಕ್ಷೆ ಯಿದ್ದು ಸ್ತ್ರೀಯರಿಗೆ ಪ್ರತ್ಯೇಕ ಆಸನದ ವ್ಯವಸ್ತೆಯನ್ನು ಮಾಡಲಾಗಿದೆ. ಸಂಜೆ 4.30 ರಿಂದ ಸಭಾ ಕಾರ್ಯಕ್ರಮವು ಯು ಎ ಇ ರಾಷ್ಟ್ರೀಯ ದಿನಾಚರನೆಯೊಂದಿಗೆ ಪ್ರಾರಂಭಗೊಳ್ಳಲಿದ್ದು ಅನಿವಾಸಿ ದೀನೀ ಸ್ನೇಹಿಗಳು , ಕೆ ಐ ಸಿ ಹಿತೈಷಿಗಳು ಆದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆ ಐ ಸಿ ವಿಧ್ಯಾ ಸಂಸ್ಥೆಯ ಯಶಸ್ಸಿನ ರೂವಾರಿಗಳಲ್ಲಿ ಒರ್ವರಾಗುವಂತೆ ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ, ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಜನಾಬ್ ಬಿ ಕೆ ಶರೀಫ್ ಕಾವು, ಪ್ರಧಾನ ಕಾರ್ಯದರ್ಶಿ ಹಮೀದ್ ಮಣಿಲ , ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ , ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಕೋಶಾಧಿಕಾರಿ ಅಶ್ರಫ್ ಖಾನ್ ಮಾಂತೂರ್, ಕೆ ಐ ಸಿ ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆ ರವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿರುತ್ತಾರೆ

Write A Comment