ಕರಾವಳಿ

‘ಮಂಗಳೂರು ಉದ್ಯೋಗ ಮೇಳ-2015’ರಲ್ಲಿ ಭಾಗವಹಿಸುವಂತೆ ಗಲ್ಫ್ ಕಂಪೆನಿಗಳಿಗೆ ಆಹ್ವಾನ ನೀಡಿದ ಸಚಿವ ರಮಾನಾಥ ರೈ: ದುಬೈಯಲ್ಲಿ ಗಲ್ಫ್ ರಾಷ್ಟ್ರದ ಕಂಪೆನಿಗಳೊಂದಿಗೆ ಸಭೆ

Pinterest LinkedIn Tumblr

Mang udyog mela dubai_Nov 6_2015-003

ದುಬೈ: ಕರಾವಳಿ ಭಾಗದಲ್ಲಿ ನಿರುದ್ಯೋಗವನ್ನು ಹೋಗಲಾಡಿಸಿ, ವಿದ್ಯಾವಂತರಿಗೆ ಉದ್ಯೋಗವನ್ನು ದೊರಕಿಸಿಕೊಡುವ ಉದ್ದೇಶದಿಂದ ‘ಮಂಗಳೂರು ಉದ್ಯೋಗ ಮೇಳ-2015’ನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಲ್ಫ್‌ನಲ್ಲಿರುವ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸುವಂತೆ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆಹ್ವಾನ ನೀಡಿದ್ದಾರೆ.

ನವಂಬರ್ 19 ಹಾಗೂ 20ರಂದು ಮಂಗಳೂರಿನಲ್ಲಿ ನಡೆಯಲಿರುವ ‘ಮಂಗಳೂರು ಉದ್ಯೋಗ ಮೇಳ-2015’ರ ಹಿನ್ನೆಲೆಯಲ್ಲಿ ದುಬೈಯ ಹೊಟೇಲ್ ರೆಡಿಸ್ಸನ್‌ನಲ್ಲಿ ಗುರುವಾರ ಗಲ್ಫ್‌ನಲ್ಲಿರುವ ಕರಾವಳಿ ಪ್ರದೇಶದ ಉದ್ಯಮಿಗಳ ಜೊತೆ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

Mang udyog mela dubai_Nov 6_2015-002

Mang udyog mela dubai_Nov 6_2015-004

Mang udyog mela dubai_Nov 6_2015-005

Mang udyog mela dubai_Nov 6_2015-006

Mang udyog mela dubai_Nov 6_2015-007

Mang udyog mela dubai_Nov 6_2015-010

Mang udyog mela dubai_Nov 6_2015-011

Mang udyog mela dubai_Nov 6_2015-012

Mang udyog mela dubai_Nov 6_2015-013

Mang udyog mela dubai_Nov 6_2015-014

Mang udyog mela dubai_Nov 6_2015-015

Mang udyog mela dubai_Nov 6_2015-016

Mang udyog mela dubai_Nov 6_2015-017

Mang udyog mela dubai_Nov 6_2015-018

Mang udyog mela dubai_Nov 6_2015-019

Mang udyog mela dubai_Nov 6_2015-020

ಸಭೆಯಲ್ಲಿ ಕನ್ನಡ, ತುಳು, ಇಂಗ್ಲಿಷ್, ಬ್ಯಾರಿ, ಕೊಂಕಣಿ ಹೀಗೆ ವಿವಿಧ ಭಾಷೆಗಳಲ್ಲಿ ಮಾತನಾಡಿದ ಚಿವ ರಮನಾಥ ರೈ, ಎಲ್ಲಾ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮೂಲಕ ನಿರುದ್ಯೋಗದ ನಿರ್ಮೂಲನೆಗೆ ಮುಂದಾಗಿರುವ ಸರಕಾರದ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

