ಅಂತರಾಷ್ಟ್ರೀಯ

ಮುಖದಲ್ಲಿ ಕಾಂತಿ ಮೂಡಲು, ಕಲೆ ನಿವಾರಣೆ ಮಾಡಲು ಈ ರೀತಿ ಮಾಡಿ….

Pinterest LinkedIn Tumblr

face

ಮುಖದಲ್ಲಿ ಕಾಂತಿ ಮೂಡಲು, ಕಲೆ ನಿವಾರಣೆ ಮಾಡಲು ಎಷ್ಟೋ ಜನ ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಾರೆ. ಆದರೆ ನೈಸರ್ಗಿಕ ಹಣ್ಣಿನ ಜ್ಯೂಸ್‍ಗಳಿಂದಲೇ ಈ ಸಮಸ್ಯೆಗೆ ಮುಕ್ತಿ ಹಾಡಬಹುದಾಗಿದೆ.

* ನಿಂಬೆ ಹಣ್ಣು ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರಕ. ನಿಂಬೆಹಣ್ಣಿನಲ್ಲಿರುವ ನೈಸರ್ಗಿಕ ಬ್ಲೀಚ್ ಗುಣ ದೇಹದ ಕಲೆಗಳನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.

* ಕಲೆ ನಿವಾರಕ ಚಕಿತ್ಸೆಗೆ ಟೊಮಾಟೋ ಉಪಯುಕ್ತವಾಗಿದೆ. ಟೊಮಾಟೋದ ಜ್ಯೂಸ್ ತೆಗೆದು ಅದನ್ನು ಕಲೆ ಮೇಲೆ ಹಚ್ಚಿ 10-15 ಬಿಟ್ಟು ನೀರಿನಲ್ಲಿ ತೊಳೆಯಿರಿ. ಇದರಿಂದ ನೈಸರ್ಗಿಕವಾಗಿ ನಿಮ್ಮ ಮುಖದಲ್ಲಿ ಕಲೆಗಳು ನಿವಾರಣೆಯಾಗುವ ಜೊತೆಗೆ ಕಾಂತಿ ಮೂಡತ್ತದೆ.

* ಕಲೆಗಳ ನಿವಾರಣೆಗೆ ಆರೋಗ್ಯಕ್ಕೆ ಕಿತ್ತಳೆ ಹಣ್ಣಿನ ಜ್ಯೂಸ್ ಉತ್ತಮ. ಕಲೆಗಳ ನಿವಾರಣೆ ಮಾಡಬೇಕಾದರೆ ಕಲೆ ಮೂಡಿರುವ ಜಾಗಕ್ಕೆ ಕಿತ್ತಳೆ ಜ್ಯೂಸ್ ಹಚ್ಚಿ 10-15 ನಿಮಿಷ ಹಾಗೆ ಬಿಡಬೇಕು. ನಂತರ ಇದನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

* ಕಲ್ಲಂಗಡಿ ಹಣ್ಣು ಚರ್ಮ ಸಂಬಂಧಿ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿದ್ದು, ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಬೇಕು. ಹೀಗೆ ಮಾಡುತ್ತ ಬಂದರೆ ಕಲೆಗಳು ನಿವಾರಣೆಯಾಗುತ್ತವೆ.

* ಹಲವರಿಗೆ ಗಾಯದ ಕಲೆಗಳು ಸೌಂದರ್ಯಕ್ಕೆ ಅಡ್ಡಿಯಾಗಿರುತ್ತದೆ. ಅಂತವರು ಶುಂಠಿ, ಈರುಳ್ಳಿ, ಆಲೂಗಡ್ಡೆಗಳ ರಸ ಅಥವಾ ಪೇಸ್ಟನ್ನು ಕ್ರಮವಾಗಿ ಗಾಯದ ಜಾಗಕ್ಕೆ ಹಚ್ಚುತ್ತ ಬಂದರೆ ಗಾಯದ ಕಲೆ ಕಡಿಮೆಯಾಗುತ್ತದೆ.

ಈ ಮೇಲ್ಕಂಡ ಎಲ್ಲಾ ಜ್ಯೂಸ್‍ಗಳನ್ನು ಕಲೆಗಳ ಹಚ್ಚುವ ಜೊತೆಗೆ ಸೇವಿಸುತ್ತ ಬಂದರೆ, ಚರ್ಮಕ್ಕೆ ಹೊಳಪು ಮೂಡುವುದಲ್ಲದೇ ಆರೋಗ್ಯಕ್ಕೂ ಉತ್ತಮ ಪರಿಣಾಮ ಬೀರುತ್ತದೆ. (ಶುಂಠಿ, ಈರುಳ್ಳಿ, ಆಲುಗೆಡ್ಡೆ ಜ್ಯೂಸ್ ಸೇವಿಸಬೇಡಿ)

Write A Comment