Mang udyog mela dubai_Nov 6_2015-021

Mang udyog mela dubai_Nov 6_2015-022

Mang udyog mela dubai_Nov 6_2015-023

Mang udyog mela dubai_Nov 6_2015-024

Mang udyog mela dubai_Nov 6_2015-025

Mang udyog mela dubai_Nov 6_2015-026

Mang udyog mela dubai_Nov 6_2015-027

Mang udyog mela dubai_Nov 6_2015-028

Mang udyog mela dubai_Nov 6_2015-029

Mang udyog mela dubai_Nov 6_2015-030

Mang udyog mela dubai_Nov 6_2015-031

Mang udyog mela dubai_Nov 6_2015-032

Mang udyog mela dubai_Nov 6_2015-033

Mang udyog mela dubai_Nov 6_2015-034

Mang udyog mela dubai_Nov 6_2015-036

Mang udyog mela dubai_Nov 6_2015-038

Mang udyog mela dubai_Nov 6_2015-039

Mang udyog mela dubai_Nov 6_2015-040

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ವರ್ಷದಿಂದ ವರ್ಷಕ್ಕೆ ಗಲ್ಫ್ ಪ್ರದೇಶಗಳು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿರುವುದರಿಂದ ಇಲ್ಲಿ ಹಲವು ಉದ್ಯೋಗಾವಕಾಶಗಳಿವೆ. ಮಂಗಳೂರಿನಲ್ಲಿ ಪ್ರತೀ ವರ್ಷ 1 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ನಮ್ಮಲ್ಲಿ ಪ್ರಚಂಡ ಸಾಮರ್ಥ್ಯದ ಅಸಂಖ್ಯಾತ ಪ್ರತಿಭಾನ್ವಿತರಿದ್ದಾರೆ. ಮಂಗಳೂರು ಮಾನವ ಸಂಪನ್ಮೂಲಕ್ಕೆ ಹೆಸರಾಗಿದ್ದು, ನಾವಿದಕ್ಕೆ ಹೆಮ್ಮೆ ಪಡಬೇಕಿದೆ. ನಮ್ಮ ಯುವಕರು ಸುಲಭವಾಗಿ ಉದ್ಯೋಗ ಪಡೆಯುವಂತೆ ನಾವೊಂದು ವೇದಿಕೆ ಸೃಷ್ಟಿಸಿಕೊಡಬೇಕಿದೆ. ಆ ಕಾರಣದಿಂದ ನಾವು ಈ ಎರಡು ದಿನಗಳ ಉದ್ಯೇಗ ಮೇಳವನ್ನು ಆಯೋಜಿಸಿದ್ದೇವೆ. ಇದು ನಮ್ಮ ಜಿಲ್ಲೆಯ ಸಚಿವರಾದ ಬಿ.ರಮನಾಥ ರೈಯವರ ಕನಸಿನ ಕೂಸಾಗಿದೆ ಎಂದರು.

Mang udyog mela dubai_Nov 6_2015-042

Mang udyog mela dubai_Nov 6_2015-043

Mang udyog mela dubai_Nov 6_2015-045

Mang udyog mela dubai_Nov 6_2015-046

Mang udyog mela dubai_Nov 6_2015-047

Mang udyog mela dubai_Nov 6_2015-048

Mang udyog mela dubai_Nov 6_2015-050

Mang udyog mela dubai_Nov 6_2015-056

Mang udyog mela dubai_Nov 6_2015-057

Mang udyog mela dubai_Nov 6_2015-059

Mang udyog mela dubai_Nov 6_2015-060

Mang udyog mela dubai_Nov 6_2015-061

Mang udyog mela dubai_Nov 6_2015-062

Mang udyog mela dubai_Nov 6_2015-063

Mang udyog mela dubai_Nov 6_2015-064

Mang udyog mela dubai_Nov 6_2015-065

Mang udyog mela dubai_Nov 6_2015-067

Mang udyog mela dubai_Nov 6_2015-068

Mang udyog mela dubai_Nov 6_2015-069

Mang udyog mela dubai_Nov 6_2015-070

ಉದ್ಯೋಗ ಮೇಳ ಮಂಗಳೂರಿಗರಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ, ಇಡೀ ಕರಾವಳಿ ಪ್ರದೇಶಕ್ಕೆ ಆದ್ಯತೆ ನೀಡಲಾಗಿದೆ. ರಾಜ್ಯಾದ್ಯಂತ, ಅಷ್ಟೇ ಏಕೆ ಇತರ ರಾಜ್ಯಗಳಿಂದಲೂ ಜನರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಗಲ್ಫ್ ರಾಷ್ಟ್ರಗಳಲ್ಲಿರುವ ಕಂಪೆನಿಗಳು ಸಹ ಈ ಮೇಳದಲ್ಲಿ ಭಾಗವಹಿಸಬೇಕು. ಇದಕ್ಕೆ ಯಾವುದೇ ಶುಲ್ಕಗಳಿಲ್ಲ. ಅಷ್ಟೇ ಅಲ್ಲದೆ, ವಿದೇಶದಿಂದ ಆಗಮಿಸುವ ಕಂಪೆನಿಯ ಪ್ರತಿನಿಧಿಗಳಿಗೆ ಆಹಾರ, ವಸತಿ ಮತ್ತು ಸಾರಿಗೆ ವ್ಯವಸ್ಥೆಯನ್ನೂ ಸಹ ಜಿಲ್ಲಾಡಳಿತದ ವತಿಯಿಂದ ನೀಡಲಾಗುವುದು ಎಂದರು.

Mang udyog mela dubai_Nov 6_2015-071

Mang udyog mela dubai_Nov 6_2015-072

Mang udyog mela dubai_Nov 6_2015-073

Mang udyog mela dubai_Nov 6_2015-074

Mang udyog mela dubai_Nov 6_2015-075 Mang udyog mela dubai_Nov 6_2015-076

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪರಿಸರ ಇಲಾಖೆಯ ಕಾರ್ಯದರ್ಶಿ ರಾಮಚಂದ್ರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸಿದ್ದಪ್ಪ ಶಾಂತಪ್ಪ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸದಸ್ಯ ಡಾ.ಯು.ಟಿ.ಇಫ್ತಿಕಾರ್ ಹಾಗೂ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಚೆಯರ್‌ಮೆನ್ ಪಿಯುಸ್ ರೋಡ್ರಿಗಸ್ ಸಚಿವರ ನಿಯೋಗದಲ್ಲಿದ್ದರು.

ಈ ಮಧ್ಯೆ ವಿವಿಧ ಕಂಪೆನಿಗಳ ಸಿಇಒಗಳೊಂದಿಗೆ ಹಾಗೂ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ವೇಳೆ ಮೇಳಕ್ಕೆ ಸಂಬಂಧಿಸಿದಂತೆ ಹಲವು ಸಲಹೆ ಸೂಚನೆಗಳು ತೇಲಿ ಬಂದವು. ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹೂಡಿಕೆ ಮೇಳವೊಂದನ್ನು ಆಯೋಜಿಸಲು ಉದ್ಯಮಿಗಳು ಒತ್ತಾಯಿಸಿದರು.

ಸಭೆಯಲ್ಲಿ ಕರಾವಳಿ ಪ್ರದೇಶದ ಕೆಲ ಕಂಪೆನಿಗಳು ಮೇಳದಲ್ಲಿ ಭಾಗವಹಿಸುವುದಾಗಿ ಘೋಷಿಸಿದವು. ಸಭೆಯಲ್ಲಿ ಯುಎಒ ಮತ್ತು ಸೌದಿ ಅರೇಬಿಯಾದ ಸುಮಾರು 75 ಕಂಪೆನಿ ನಿಯೋಗಗಳು ಹಾಜರಿದ್ದವು.

Write A Comment